ಪುಟ:ಅರ್ಥಸಾಧನ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಅರ್ಥಸಾಧನ ವುದಕ್ಕೆ ಕೃಷ್ಣವಾದ ಕಾಲನಿಬಂಧನೆಗಳನ್ನು ಮಾಡಿಕೊಂಡು ಅದನ್ನು ಲ್ಲಂಘಿಸದೆ ನಡೆಯಬೇಕು, ಹಿತ್ಲಾಪ. ಜಿಹ್ವಾಗ್ರೇ ವರತೇ ಲಕ್ಷ್ಮೀ ಜಿಹ್ವಾಗ್ರೇ ಮಿತ್ರಬಾನ್ಧವಾಃ | ಜಿಹ್ವಾಗ್ರೇ ರಾಜಸನ್ಮಾನೋ ಜಿಹ್ವಾಗ್ರೇ ಮರಣಂ ಧ್ರುವಂ || ಹಿತವಾಗಿ ಮಾತನಾಡುವುದು ಉದ್ಯೋಗವ್ಯಾಪಾರಗಳಿಂದ ವೃದ್ಧಿ ಹೊಂದಬೇಕೆನ್ನತಕ್ಕವರಿಗೆ ಬಹಳ ಸಹಾಯಭೂತವಾದುದು. ಮಾತು ಬಲ್ಲವರಿಗೆ ಜಗಳವಿಲ್ಲವೆಂಬುದು ಸರರಿಗೂ ಗೊತ್ತೇ ಇದೆ ಹಿತವಾಗಿಯೂ ಸರಸವಾಗಿಯೂ ಮಾತನಾಡತಕ್ಕವರು ಸುಲಭವಾಗಿ ಸಮಸ್ತವಾದ ಇಷ್ಟಾ ರ್ಥಗಳನ್ನೂ ಸಾಧಿಸುವರು, ಎಲ್ಲಾ ವಿದ್ಯೆಗಳಿಗಿಂತಲೂ ಹಿತವಾಗಿ ಮಾತನಾ ಡತಕ್ಕ ವಿದ್ಯೆಯು ಬಹಳ ಲಾಭಕರವಾದುದು. ಆದರೂ ದ್ರವ್ಯದಮೇಲೂ ಯಶಸ್ಸಿನಮೇಲೂ ದೃಷ್ಟಿಯುಳ್ಳವರು ಸರಸವಾಗಿಯ ಹಿತವಾಗಿಯೂ ಮಾತನಾಡುವ ಶಕ್ತಿಯನ್ನು ಮಾತ್ರ ಆರ್ಜಿಸಿದರೆ ಸಾಕೆಂದು ತೃಪ್ತರಾಗಕೂ ಡದು. ಸತ್ಯವಾದುದನ್ನು ಸರಸವಾಗಿಯ ಹಿತವಾಗಿಯೂ ಇರುವಂತೆ ಹೇಳಿ ಅದರಿಂದ ಲಾಭಬಂದ ಪಕ್ಷದಲ್ಲಿ ಯಾವ ದೋಷವೂ ಇಲ್ಲ. ಅವೃತವಾಗಿಯೂ ಅಹಿತವಾಗಿಯೂ ಇರತಕ್ಕುದನ್ನು ಸತ್ಯವಾಗಿಯೂ ಹಿತವಾಗಿಯೂ ಇರು ವಂತೆ ಹೇಳಿ ವಂಚನೆಮಾಡಿ ಅದರಿಂದ ಲಾಭವನ್ನು ಪಡೆಯುವುದು ಅತ್ಯಂತ ನಿಂದ್ಯವಾದುದು. ಆದುದರಿಂದ ಸತ್ಯಕ್ಕೆ ಚ್ಯುತಿಯಿಲ್ಲದೆ ಹಿತವಾಗಿ ಮಾತನಾ ಡತಕ್ಕ ಶಕ್ತಿಯನ್ನು ಸಂಪಾದಿಸಿಕೊಂಡು ಸನ್ಮಾರ್ಗದಲ್ಲಿ ಪ್ರವರ್ತಿಸಿ ನ್ಯಾಖ್ಯವಾದ ಮಾರ್ಗದಿಂದ ಸಾಧ್ಯವಾದ ಇಷ್ಟಾರ್ಥಗಳನ್ನೆಲ್ಲಾ ಆರ್ಜಿಸು ವುದರಲ್ಲಿ ಆಸಕ್ತರಾಗತಕ್ಕವರಿಗೆ ಇಹಪರಗಳೆರಡೂ ದೊರೆಯುವುವು.