ಪುಟ:ಅರ್ಥಸಾಧನ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬೪ ಅರ್ಥಸಾಧನ ರಿಂದ ಯಜಮಾನನು ತನ್ನ ಜೀತಗಾರರಿಗೆ ಕೃಷ್ಣವಾಗಿ ಕೊಡತಕ್ಕ ಪಡಿ ಸಂಬಳಗಳಲ್ಲದೆ ಅವರ ಕಷ್ಟದಿಂದ ತಮಗೆ ಲಾಭವು ಹೆಚ್ಚಾಗಿ ಉಂಟು ದಾಗ ಅವರ ಕಷ್ಟಕ್ಕೆ ತಕ್ಕಷ್ಟು ಹೆಚ್ಚು ಪ್ರಯೋಜನವನ್ನೂ ಅವರಿಗೆ ತೋರಿಸಿದಹೊರತು ಬೇತವು ಲಾಭಕರವಾಗುವುದಿಲ್ಲ. ಇಂತಹ ತೊಂದರೆ ಗಳನ್ನೆಲ್ಲ ಅನುಭವಿಸುವುದಕ್ಕಿಂತ ಜನರು ಈ ಹಾಳುಜೀತಗಾರ ಪದ್ಧತಿ ಯನ್ನೇ ತಪ್ಪಿಸುವುದು ಉತ್ತಮವು. -. -->- <- - ಋಣಪರಿಹಾರ. F ಋಣಪರಿಹರಣಾದನ್ಯತ್ ನ ಹಿ ಕಷ್ಟತರಂ ಭವೇಲ್ನೋಕೇ | ಅತಏವ ಬುದ್ದಿ ಮತ್ತೋ ನ ಋಣಂ ಕುಗ್ಯು ಕದಾಚಿದಪಿ || ಮಾಡಿದ ಸಾಲವನ್ನು ತೀರಿಸುವುದಕ್ಕೆ ಋಣಪರಿಹಾರವೆಂಬುದಾಗಿ ಹೆಸರು ಎಂತಹ ದೊಡ್ಡ ಕಲ್ಲನ್ನಾದರೂ ಬೆಟ್ಟದಿಂದ ಕೆಳಕ್ಕೆ ಉರುಳಿಸು ವುದು ಬಹಳ ಸುಲಭವು , ಕೆಳಕ್ಕೆ ಉರುಳಿಸಲ್ಪಟ್ಟ ಕಲ್ಲನ್ನು ಬೆಟ್ಟದ ಮೇಲಕ್ಕೆ ತೆಗೆದುಕೊಂಡು ಹೋಗುವುದು ಕಷ್ಟವು. ಸಾಲಮಾಡುವುದು ಸುಲಭವು ; ಮಾಡಿದ ಸಾಲವನ್ನು ತೀರಿಸಿ ಋಣವಿಮುಕ್ತನಾಗುವುದು ಬಹಳ ಶ್ರಮವು. ಹೀಗಿದ್ದರೂ, ಬುದ್ಧಿವಂತನು ಗುಣವಿಮುಕ್ತನಾಗುವುದು ಅಸಾಧ್ಯವಲ್ಲ. ಕೆಲವು ನಿಯಮಗಳನ್ನು ತಪ್ಪದೆ ಅನುಸರಿಸಿದಲ್ಲಿ ಋಣ ವಿಮುಕ್ತನಾಗಬಹುದು. ಮೊದಲು ನಮ್ಮ ಆಯತಿಯನ್ನೂ ಸಾಲವನ್ನೂ ಗೊತ್ತು ಮಾಡಿಕೊಳ್ಳಬೇಕು. ಆದಾಯವನ್ನು ಗೊತ್ತು ಮಾಡುವುದರಲ್ಲಿ ನಿಯತವಾಗಿ ನಮಗೆ ಬರುವುದಕ್ಕಿಂತ ಹೆಚ್ಚಾದ ಅಂದಾಜನ್ನು ಕಟ್ಟಬಾರದು. ಗೊತ್ತಾಗಿ ಬರುವ ಆದಾಯದಲ್ಲಿ ಗೃಹಕೃತ್ಯದ ವ್ಯಯಗಳಿಗೆ ಇಷ್ಟೆಂದೂ ಸಾಲಗಳಿಗಾಗಿ ಕೊಡುವುದಕ್ಕೆ ಇಷ್ಟೆಂದೂ ನಿಷ್ಕ ರ್ಪಮಾಡಿಕೊಂಡು ಸಾಲ