ಪುಟ:ಅಶೋಕ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ///// * */ ಉ/ # / / 2 * * * * * * * * * * - -++ *, ,

  • * * - * * *-#• •→

ನ್ನುಂಟುಮಾಡಬೇಕೆಂದು ಸಂಕಲ್ಪವನ್ನು ಮಾಡಿರುವೆನು, ಈ ಸಂಕಲ್ಪವನ್ನು ಕೊನೆಗಾಣಿಸು ವದಕ್ಕೆ ತಮ್ಮ ಸಾಹಾಯ್ಯವನ್ನು ಬೇಡುವೆನು.” ಧ್ಯಾನಮಗ್ನ ನಾದ ಸ್ಥವಿರನು ಈ ವಾಕ್ಯ ವನ್ನು ಕೇಳಿದೊಡನೆ ಹೊರಡುವದಕ್ಕೆ ಒಪ್ಪಿದನು. ಇತ್ತ ಅರಸನು ದೂತಮುಖದಿಂದ ಸ್ಥವಿರನು ಬರುತ್ತಾನೆಂಬದನ್ನು ಕೇಳಿ ನಗರಶೋಭೆಯನ್ನು ಮಾಡಲಪ್ಪಣೆಯಿತ್ತು ತಾನೇ ನದೀತೀರಕ್ಕೆ ಹೋಗಿ ಅಲ್ಲಿ ಇಳಿದು ಮಹಾಭಕ್ತಿಯಿಂದ ಸ್ಥವಿರನಿಗೆ ಪ್ರಣಾಮಮಾಡಿದನು. ತನ್ನ ಬಲಹೆಗಲಮೇಲೆ ಆತನ ಭುಜವನ್ನಿರಿಸಿಕೊಂಡು ನೌಕೆಯಿಂದ ಆತನನ್ನಿಳಿಸಿ ಕೊಂಡನು. ಬಳಿಕ ಮಹಾಸಮಾರಂಭದಿಂದ ಕರೆದೊಯ್ದು ಆತನನ್ನು ರತಿವರ್ಧನ ಎಂಬ ಪ್ರಾನಾದದಲ್ಲಿ ಇಳಿಸಿದನು. ಅಶೋಕನು ತನ್ನ ಕೈಗಳಿಂದ ಆತನ ಪಾದಗಳನ್ನು ತೊಳೆದನು. ಈ ಕಾಲಕ್ಕೆ ಸ್ಥವಿರನು ತನ್ನ ದೈವಿಕ ಶಕ್ತಿಯನ್ನು ತೋರ್ಪಡಿಸಿ ಎಲ್ಲರಲ್ಲಿ ಭಕ್ತಿಯನ್ನೂ ವಿಸ್ಮಯವನ್ನೂ ಉಂಟುಮಾಡಿದನೆಂದು ಹೇಳಿದೆ. ವಿಶ್ರಾಂತಿಯನ್ನು ಹೊಂದಿದ ಬಳಿಕ ಅರಸನು ಮೆಲ್ಲನೆ ಮಂತ್ರಿಯಿಂದಾದ ಭಿಕ್ಷುಹತ್ಯೆಯ ವರ್ತಮಾನವನ್ನು ವಿವರಿಸಿ ಹೇಳಿ ಈ ಪಾಪವು ಯಾರಿಗೆ ಹತ್ತುವದೆಂದು ಕೇಳಿದನು. ಮಹಾಸ್ಟವಿರನು ಅಶೋಕನನ್ನು ಸಮಾಧಾನಪಡಿಸಿ- ಪಾಪದಲ್ಲಿ ಮನೋನಿವೇಶವಿಲ್ಲದೆ ಪಾಪವು ಹತ್ತು ವದಿಲ್ಲ. ಆದುದರಿಂದ ಈ ಪಾಪವು ನಿನಗೆ ಹತ್ತಲಾರದು. ” ಎಂದು ಹೇಳಿದನು. ಬಳಿಕ ಮೌದ್ಧಲಿಪುತ್ರ ತಿಷ್ಯನು ಅಶೋಕ ಚಕ್ರವರ್ತಿಗೆ ಬುದ್ದದೇವನ ಉಪದೇಶವನ್ನು ಹೇಳ ಹತ್ತಿದನು. ತರುವಾಯ ಏಳು ದಿವಸಗಳಲ್ಲಿ ಎಲ್ಲಕಡೆಗೆ ದೂತರನ್ನು ಕಳುಹಿ ಎಲ್ಲ ಭಿಕ್ಷು ಗಳನ್ನು ಕರೆಯಿಸಿದನು. ಭಿಕ್ಷುಗಳೆಲ್ಲ ನೆರೆದ ಮೇಲೆ ಮೌದ್ಧಲಿ ತಿಷ್ಯನೊಡನೆ ಅಶೋ ಕನು ಭಿಕ್ಷುಗಳಲ್ಲೊಬ್ಬೊಬ್ಬನನ್ನೆ ಪ್ರತ್ಯೇಕವಾಗಿ ಕರೆದು ಧರ್ಮ ವಿಷಯದಲ್ಲಿ ಅವರವರ ಮತವನ್ನು ಕೇಳಿದನು. ಅವರು “ + ಶಾಶ್ವತವಾದ ” ಮತ್ತು ಅನ್ಯಧರ್ಮದ ಬೇರೆ ಬೇರೆ ಮಾರ್ಗಗಳಿಗೇ ಬೌದ್ಧ ಧರ್ಮವೆಂದು ಹೇಳಹತ್ತಿದರು. ಅರಸನು ಈ ಬೇರೆ ಧರ್ಮದ ಭಿಕ್ಷುಗಳನ್ನು ಪತಿತರೆಂದು ಸಂಘದಿಂದ ಬಿಡುಗಡೆಮಾಡಿದನು. ಇವರ ಸಂಖ್ಯೆ ಯು ೬೦ ಸಾವಿರವಾಯಿತೆಂದು ಮಹಾವಂಶದಲ್ಲಿ ಹೇಳಿದೆ. ನಿಜವಾದ ಭಿಕ್ಷುಗಳಿಗೆ ಈ ಪ್ರಶ್ನವನ್ನು ಮಾಡಲು ಅವರು ವಿಭಾಜ್ಯವಾದವನ್ನು ಇಲ್ಲವೆ ವಿಚಾರಮೂಲಕ ಧರ್ಮವನ್ನು ವಿವರಿಸಿ ಹೇಳಿದರು. ವಿಭಾಜ್ಯವಾದವೇ ಬುದ್ದ ದೇವನ ನಿಜವಾದ ಉಪದೇಶವು, ಅದನ್ನು ತಿಳಿದು ಅಶೋಕನು ಮೌದ್ದಲಿಪುತ್ರ ತಿಷ್ಯ ನನ್ನು ಸಂಬೋಧಿಸಿ-ಯಾವದೊಂದು ಕರ್ಮದಿಂದ ಈ ಸಂಘವು ಮತ್ತೆ ಶುದ್ದಿಯನ್ನು ಹೊಂದುವಂತೆ ಇದರೆ ಹೇಳಿರಿ, ಇವರು ಅದನ್ನು ನೆರವೇರಿಸಿ ಮುಂದೆ ಉಪೋಸಥ + ಶಾಶ್ವತವಾದ ಮತ್ತು ಉಚ್ಛೇದವಾದ ಇವೆರಡೂ ಬೌದ್ಧಧರ್ಮದ ವಿರುದ್ದವಾದಂಥವು. ಬುದ್ದ ದೇವನು ಈ ಎರಡು ಮತಗಳನ್ನು ಖಂಡಿಸಿರುವನ್ನು ಶಾಶ್ವತವಾದದ ಮತವು ಎಲ್ಲ ವಸ್ತುಗಳು ನಿತ್ಯ ಮತ್ತು ಅನಾದಿ ಎಂದು ಇರುವದು: ಉಚ್ಛೇದವಾದದ ವತವು ಎಲ್ಲ ವಸ್ತುಗಳು ಧ್ವಂಸಶೀಲವಾದಂಥವು ಎಂದು ಇರುವದು.