ಪುಟ:ಅರ್ಥಸಾಧನ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆ೬ ಅರ್ಥಸಾಧನ ೨ ) ತಮಗೆ ಜೀವನವಾಗಿ ಯಂತ್ರಗಳನ್ನು ನಡೆಸತಕ್ಕೆ ಮತ್ತು ಇವುಗಳನ್ನು ಮಾಡತಕ್ಕೆ ಕಾರಖಾನೆಗಳಲ್ಲಿ ಕೆಲಸಕ್ಕೆ ಬರುವ ಲಕ್ಷಾಂತರಜನಗಳಿಗೆ ಜೀವನವುಂಟಾಗುವದಲ್ಲದೆ ಈ ಕೆಲಸಗಳಿಂದ ಉತ್ಪತ್ತಿಯು ಹೆಜ್ಜೆ ಪ್ರಜೆಗ ಗೂ ಪಾಲುದಾರರಿಗೂ ಸರ್ಕಾರಕ್ಕೂ ಅನೇಕಮುಖವಾಗಿ ಲಾಭಗಳುಂ ಟಾಗುವುವು. ನಾಗರಿಕತೆಯುಳ್ಳ ಅನೇಕ ದೇಶಗಳಲ್ಲಿ ಕಲಿಯವರು ಕೂಡ ತಾವು ಸಂಪಾದಿಸತಕ್ಕೆ ಕೊಲಿಯಲ್ಲಿ ಒಂದು ಭಾಗವನ್ನು ಸೇವಿಂಗ್ಸ್ ಬ್ಯಾಂಕು ಮೊದಲಾದುವುಗಳನ್ನಿಡುತ್ತಾ ದಿನಕ್ರಮೇಣ ಸ್ಪಲ್ಪಸ್ವಲ್ಪ ಬಂಡ ವಾಳವನ್ನು ಮಾಡಿಕೊಂಡು ಅನೇಕರು ಸೇರಿಕೊಂಡು ತಮ್ಮ ಬಂಡವಾಳ ನನ್ನೆಲ್ಲಾ ಯಾವುದಾದರೂ ಒಂದು ಲಾಭಕರವಾದ ಕೆಲಸದಲ್ಲಿ ವಿನಿಯೋ ಗಿಸಿ ತಾವೂ ಆ ಕೆಲಸದಲ್ಲಿ ವ್ಯವಸಾಯವನ್ನು ಮಾಡಿ ತಮ್ಮ ಹಣಕ್ಕೆ ಬಡ್ಡಿಯನ್ನೂ ತಾವು ಮಾಡಿದ ವ್ಯವಸಾಯಕ್ಕೆ ಸಂಬಳವನ್ನೂ ಆರ್ಜಿಸುತ್ತಾ ನಿರ್ಗತಿಕರಾಗಿದ್ದವರು ಧನಿಕರಾಗುತ್ತಲಿದ್ದಾರೆ. ವೃದ್ಧಿಗೆ ಬರುವವರೆಲ್ಲರೂ ಈರೀತಿಯಲ್ಲಿ ಪ್ರವರ್ತಿಸಿ ದರಿದ್ರಾವಸ್ಥೆಯಿಂದ ವಿಮುಕ್ತವಾಗತಕ್ಕೆ ಪಾಲು ಗಾರಿಕ ಕೆಲಸಗಳನ್ನು ಅವಲಂಬಿಸಿ ವಂಚನೆಮೊದಲಾದುವುಗಳನ್ನು ಬಿಟ್ಟಿ ವೃದ್ಧಿಗೆ ಬರುವುದರಲ್ಲಿ ಸಂಶಯವಿಲ್ಲ. ಅಭಾಸ. ಅಭ್ಯಾಸಾನು ಸರೀ ವಿದ್ಯಾ ನೃಣಾಂ ಭವತಿ ಸದಾ || ತಸ್ಮಾದ್ವದ್ಧಿಂ ಪುಮಾಸಿರ್ಚ್‌ ನಿತ್ಯಮಭ್ಯಾಸಮಾಚರೇತ್ || ಯಾವ ವೃತ್ತಿಯಲ್ಲಿ ಪ್ರವೀಣತೆಯುಂಟಾಗಬೇಕಾದರೂ ಅಭ್ಯಾಸವು ಅತ್ಯಾವಶ್ಯಕವಾಗಿ ಆಗಬೇಕು. ಯಾವ ವೃತ್ತಿಯಲ್ಲೇ ಆಗಲಿ ಅಭ್ಯಾಸವಿಲ್ಲದೆ ಒಂದೇಸಲ ಪಾಂಡಿತ್ಯವುಂಟಾಗುವುದಿಲ್ಲ. ಕೆಲಸಗಳಲ್ಲಿ ಅಭ್ಯಾಸಮಾಡುತ್ತ