ಪುಟ:ಅಶೋಕ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ ' ೮ MIMM+ ೧೧ನೆಯ ಅಧ್ಯಾಯ. -+96+ ಅಶೋಕನ ಧರ್ಮಪ್ರಚಾರ ಧ ) ರ್ಮಮಹಾಸಭೆಯ ಅಧಿವೇಶನವಾದ ತರುವಾಯ ಬೌದ್ಧ ಧರ್ಮವು ಮೋಡ ಹರಿದ ಚಂದ್ರನಂತೆ ಧರ್ಮ ರಾಜ್ಯದಲ್ಲಿ ಬೆಳಗಹತ್ತಿತು. ಮೊದಲು 44 ಧರ್ಮದ ಹೆಸರಿನಿಂದ ಸಂಘದಲ್ಲಿ ಸೇರಿದ ಹಲವು ದುರಾಚರಣೆಗಳು ಈಗ ಸಂಪೂರ್ಣವಾಗಿ ಇಲ್ಲದಂತಾದವು, ಧರ್ಮಸಭೆಯು ಬೌದ್ಧ ಧರ್ಮವನ್ನು ಸಂಸ್ಕರಿಸಿ ಅದರ ಘಟನೆಯನ್ನು ತಿದ್ದಿ, ಬಲವಾದ ತಳಹದಿಯ ಮೇಲೆ ಅದನ್ನು ನಿಲ್ಲಿಸಿತು. ಇದಕ್ಕೂ ಮುಂಚೆ ಬಿಂಬಿನಾರ ಮೊದಲಾದ ಅರಸರಿಂದ ಧರ್ಮಪ್ರಸಾರಕ್ಕಾಗಿ ಭಿಕ್ಷುಸಂಘವು ನಾಧ್ಯವಿದ್ದಷ್ಟು ಸಹಾಯವನ್ನು ಹೊಂದುತ್ತ ಬಂದಿತ್ತು. ಆ ಪೂರ್ವಪದ್ಧತಿಯನ್ನನುಸರಿಸಿ ಸಂಘದ ನಾಯಕನಾದ ಮೌದ್ಗಲಿಪುತ್ರ ತಿಷ್ಯನು ದೇಶವಿದೇಶಗಳಲ್ಲಿ ಧರ್ಮಪ್ರಚಾರ ಮಾಡುವದಕ್ಕಾಗಿ ಅಶೋಕಮಹಾರಾಜನ ನಾಹಾಯ್ಯವನ್ನು ಬೇಡಿದನು. ಮೊದಲೇ ಅಶೋಕನಲ್ಲಿ ಧರ್ಮಪರಾಯಣತೆಯೂ, ಬೌದ್ಧ ಧರ್ಮದ ವಿಷಯವಾಗಿ ಅತ್ಯಂತಾನು ರಾಗವೂ ತಲೆದೋರಿದ್ದು, ಕಲಿಂಗವಿಜಯದ ತರುವಾಯ ಅವನು ಬುದ್ದದೇವನ ಅಮೌಲ್ಯವಾದ ಉಪದೇಶಗಳನ್ನು ಆಚರಣೆಯಲ್ಲಿ ತರುವದಕ್ಕೆ ಪ್ರಯತ್ನಿಸುತ್ತಿದ್ದನು. ಬೌದ್ಧ ಧರ್ಮವನ್ನು ಸ್ವೀಕರಿಸಿದ ಬಳಿಕ ಆತನು ಎರಡುವರೆ ವರ್ಷಕ್ಕಿಂತ ಹೆಚ್ಚು ಕಾಲ • ಉಪಾಸಕನಾಗಿ ಇದ್ದನೆಂದು ಶಿಲಾಲಿಪಿಗಳಿಂದ ತಿಳಿಯುವದು, ಬಳಿಕ ಕ್ರಿ, ವೂ. ೨೫೯ರಲ್ಲಿ ಪಟ್ಟಾಭಿಷೇಕವಾಗಿ ೧೧ ವರ್ಷಗಳಾದ ತರುವಾಯ ಆತನು ಭಿಕ್ಷುವ್ರತವನ್ನು ಸ್ವೀಕರಿಸಿ ಧರ್ಮದ ಎಲ್ಲ ಉಪದೇಶಗಳನ್ನು ಸರಿಯಾಗಿ ಆಚರಿಸತೊಡಗಿದನು. ಈ ಕಾಲ ದಲ್ಲಿ ಸಮಗ್ರ ಭರತಖಂಡದಲ್ಲಿ ಪ್ರಚಲಿತವಾದ ದೇವೋಪಾಸನೆಯು ಅವನಿಗೆ ನಿರುಪ ಯುಕ್ತವೆಂದು ತೋರಹತ್ತಿತ್ತು. ಭಿಕ್ಷುವ್ರತವನ್ನು ಸ್ವೀಕರಿಸಿದ್ದರಿಂದ ಹುರುಪು ಬಂದಂತಾ ಗಿ ಅಶೋಕನು ಬೌದ್ಧಧರ್ಮವನ್ನು ಹಬ್ಬುಗೊಳಿಸುವದಕ್ಕಾಗಿ ತನ್ನ ವಿಶಾಲನಾಮ್ರಾಜ್ಯ ದಲ್ಲಿ ಬೇರೆ ಬೇರೆ ಕಡೆಗೆ ವಿಹಾರಗಳನ್ನೂ, ಧರ್ಮಶಾಲೆಗಳನ್ನೂ ಸ್ಥಾಪಿಸಹತ್ತಿದನು. ಪಾಟಲಿಪುತ್ರನಗರದಲ್ಲಿ ದೊಡ್ಡದೊಂದು ವಿಹಾರವನ್ನು ಕಟ್ಟಿಸುವ ಕೆಲಸವನ್ನು ಸ್ಥವಿರ *ಇಂದ್ರಗುಪ್ತನಿಗೆ ಒಪ್ಪಿಸಿದನು, ಆ ಕೆಲಸಕ್ಕೆ ಮೂರು ವರ್ಷಗಳು ಹಿಡಿದವು, ರಾಜ •ಬೌದ್ಧ ಧರ್ಮದ ಜನರಲ್ಲಿ ನಾಲ್ಕು ವರ್ಗಗಳು, ಉಪಾಸಕ, ಉಪಾಸಿಕಾ, ಭಿಕ್ಖು, ಭಿಕ್ಷುಣಿ, ಗೃಹ ಸೃಜನರಿಗೆ ಉಪಾಸಕರನ್ನು ವರು, ಇವರು ಕೇವಲ ಪ೦ಚ ಅಷ್ಟ ಶೀಲಗಳ ಅಧಿಕಾರವುಳ್ಳವರು.

  • ಮಹಾವಂಶ,

12