ಪುಟ:ಅರ್ಥಸಾಧನ.djvu/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಮಾನವರಿಗೆ ಪ್ರಾಪಂಚಿಕ ಸುಖಸಾಧಕವಾದ ಧನವನ್ನು ಯಾವರೀತಿಯಿಂದ ಆರ್ಣಿಸಬೇಕು, ಯಾವರೀತಿಯಿಂದ ಅಭಿವೃದ್ಧಿ ಪಡಿಸಬೇಕು, ಯಾವರೀ ತಿಯಿಂದ ವ್ಯಯಮಾಡಬೇಕು, ಯಾವ ಕ್ರಮದಿಂದ ನಡೆಯದಿದ್ದರೆ ಧನವು ಆರ್ಚಿತವಾಗಲಾರದು, ಆರ್ಜಿತವಾದರೂ ವೃದ್ಧಿಯಾಗಲಾರದು, ಅಭಿವೃದ್ಧಿ ವಾದರೂ ನಷ್ಟವಾದೀತು, ಇತ್ಯಾದಿಯಾದ ವಿಷಯಗಳನ್ನು ಮನುಷ್ಯ ರೆಲ್ಲರೂ ತಿಳಿದುಕೊಳ್ಳುವದಾವಶ್ಯಕವೆಂದು ಭಾವಿಸಿ, ಇದಕ್ಕಾಗಿ ಈ ಸಣ್ಣ ಗ್ರಂಥವು ಬರೆಯಲ್ಪಟ್ಟಿತು. ಈ ಗ್ರಂಥವನ್ನು ಆಮೂಲಾಗ್ರವಾಗಿ ಪರಿಶೀಲಿಸಿದಲ್ಲಿ ಯಾವ ಮನುಷ್ಯನಿಗೂ ಧನಾರ್ಜನೆಯ ವಿಷಯದಲ್ಲಿ ಯಾವುದಾದರೂ ಒಂದು ವಿಧವಾದ ಧಾನುಸಾರಿಯಾದ ಧನಾರ್ಜನೋಪಾಯವು ಹೊಳಯದಿರಲಾರ ದಾದಕಾರಣ ಜನರು ಈ ಗ್ರಂಥವನ್ನು ಪರಿಶೀಲಿಸಿ ಇದರಲ್ಲಿರುವಂತೆ ನಡೆದುಕೊಂಡು ಧನಿಕರಾದಲ್ಲಿ ಇದಕ್ಕಿಂತಲೂ ಗ್ರಂಥಲೇಖಕನಿಗೆ ಯಾವ ಪಾರಿತೋಷಕವೂ ಬೇಕಾಗಿಲ್ಲವು. ಈ ಗ್ರಂಥದ ಪ್ರಥಮ ಮುದ್ರಣದಲ್ಲಿ ಕಾಣಬರುತ್ತಿದ್ದ ದೋಷ ಗಳನ್ನು ಶೋಧಿಸಿ ಎರಡನೆಯ ಆವೃತ್ತಿ ಮುದ್ರಿಸುವುದರಲ್ಲಿ ಲೋಕಾಂತರ ಪ್ರಾಪ್ತರಾದ ಕೀರ್ತಿಶೇಷರಾದ ವೇ| ಗುಂಡಶಾಸ್ತ್ರಿಗಳವರು ಶ್ರೀಮನ್ಮಹಾ ರಾಜರವರ ಕಾಲೇಜ್ ಕನ್ನಡ ಮತ್ತು ಸಂಸ್ಕೃತ ಪಂಡಿತರಾದ ವೇ|| ವರದಾಚಾರ್ರವರು ಇವರಿಬ್ಬರು ನನಗೆ ಬಹಳ ಸಹಾಯವನ್ನು ಮಾಡಿರು ವರು. ಇದಕ್ಕಾಗಿ ಅವರಿಗೆ ನಾನು ತುಂಬ ಕೃತಜ್ಞನಾಗಿದ್ದೇನೆ. ಮೈಸೂರು, 10 ನೇ ಮೇ 1916, | M. V.