ಪುಟ:ಅಶೋಕ.djvu/೧೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ಲM r 24, +°*// ಈ ಮೇರೆಗೆ ೭ ವರ್ಷಗಳು ಕಳೆಯಲು ಅಶೋಕಚಕ್ರವರ್ತಿಯು ಬೌದ್ಧ ಧರ್ಮದ ಈ ಅವನತಿಯನ್ನು ಕೇಳಿ ಅದನ್ನು ನಿವಾರಿಸುವದಕ್ಕಾಗಿ ಭಿಕ್ಷುಮಂಡಲಿಗೆ ಉಪೋಸಥ ಕ್ರಿಯೆಯನ್ನು ನಡೆಸುವಂತೆ ವಿಜ್ಞಾಪನೆ ಮಾಡುವದಕ್ಕಾಗಿ ಕೂಡಲೆ ಒಬ್ಬ ಮಂತ್ರಿಯನ್ನು ಅಶೋಕಾರಾಮಕ್ಕೆ ಕಳಿಸಿದನು, ಮಂತ್ರಿಯು ಎಲ್ಲ ಭಿಕ್ಷುಗಳಿಗೆ ಅರಸನ ಅಪ್ಪಣೆಯನ್ನರು ಹಿದನು. ಭಿಕ್ಷುಸಂಘವು ವಿಧರ್ಮಿಗಳೊಡನೆ ಉಪೋಸಥ ಕ್ರಿಯೆಯನ್ನು ಮಾಡುವದಕ್ಕೊ ಸ್ಪಲಿಲ್ಲ. ಇದರಿಂದ ಮಂತ್ರಿಯು ಕೋಪಾವಿಷ್ಟನಾಗಿ ಒರೆಯಿಂದ ಕತ್ತಿಯನ್ನು ಹಿರಿದು ಭಿಕ್ಷುಗಳಲ್ಲೊಬ್ಬೊಬ್ಬರನ್ನೆ ಸಂಹರಿಸಹತ್ತಿದನು. ಅರಸನ ಸೋದರನಾದ ತಿಷ್ಯನೆಂಬ ಭಿಕ್ಷುವು ಆಕಸ್ಮಿಕವಾಗಿ ಒದಗಿದ ಈ ಸಂಹಾರವಾರ್ತೆಯನ್ನು ಕೇಳಿ ಅದನ್ನು ನಿವಾರಿಸ ಬೇಕೆಂದು ಮಂತ್ರಿಯ ಎದುರಿಗೆ ಬಂದನು, ಮಂತ್ರಿಯು ಆತನನ್ನು ನೋಡಿದೊಡನೆ ಅಶೋಕಾರಾಮವನ್ನು ಬಿಟ್ಟು ಅರಸನ ಬಳಿಗೆ ಬಂದನು. ಧಾರ್ಮಿಕನಾದ ಅಶೋಕ ಮಹಾರಾಜನು ಈ ಸುದ್ದಿಯನ್ನೆಲ್ಲ ಕೇಳಿ ಅತ್ಯಂತ ವ್ಯಸನಬಟ್ಟು ತಾನೇ ಆ ವಿಹಾರಕ್ಕೆ ಬಂದು ಎಲ್ಲ ಭಿಕ್ಷುಗಳನ್ನು ಕುರಿತು ವ್ಯಾಕುಲನಾಗಿ ಈ ಭಿಕ್ಷುಹತ್ಯಾಪಾತಕವು ಯಾರಿಗೆ ಹತ್ತುವದೆಂದು ಕೇಳಿದನು. ಈ ಪಾಪವು ಅಶೋಕನಿಗೆಂದು ಕೆಲವರೂ, ಮಂತ್ರಿಗೆ ಎಂದು ಕೆಲವರೂ ಇಬ್ಬರಿಗೂ ಎಂದು ಕೆಲವರೂ ಅಭಿಪ್ರಾಯವಿತ್ತರು. ಆಗ ಅಶೋಕನು ಅವರ ಭಿನ್ನಾಭಿಪ್ರಾಯಗಳನ್ನು ಕೇಳಿ ಸಂಶಯಗೊಂಡು ನನ್ನನ್ನು ಈ ಸಂಶಯದಿಂದ ಬಿಡು ಗಡೆ ಮಾಡುವವರು ತಮ್ಮಲ್ಲಿ ಯಾರಾದರೂ ಇದ್ದಾರೆಯೇ ಎಂದು ಭಿಕ್ಷುವರ್ಗವನ್ನು ಕೇಳಿದನು. ಆಗ ಬಿಕ್ಷುಗಳು ಮೌದ್ಧಲಿಪುತ್ರ ತಿಷ್ಯನೊಬ ನು ಮಾತ್ರ ಇದರ ನಿರ್ಣಯ ಮಾಡಬಲ್ಲನೆಂದು ಉತ್ತರವಿತ್ತರು. ಅವನ ಹೆಸರನ್ನು ಕೇಳಿದೊಡನೆ ಅಶೋಕನ ಹೃದ ಯವು ಭಕ್ತಿ ಶ್ರದ್ಧೆಗಳಿಂದ ಉಕ್ಕಿ ಬಂದಿತು. ಅವನನ್ನು ಪಾಟಲಿಪುತ್ರಕ್ಕೆ ಕರೆತರಬೇ ಕೆಂದು ಎರಡು ಸಾರೆ ಜನರನ್ನು ಕಳಿಸಿದರೂ ಇವನ ಬಯಕೆಯು ಕೈಗೂಡಲಿಲ್ಲ. ಇದಕ್ಕೆ ಬೆರಗಾಗಿ ಅಶೋಕನು ಸ್ಥವಿರನು ಪಾಟಲಿಪುತ್ರಕ್ಕೆ ಬಾರದಿರುವ ಕಾರಣವೇನೆಂದು ಸಂಘವನ್ನು ಕೇಳಿದನು. ಆಗ ಸಂಘವು ಧರ್ಮಸ್ಥಾಪನೆಗಾಗಿ ಆತನ ಸಹಾಯವನ್ನು ಬೇಡಿದರೆ ಮಾತ್ರ ಆತನು ಇಲ್ಲಿಗೆ ಬರುವನು; ಇಲ್ಲವಾದರೆ ಬಾರನು ಎಂದು ಹೇಳಿತು. ಬಳಿಕ ಅರಸನು ಮತ್ತೆ ಸಾವಿರಾರು ಜನ ಅನುಚರರೊಡನೆ ತನ್ನ ಮಂತ್ರಿಗಳನ್ನು ಕಳಿಸಿ ದನು. ಅವರು ಹೋಗುವಾಗ ಅರಸನು ಸ್ಥವಿರನು ಶಿಬಿಕೆಯಲ್ಲಿ ಬರುವಂತಿಲ್ಲದಿದ್ದರೆ ನಾವೆಯಲ್ಲಿ ಕರೆದುಕೊಂಡು ಬರಬೇಕೆಂದು ಹೇಳಿಕಳುಹಿದ್ದನು. ಆತನ ಅಪ್ಪಣೆಯಂತೆ ಅವರು ತಪೋನಿರತನಾದ ಮಹಾಸ್ಥವಿರನ ಬಳಿಗೆ ಹೋಗಿ ನಮಸ್ಕರಿಸಿ ಮಹಾಪ್ರಭೋ, ಮಗಧಾಧಿಪತಿ ಮೌರ್ಯ ಅಶೋಕಚಕ್ರವರ್ತಿಯು ನಮ್ಮನ್ನು ತಮ್ಮ ಬಳಿಗೆ ಕಳುಹಿರು ವನು. ಆತನು ವಿನಯದಿಂದ ತಮ್ಮ ಪಾದಕಮಲಗಳಿಗೆ ವಿಜ್ಞಾಪಿಸಿದ್ದೇನಂದರೆ- ನಾನು ಬೌದ್ಧ ಧರ್ಮದ ಗ್ಲಾನಿಯನ್ನು ದೂರಮಾಡಬೇಕೆಂಬ ಮತ್ತು ಧರ್ಮದ ವಿಶುದ್ಧತೆಯ