ಪುಟ:ಅರ್ಥಸಾಧನ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

అభ్యాసం ತಪ್ಪುಗಳನ್ನು ತಿದ್ದಿಕೊಳ್ಳುತ್ತಿದ್ದರೆ ಕ್ರಮೇಣ ಅವುಗಳನ್ನು ಚೆನ್ನಾಗಿ ಮಾಡತಕ್ಕ ಯೋಗ್ಯತೆಯು ಬರುವುದು, ಓದು ಬರಹ ಲೆಕ್ಕಾಚಾರಗಳು ಬಂದಿದ್ದರೂ, ಸರಾರಿ ಸಾಹುಕಾರಿ ಕೆಲಸಗಳಲ್ಲಿ ಅಭ್ಯಾಸವೂ ಅನುಭ ನವೂ ಆದ ಹೊರತು ಅವುಗಳನ್ನು ಸಮರ್ಪಕವಾಗಿ ಮಾಡತಕ್ಕ ಶಕ್ತಿ ಯುಂಟಾಗುವುದಿಲ್ಲ. ಕೃಷಿ ವಾಣಿಜ್ಯಾದಿ ವೃತ್ತಿಗಳಲ್ಲಿ ನಷ್ಟವಾಗದಿರಬೇ ಕಾದರೆ ಅವುಗಳ ಮರವು ಅಭ್ಯಾಸಮಲಕವಾಗಿ ಗೊತ್ತಾಗಬೇಕು. ಹೀಗೆ ಗೊತ್ತಾಗುವುದಕ್ಕೋಸ್ಕರ ಪ, ಫ್ಲ್ಯಾರು ತಮ್ಮ ಮಕ್ಕಳಿಗೆ ಪ್ರಥ ಮತಃ ಹದಿನಾಲ್ಕು ವರುಷಗಳ ವರೆಗೂ ಓದು ಬರಹ ಲೆಕ್ಕಾಚಾರಗಳನ್ನು ಕಲಿಸಿ ಆನಂತರ ಅವರಿಗೆ ಯಾವ ವೃತ್ತಿಯಲ್ಲಿ ಒುದ್ದಿಯೊಡುವುದೋ ಅದನ್ನು ಗೊತ್ತು ಮಾಡಿಕೊಂಡು ಆ೦ಥ ವೃತ್ತಿಯಲ್ಲಿ ಪಾಂಡಿತ್ಯವುಳ್ಳವರ ಬಳಿ ಕೆಲಸವನ್ನು ಕಲಿತುಕೊಳ್ಳುವುದಕ್ಕೋಸ್ಕರ ದ್ರವ್ಯವನ್ನು ಕೊಟ್ಟು ಉಮೇದುವಾರರನ್ನಾಗಿ ಇಡುವರು. ಇವರು ಕೆಲವುವರುಷ ತಾವು ಕಲಿತು ಕೊಳ್ಳಬೇಕೆಂದಿರುವ ವೃತ್ತಿಯ ಮರಗಳನ್ನು ಚೆನ್ನಾಗಿ ತಿಳಿದುಕೊಂಡು ಯೋಗ್ಯತೆಯನ್ನು ಸಂಪಾದಿಸಿ ಯೋಗ್ಯತಾಪತ್ರಿಕೆಯನ್ನು ಪಡೆದು ಆಮೇಲೆ ಸ್ವತಂತ್ರವಾಗಿ ಜೀವಿಸುವುದಕ್ಕೆ ಉಪಕ್ರಮಿಸುವರು, ಇಂಥ ಏರ್ಪಾಡು ನಮ್ಮ ದೇಶದಲ್ಲಿ ಸಮಗ್ರವಾಗಿ ಇಲ್ಲದಿರುವುದರಿಂದ ನಾವು ಪಾಶ್ಚಾತ್ಯರಂತ ಒಳ್ಳೆಯಸ್ಥಿತಿಗೆ ಬರುವುದಕ್ಕೆ ಅವಕಾಶವಿಲ್ಲವಾಗಿದೆ. ಆದುದರಿಂದ ನಮ್ಮ ದೇಶೀಯರೂ ಪ್ರಥಮತಃ ವಿದ್ಯಾಭ್ಯಾಸವನ್ನು ಮಾಡಿ ಅನಂತರ ನಮಗೆ ಯಾವುದರಲ್ಲಿ ಆಸಕ್ತಿಯಿರುವುದೋ ಅಂಥ ವೃತ್ತಿಯನ್ನು ಅವಲಂಬಿಸಿ ಆ ವೃತ್ತಿಯಲ್ಲಿ ಪ್ರವೀಣರಾದವರಬಳಿ ಉಮೇದುವಾರರಾಗಿದ್ದುಕೊಂಡು ಅವು ಗಳನ್ನು ಅಭ್ಯಾಸಮಾಡಿ ಪಾಂಡಿತ್ಯವನ್ನು ಹೊಂದಿದರೆ ಆಯಾ ವೃತ್ತಿಗಳನ್ನು ಲಾಭಕರವಾಗುವಂತೆ ಮಾಡುವ ಯೋಗ್ಯತೆಯುಂಟಾಗುವುದು