ಪುಟ:ಅರ್ಥಸಾಧನ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಹರಾಜಿಗೂ ಪಾಪಿಗೂ ಹೋಗಬಾರದು ದಾಗಿ ತರುವುದಕ್ಕೆ ಅನುಕೂಲ್ಯವಿಲ್ಲದಿರುವುದರಿಂದ ಅವನು ಕೊಟ್ಟುದನ್ನ ತರಬೇಕಾಗುವುದು. ಈ ರೀತಿಯಾಗಿ ಸಾಲತರುವುದರಿಂದ ಎರಡುವಿಧ ವಾದ ನಷ್ಟಗಳು ಸಂಭವಿಸುವುವು. ಆದುದರಿಂದ ಈ ವಾಡಿಕೆಯನ್ನು ಸಾಧ್ಯ ವಾದಮಟ್ಟಿಗೂ ಬಿಡುತ್ತ ಬರುವುದೇ ಉತ್ತಮವು. ಹರಾಜಿಗೂ ಪಾಪಿಗೂ ಹೋಗಬಾರದು. ನ ಕದಾಪಿಚ ಗೃಘೀಯಾತ್ ವನಾವಶ್ಯಕಂ ನರಃ | ಅನ್ಯಥಾ ಧನಹಾನಿಃ ಸ್ಯಾತ್ ದಾರಿದ್ಯ ಚಾಪಿ ಶಾಶ್ವತಂ || ಜಿಲ್ಲರೆಸಾಮಾನುಗಳನ್ನೂ ಬಟ್ಟೆಗಳನ್ನೂ ಹರಾಜುಹಾಕುವ ಸ್ಥಳ ಗಳಿಗೂ ಪಾಪುಗಳಿಗೂ ವ್ಯಾಪಾರಸ್ಥರಲ್ಲದ ಜನರು ಆವಶ್ಯಕವಾದ ಕೆಲಸ ವಿದ್ದಾಗ ಹೊರತು ಇತರ ಕಾಲಗಳಲ್ಲಿ ಹೋಗಬಾರದು. ಹರಾಜುಹಾಕುವ ಸ್ಥಳಗಳಲ್ಲಿ ಪ್ರಾಯಶಃ ಥಳಕುಮಾಡಿದ ಹಳೇ ಸಾಮಾನುಗಳ ನುಸಿಹಿಡಿದ ಅಥವಾ ಬಣ್ಣ ಹಾಕಲ್ಪಟ್ಟ ಹಳಬಟ್ಟೆಗಳ ಹರಾಜುಹಾಕಲ್ಪಡುವುವು. ಹರಾಜಿನಲ್ಲಿ ಕೊಂಡುಕೊಳ್ಳುವವನು ಒಂದುಸಲ ಲಾಭಪಡೆದರೂ ಮತ್ತೊಂ ದುಸಲವಾದರೂ ಮೋಸಹೋಗುವನು. ಇದಲ್ಲದೆ ಹರಾಜುಹಾಕತ್ಕವರು ತಮ್ಮ ಕಡೆಯಾಗಿ ಛಡದರಖಾಸ್ತು ಮಾಡುವುದಕ್ಕೆ ಏಕಾಂತವಾಗಿ ಜನರನ್ನು ಏರ್ಪಾಡುಮಾಡಿಕೊಂಡು ಹರಾಗಹಾಕುವ ಪದಾರ್ಥದ ಬೆಲೆಯು ಹೆಚ್ಚು ಗುವಂತೆ ಮಾಡಿ, ತಮಗೆ ಲಾಭಬರುವಂತೆ ದರಖಾಸ್ತು ಮಾಡಿದವನ ಬೀಟಗೆ ಬಿಡುವರು. ಹರಾಜಿನಲ್ಲಿ ಬೀಟುವರಾಡತಕ್ಕವರು ಅವರು ಮಾಡಿಕೊಂಡಿ ರುವ ಏರ್ಶರುಗಳಿಂದ ತಮಗೆ ನಷ್ಟವಾಗದಿರುವಂತೆ ನೋಡಿಕೊಂಡು ದರ ಖಾಸುಮಾಡುಬೇಕು. ಪಾಪುಗಳಲ್ಲಿ ದೇಶದೇಶಗಳಿಂದ ಬಂದಿರುವ ವಿಚಿತ್ರವಾದ ಸಾಮಾನು ಗಳು ನೋಡುವವರ ಮನಸ್ಸನ್ನು ಆಕರ್ಷಿಸುತ್ತವೆ. ಚಿಗೆ ಹೋದವರು