ಪುಟ:ಅರ್ಥಸಾಧನ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪಾಲುಗಾರಿಕೆ ವಲುಗಾರಿಕೆ. ಏಕೇನ ಯದಸಾಧ್ಯಂ ಸ್ಯಾತ್ ತತ್ ಸಾರ್ಧ್ಯ ಬಹುಬಿರ್ಭವೇತ್ | ತತ್ರ ಸಲ್ವೇ ಸಮಾನಾಃ ಸ್ಯುಃ ಲಾಭ ನಷ್ಟೇ ಚ ಸತ್ವದಾ || ವ್ಯವಸಾಯ ವ್ಯಾಪಾರ ಮೊದಲಾದ ಅನೇಕ ಕೆಲಸಗಳಲ್ಲಿ ಕೆಲವು ಒಬ್ಬೊಬ್ಬರೇ ನಿರ್ವಹಿಸತಕ್ಕುವುಗಳಾಗಿಯೂ ಮತ್ತೆ ಕಲವು ಅನೇಕರು ಸೇರಿ ನಿರ್ವಹಿಸತಕ್ಕುವಾಗಿಯೂ ಇರುವುವು. ದೊಡ್ಡವಾಗಿಯೇ ವಿಶೇಷ ಬಂಡವಾಳವನ್ನು ಅಪೇಕ್ಷಿಸತಕ್ಕುವಾಗಿಯೂ ಇರುವ ಕೆಲಸಗಳು ಒಬ್ಬೊ ಬೃರಿಂದ ನಿರ್ವಹಿಸಲ್ಪಡುವುದಕ್ಕೆ ಆಗುವುದಿಲ್ಲ. ಈ ಕೆಲಸಕ್ಕೆ ಬೇಕಾದ ಬಂಡವಾಳವನ್ನು ಒಬ್ಬರೇ ಒದಗಿಸುವುದೂ ಕಷ್ಟ. ಇಂಥ ಸಂದರ್ಭಗಳಲ್ಲಿ ಅನೇಕರು ಸೇರಿ ಪಾಲನ್ನು ವಿಂಗಡಿಸಿಕೊಂಡು ತಮ್ಮ ಪಾಲಿಗೆ ಅನು ರೂಪವಾದ ಬಂಡವಾಳವನ್ನು ಹಾಕಿ ಕಂಪೆನಿಯನ್ನು ಮಾಡಿಕೊಂಡು ಎಲ್ಲರೂ ಮೇಲುವಿಚಾರಣೆಯನ್ನು ತೆಗೆದುಕೊಳ್ಳುತ್ತ ಬಂದ ಲಾಭವನ್ನು ವರುಷಕ್ಕೊಂದುಸಲ ಅಥವಾ ಎರಡುಸಲ ಲೆಕ್ಕಾಚಾರಮಾಡಿ ತಮಗೆ ಗೊತ್ತಾದ ಪಾಲಿನಪ್ರಕಾರ ಹಂಚಿಕೊಳ್ಳುವರು. ಈ ಯರ್ಪಾಡು ಬಹಳ ಲಾಭಕರವಾದುದು. - ವ್ಯವಸಾಯ ಕೈಗಾರಿಕೆ ಮೊದಲಾದುವುಗಳಲ್ಲಿ ಯಂತ್ರಗಳನ್ನು ಯೋಗಿಸಿ ಸಾವಿರಾರು ಜನರು ಮಾಡತಕ್ಕ ಕೆಲಸಗಳನ್ನು ಅವುಗಳಿಂದ ಸುಲ ಭವಾಗಿ ಮಾಡಿಸುವರು. ಆದರೆ ಅಂಥ ಯಂತ್ರಗಳನ್ನು ಕೊಂಡುಕೊಳ್ಳು ವುದಕ್ಕೆ ಪ್ರಥಮತಃ ಬಹುದ್ರವ್ಯವು ವಿಯೋಗಿಸಲ್ಪಡಬೇಕು. ಇಷ್ಟು ದ್ರವ್ಯವನ್ನು ಒಬ್ಬರೇ ವಿನಯೋಗಿಸಬೇಕಾದರೆ ಅಸಾಧ್ಯವಾಗುವುದು. ಬಡವರಾದರೂ ಅನೇಕರು ಪೇರುಗಳನ್ನು ಹಾಕಿ ಇಂಥ ಭಾರೀಕೆಲಸಗಳಿಗೆ ತಕ್ಕ ಏರ್ಪಾಟುಗಳನ್ನು ಮಾಡಿಕೊಂಡರೆ ತಮ್ಮ ಹಣಕ್ಕೆ ಲಾಭಬಂದು