ಪುಟ:ಅರ್ಥಸಾಧನ.djvu/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೃತ್ತಿಗಳ ಘನತೆ وو ವೃತ್ತಿಗಳು ಅನೇಕವಿರುತ್ತವೆ. ಅವುಗಳಲ್ಲಿ ಜನರು ತಮ್ಮ ಕಾಯಕಕ್ತಿಗೂ ಬುದ್ದಿ ಶಕ್ತಿಗೂ ತಿಳಿವಳಿಕೆಗೂ ತಕ್ಕಂತಹ ವೃತ್ತಿಗಳನ್ನು ಅವಲಂಬಿಸುವರು. ಹೀಗೆ ಅವಲಂಬಿಸುವಾಗ ಕೆಲವುವೃತ್ತಿಗಳಲ್ಲಿ ದ್ರವ್ಯವು ವಿಶೇಷವಾಗಿಯೂ, ಮತ್ತೆ ಕೆಲವುವೃತ್ತಿಗಳಲ್ಲಿ ಜೀವನಕ್ಕೆ ತಕ್ಕಷ್ಟೂ, ಇನ್ನು ಕೆಲವುವೃತ್ತಿ ಗಳಲ್ಲಿ ಕಷ್ಟದಿಂದ ಜೀವಿಸುವಷ್ಟೂ ಸಿಕ್ಕುತ್ತದೆ. ವಿಶೇಷ ದ್ರವ್ಯಾರ್ಜನೆಗೆ ಸಾಧಕಗಳಾದ ವೃತ್ತಿಗಳಲ್ಲಿ ಪ್ರವೇಕವುಂಟಾಗಬೇಕಾದರೆ ವಿಶೇಷ ದ್ರವ್ಯ ವ್ಯಯವನ್ನೂ ಕಾಯಕ್ಷೇಶ ಮನಃಕ್ಷೇಶಗಳನ್ನೂ ಅನುಭವಿಸಬೇಕಾಗು ತದೆ. ಹೀಗೆ ಮಾಡಿದವರು ಹೆಚ್ಚಾದ ದ್ರವ್ಯವನ್ನು ಸಂಪಾದಿಸಿ ಸೌಖ್ಯ ವನ್ನು ಪಡೆಯುವರು. ಅನೇಕರು ವಿಶೇಷ ವ್ಯಾರ್ಜನೆಗೆ ಸಾಧಕಗಳಾದ ವೃತ್ತಿಗಳಲ್ಲಿ ಯೋಗ್ಯತೆಯನ್ನು ಸಂಪಾದಿಸುವುದಕ್ಕೆ ತಕ್ಕ ಉಪಪತ್ತಿಯಿಲ್ಲ ದಿರುವರು. ಇನ್ನು ಕೆಲವರು ಇದಕ್ಕಾಗಿ ಕಾಯಕ್ಷೇಶ ಮನಃಕ್ಸಕಗಳನ್ನು ಅನುಭವಿಸುವುದಕ್ಕಿಂತ ಸದ್ಯಕ್ಕೆ ಸಂತೋಷಜನಕಗಳಾದ ಆಟಪಾಟಗಳಲ್ಲಿ ಕಾಲಹರಣಮಾಡೋಣವೆಂದು ಇರುವರು ; ಮತ್ತೆ ಕೆಲವರು ಇದಕ್ಕಾಗಿ ವಿಶೇಷದ್ರವ್ಯವ್ಯಯವನ್ನು ಮಾಡುವುದಕ್ಕೆ ಉಪಪತ್ತಿಯಿಲ್ಲದೆಯೂ ಕಾಯ ಕೈಕ ಮನಃಕ್ಸಕಗಳನ್ನನುಭವಿಸುವುದಕ್ಕೆ ಶಕ್ತಿಯಿಲ್ಲದೆಯೂ ಇರುವರು. ಕೊನೆಗೆ ಉಪಪತ್ತಿಯಿಲ್ಲದವರೂ, ಆಟಪಾಟಗಳಲ್ಲಿ ಕಾಲಹರಣಮಾಡಿ ದವರೂ ವಿಶೇಷಲಾಭವಿಲ್ಲದ ವೃತ್ತಿಗಳಿಂದಲಾಗಲಿ ಅತ್ಯಂತಕಷ್ಟದಿಂದ ಜೀವಿ ಸತಕ್ಕ ವೃತ್ತಿಗಳಿಂದಲಾಗಲಿ ಜೀವಿಸಬೇಕಾಗುವುದು. ಲೋಕದಲ್ಲಿ ದೊಡ್ಡ ಅಧಿಕಾರಿಗಳ ವಿಶೇಷ ಆಯತಿಯುಳ್ಳವರೂ ಹೇಗಿದ್ದರೂ ಜನರ ಗೌರವಕ್ಕೆ ಪಾತ್ರರಾಗುವರು. ಆದರೆ ಪರಿಚಾರಕ ಝಾಡಮಾಲಿ ಮೊದಲಾದವರು ತಾವು ಅವಲಂಬಿಸಿದ ವೃತ್ತಿಯನ್ನು ಶ್ರದ್ದೆ ಯಿಂದಲೂ ನಿಯತ್ತಿನಿಂದಲೂ ಮಾಡುತಬಂದರೆ ಅವರೂಕೂಡ ಜನರ ಗೌರ ವಕ್ಕೂ ಪ್ರೀತಿಗೆ ಪಾತ್ರರಾಗುವರು. ನಿಯತ್ತಿನಿಂದ ನಡೆಯತಕ್ಕ ಇತರ 9 y