ಪುಟ:ಅರ್ಥಸಾಧನ.djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೭೩ ಲಾದುವುಗಳನ್ನು ಮಾತ್ರ ತೆಗೆದುಕೊಂಡು ಜೀವಿಸುವರು. ತಮ್ಮ ಜೀವನ ಕಾಗಿ ಕೃಷ್ಣಮಾಡಿಕೊಂಡದ್ದು ಸಾಲದೆಹೋದರೆ ಮತ್ತೆ ಅವರ ಬಳಿಯ ಲ್ಲಿಯೇ ಸಾಲತೆಗೆದುಕೊಂಡು ಗೃಹಕೃತ್ಯಗಳನ್ನು ಮಾಡಿಕೊಳ್ಳುತ್ತಾ ಬರುವರು. ಈ ಬೇತಗಾರರು ಒಬ್ಬರ ಬಳಿಯಲ್ಲಿ ಸೇರಿದರೆ ಸಾಲತೀರಿ ಸಿಕೊಂಡು ಬಿಡುಗಡೆಯಾಗುವುದಕ್ಕೆ ಅವಕಾಶವಿಲ್ಲದ ವಂಶಪರಂಪರೆ ಯಾಗಿ ಸೇವಕ ವೃತ್ತಿಯಲ್ಲಿಯೇ ಇರಬೇಕಾಗುವುದು. ಇವರು ಬಿಡುಗಡೆ ಯಾಗಬೇಕಾದರೆ ತಮಗೆ ಯಜಮಾನನಿಂದ ಬರತಕ್ಕ ಸಂಬಳ ದವಸ ಮೊದ ಲಾದುವುಗಳಲ್ಲಿ ಮಿತವ್ಯಯ ಮಾಡಿಕೊಂಡು ಉಳಿದುದನ್ನು ಸಾಲಕ್ಕಾಗಿ ವಿನಿಯೋಗಿಸುತ್ತ ಬರಬೇಕು. ಆದರೆ ಹೀಗೆ ಮಾಡಿ. ಜೀತದಿಂದ ಬಿಡುಗಡೆಯನ್ನು ಹೊಂದುವವರೇ ಅಪೂರ್ವ; ಕೃಪವಾಗಿ ಬರುವುದನ್ನೆಲ್ಲಾ ವೆಚ್ಚ ಮಾಡಿಕೊಂಡು ಇನ್ನೂ ಹೆಚ್ಚಾಗಿ ಯಜಮಾನನ ಹತ್ತಿರ ಸಾಲಮಾಡಿ ಜೀತದಿಂದ ವಿಮುಕ್ತರಾಗು ವುದಕ್ಕೆ ಅವಕಾಶವಿಲ್ಲದಂತೆ ಮಾಡಿಕೊಳ್ಳುವವರೇ ವಿಶೇಷವಾಗಿರುವದು. ಯಜಮಾನನ ಅಥವಾ ಅವನಕಡೆಯವರ ಹಿಂಸೆಯು ಹೆಚ್ಚಾಗಿ ಕಿರಿಕಿರಿಯು ಬಹಳವಾಗಿ ಅವರಬಳಿಯಲ್ಲಿ ಜೆ' ತಮಾಡುವುದು ಬಹುಕಷ್ಟವೆಂದು ತೋರಿದ ಪಕ್ಷದಲ್ಲಿ, ಬೇತಗಾರರಾದವರು ಮತ್ತೊಬ್ಬನಲ್ಲಿ ಬೇತಕ್ಕೆ ಒಪ್ಪಿಕೊಂಡು ಸಾಲವನ್ನು ತೆಗೆದು ಮೊದಲಿನ ಯಜಮಾನನಿಗೆ ಕೊಟ್ಟು ಅವನ ಹತ್ತಿರ ಜೇತದಿಂದ ವಿಮುಕ್ತರಾಗುವುದುಂಟು. ಈ ಜೇತವು ಬಹುಕಷ್ಟತರವಾದ ವೃತ್ತಿಯು, ಜೀತಗಾರರು " ನಾವು ದುಡಿದು ಸಂಪಾದಿಸಿದುದೆಲ್ಲಾ ಯಜ ಮಾನನಿಗೆ ಸೇರುತ್ತದೆ, ನಮಗೆ ಕೃಪವಾದುದಕ್ಕಿಂತ ಹೆಚ್ಚಾಗಿ ಬರುವು ದಿಲ್ಲ, ನಾವೇಕೆ ಕಷ್ಟ ಪಡಬೇಕು? ” ಎಂಬುದಾಗಿ ಕೆಲಸಗಳಲ್ಲಿ ಉದಾಸೀನ ರಾಗುವರು. ಈ ಔದಾಸೀನ್ಯ ದಿಂದ ಯಜಮಾನನಿಗೆ ಪ್ರಯೋಜನವು ಕಡಿಮೆ ಯಾಗುವುದಲ್ಲದೆ, ದೇಶದ ಉತ್ಪತ್ತಿ ಕಡಿಮೆಯಾಗುವುದು. ಆದುದ 1Q