ಪುಟ:ಅರ್ಥಸಾಧನ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೨ ಅರ್ಥಸಾಧನ ಆಘಮಾನುಗಳನ್ನು ನೋಡಿ ಭ್ರಮಿಸಿ " ಈದಿನ ಇದನ್ನು ತೆಗೆದುಕೊಂಡು ಸುರರಟ್ಟಿದ್ದೇ ಬಂತು' ಎಂದು ಅನಾವಶ್ಯಕವಾದ ಪದಾರ್ಥಗಳನ್ನು ಕಂಡುಕೊಳ್ಳುವುದಕ್ಕೆ ಯತ್ನಿಸುವರು. ಅಂಥ ಪದಾರ್ಥವು ಇಲ್ಲದಿದ್ದರೆ ಆಗುವುದಿಲ್ಲವೇ ಎಂಬುದನ್ನು ಕೂಡ ಆಲೋಚಿಸುವುದಿಲ್ಲ. ಯಾವುದನ್ನು ಕೊಂಡುಕೊಳ್ಳಬೇಕಾದರೂ ಅದಿಲ್ಲದಿದ್ದರೆ ಮನೆಯಲ್ಲಿರುವುವುಗಳಿಂದಲೇ ಆಗಿನ ಕಲಸ ನಡೆಯುವುದಿಲ್ಲವೆ? ಖಂಡಿತವಾಗಿ ಆಗಲೇಬೇಕೆ? ಎಂಬು ದನ್ನು ಮರೆಯದೆ ಹೋಚಿಸಿ ತಿಳಿದುಕೊಳ್ಳುವವರು ಅಪೂರ, ಜನರು ಪೂರಾಪರಗಳನ್ನು ಯೋಜಿಸದೆ ಹರಾಜಿಗೂ ಪಾಪುಗಳಿಗೂ ಹೋಗಿ ಅನಾವಶ್ಯಕವಾದ ಪದಾರ್ಥಗಳನ್ನು ಕೊಂಡುಕೊಂಡು ಆವಶ್ಯಕವಾದುದಕ್ಕೆ ಕೈಯಲ್ಲಿ ದುಡ್ಡಿಲ್ಲದೆಹೋದಾಗ ಕೇಳಪಡುವರು. ಆದುದರಿಂದ ಆವಶ್ಯಕ ವಾದ ಕೆಲಸವಿದ್ದ ವೇಳೆಗಳಲ್ಲಿ ಹೊರತು ಬಾರಿಬಾರಿಗೂ ಹರಾಜಿಗೂ ಐಪಿಗೂ ಹೋಗುತಿರಬಾರದು. ಜೀತ. ಸೇವಾ ಶ್ವವೃತ್ತಿರಾಖ್ಯಾತಾ ತತಸ್ತಾಂ ಪರಿವರ್ಜಯೇತ್ | ಯಯಾಕಯಾಸ್ಯಪರಯಾ ವೃತ್ತಾ ಜೀವೇತ್ ಸದಾ ಸುಧೀಃ || ಸಾಲತಗೆದುಕೊಂಡ ರೈತಾಪಿಜನರು ಸಾಲವನ್ನು ತೀರಿಸುವವರೆಗೂ ತಾವಾಗಿ ತಮ್ಮ ಕುಟುಂಬದವರಾಗಲಿ ಅಥವಾ ಎಲ್ಲರೂ ಆಗಲಿ ಸಾಲ ಕೊಟ್ಟವನ ಬಳಿಯಲ್ಲಿದ್ದುಕೊಂಡು ವ್ಯವಸಾಯವೊದಲಾದುವುಗಳನ್ನು ಮಾಡಿಕೊಂಡಿರುವರು. ಇಂಥವರು ಜೀತಗಾರರೆಂಬುದಾಗಿ ಎನ್ನಿಸಿಕೊಳ್ಳು ವರು. ಇವರು ಯಜಮಾನನ ಭೂಮಿಯನ್ನು ಉತ್ತು ವ್ಯವಸಾಯಮಾಡಿ ಅಲ್ಲಿ ಇರುವಾರ ಆದ ದವಸ ಮೊದಲಾದುವುಗಳನ್ನೆಲ್ಲಾ ಅವನಿಗೊಪ್ಪಿಸಿ ಇವು ಜೀವನಕ್ಕಾಗಿ ಕೃತ್ಯ ಮಾಡಿಕೊಂಡಿರುವ ದವಸ ಸಂಬಳ ಮೊದ