ಪುಟ:ಅರ್ಥಸಾಧನ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವೃತ್ತಿಗಳ ಘನತೆ ದಿರುವುದೇ ಹೀಗಾಗುವುದಕ್ಕೆ ಮುಖ್ಯ ಕಾರಣವು. ಹಿಡಿದ ಕಲಸದಲ್ಲಿ ಜಾಗ್ರತೆಯಾಗಿ ಫಲೋದಯವಾಗದಿದ್ದ ಮಾತ್ರದಿಂದಲೇ ಆ ಕಲಸದಲ್ಲಿ ಫಲ ಚಿತ್ರಪ್ತಿಯಾಗುವುದಿಲ್ಲ ಎಂದು ಭಾವಿಸಕೂಡದು. ಫಲವಾಗದಿರುವುದಕ್ಕೆ ಕಾರಣಗಳು ಅನೇಕವಾಗಿರುತ್ತವೆ. ಅವುಗಳನ್ನು ಪರೀಕ್ಷಿಸಿ ಫಲಪ್ರಾಪ್ತಿಯಾ ಗುವಂತೆ ಮತ್ತೆ ಅದೇ ಕೆಲಸವನ್ನು ಮಾಡುವುದು ಶ್ರೇಯಸ್ಕರವಾದುದು. ಹೀಗೆ ಮಾಡಲ್ಪಟ್ಟ ಕಲಸವು ಫಲದಾಯಕವಾಗದಿದ್ದರೂ ಪುನಃ ಅದನ್ನೇ ಮಾಡಬೇಕು ಇದೇಪ್ರಕಾರ ಫಲೋದಾಯವಾಗುವವರೆಗೂ ಪ್ರಯತ್ನ ಮಾಡುತ್ತಿರುವವನೇ ಆದರಿಂದುಂಟಾಗತಕ್ಕ ಲಾಭವನ್ನು ಅನು ಭವಿಸುವುದಕ್ಕೆ ಅರ್ಹನು ವಿಸ್ಸುಗಳಿಗೆ ಭಯಪಟ್ಟು ಕಾರ್ಯವನ್ನು ಸಾಧಿ ಸದೆ ಬಿಡತಕ್ಕವನು ಯಾವ ವೃತ್ತಿಯಲ್ಲಿಯ ಇಷ್ಟಾರ್ಥವನ್ನು ಪಡೆಯ ಲಾರನು ಕ್ರಿಮಿ ಕೀಟಾದಿಗಳೂ ಕೂಡ ಕಾಠ್ಯ ಸಾಧನೆಯಾಗುವವರೆಗೂ ಹಿಡಿದ ಕೆಲಸವನ್ನು ಬಿಡುವುದಿಲ್ಲ. ನೋಣ ಇರುವೆ ಮೊದಲಾದುವುಗಳು ಮಧುರವಾದ ಪದಾರ್ಥಗಳರತಕ್ಕೆ ಸ್ಥಳ ದಿಂದ ಎಷ್ಟು ಸಲ ಓಡಿಸಲ್ಪಟ್ಟರೂ ಪುನಃಪುನಃ ಅದನ್ನೇ ಹಿಡಿದುಕೊಳ್ಳುವುದಕ್ಕೆ ಬರುತ್ತವೆ. ವಿಸ್ಸುಗಳಿಗೆ ಹೆದರಿ ತಮ್ಮ ಪ್ರಯತ್ನಗಳನ್ನು ಅವುಗಳು ಬಿಡುವುದಿಲ್ಲ. ಇವುಗಳಿಗಿಂ ತಲೂ ವಿಶೇಷವಾದ ತಿಳಿವಳಿಕೆಯುಳ್ಳ ಮನುಷ್ಯರು ಒಂದುವೇಳೆ ಹಿಡಿದ ಕೆಲಸಗಳು ಫಲಪ್ರದವಾಗದಿದ್ದ ಮಾತ್ರದಿಂದಲೇ ಪುನಃ ಪ್ರಯತ್ನ ಮಾಡದೆ ಸುಮ್ಮನಿರುವುದು ಸರಿಯಲ್ಲ. ವಿಷ್ಟುಗಳಿಗೆ ಭಯಪಡತಕ್ಕವರು ಎಂದಿಗೂ ಉನ್ನತಸ್ಥಿತಿಗೆ ಬರುವು ದಿಲ್ಲ. ಇದಕ್ಕೆ ದೃಷ್ಟಾಂತವಾಗಿ ಸ್ಕಾಟ್ಲಂಡಿನ ಚರಿತ್ರೆಯಲ್ಲಿ ಒಂದು ಕಥೆ ಯಿರುವುದು. ಪೂರ್ವದಲ್ಲಿ ಇಂಗ್ಲೀಷ್‌ಜನರಿಗೂ ಸ್ಕಾಟ್ಲಂಡಿನವರಿಗೂ ಪರಸ್ಪರ ಯುದ್ಧವು ನಡೆಯುತ್ತಿತ್ತು. ಸ್ಟಾಂಡ್ ದೊರೆಯಾದ ರಾಬರ್ ಬ್ರಸ್ ಎಂಬವನು ಆರುಸಲ ಯುದ್ಧ ಮಾಡಿ ಪರಾಜಿತನಾದನು, ಆ