ಪುಟ:ಅಶೋಕ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 ಅಶೋಕ ಅಥವಾ ಪ್ರಿಯದರ್ಶಿ. ಒwwwnMowmwwwr M4 ಧಾನಿಯಲ್ಲಿದ್ದ ಈ ವಿಹಾರವು ವಿಚಿತ್ರ ಶಿಲ್ಪಕೌಶಲ್ಯವುಳ್ಳದ್ದಾಗಿಯೂ , ಮನೋಹರವಾಗಿ ಯೂ, ವಿಶಾಲವಾಗಿಯೂ ಇತ್ತು, ಅದರಿಂದ ಅದಕ್ಕೆ ಭಿಕ್ಷುಗಳು ಅಶೋಕಾರಾಮ ವೆಂದು ಹೆಸರಿಟ್ಟರು. ಈ ಸಮಯದಲ್ಲಿ ಅಶೋಕನು ಉಪಗುಪ್ತನೊಡನೆ ಹಲವು ಬೌದ್ದ ತೀರ್ಥಗಳ ಯಾತ್ರೆಯನ್ನು ಮಾಡಿ ತನ್ನ ಅತ್ಯಂತ ಧರ್ಮಾನುರಾಗವನ್ನು ವ್ಯಕ್ತಪಡಿಸಿದನು. ಏಳು ದಿನಗಳವರೆಗಿನ fದೀಪಾವಲೀ ಉತ್ಸವ, ಅಲ್ಲಲ್ಲಿ ವಿಹಾರಗಳನ್ನೂ, ಸ್ಥಂಭಗಳನ್ನೂ ನಿಲ್ಲಿಸುವದು, ಊರೂರಿಗೆ ಧರ್ಮವಿಧಿಗಳ ಪ್ರಚಾರಪಡಿಸುವದು, ಶಿಲಾಲಿಸಿಗಳಿಂದ ಧರ್ಮ ದ ಗೌರವವನ್ನು ಪ್ರಕಟಮಾಡುವದು, ಧರ್ಮದ ಪ್ರತಿಷ್ಠಾಪನೆಗಾಗಿ ಧರ್ಮ ಮಹಾಸಭೆ ಯನ್ನು ನೆರಿಸುವದು ಇವೇ ಮೊದಲಾದ ಕಾರ್ಯಗಳು ಅಶೋಕನನ್ನು ಧಾರ್ಮಿಕರಾಜ ರಲ್ಲಿ ಶ್ರೇಷ್ಟನನ್ನಾಗಿ ಮಾಡಿರುವವ, ಸಮಗ್ರ ಜಗತ್ತಿನಲ್ಲಿ ವಿಸ್ತಾರವಾಗಿ ಧರ್ಮವನ್ನು ಹಬ್ಬಿಸುವ ಭಾರವನ್ನು ಅಶೋಕನು ಮಹಾಸ್ಥವಿರ ತಿಷ್ಯನಿಗೆ ಒಪ್ಪಿಸಿದ್ದನು. ತಿಷ್ಯನು ಭರತವರ್ಷದ ಬೇರೆ ಬೇರೆ ಪ್ರದೇಶಗಳಿಗೂ,* ಭರತವರ್ಷದ ಹೊರಗಿನ ದೇಶಗಳಿಗೂ ಧರ್ಮಪ್ರಚಾರಕರನ್ನು ಕಳಿಸಿಕೊಟ್ಟಿದ್ದನು. ಅವರು ಎಲ್ಲಕಡೆ ಜ್ಞಾನ, ಧರ್ಮ, ನೀತಿ, ಪವಿ ತ್ರತೆ, ತ್ಯಾಗ, ವೈರಾಗ್ಯ ಇವುಗಳ ಉಚ್ಚಸ್ವರೂಪವನ್ನು ಪ್ರಕಟಿಸಹತ್ತಿದರು. ಈಮೇರೆಗೆ 'ಜಾತಿವರ್ಣಭೇದವಿಲ್ಲದೆ ಜನಸಾಮಾನ್ಯದಲ್ಲಿ ಧರ್ಮಪ್ರಚಾರಮಾಡಿದ ಕೆಲಸವು ಭರತ ವರ್ಷದಲ್ಲಿ ಎಲ್ಲಕ್ಕೂ ಮೊದಲು ಬುದ್ಧ ಶಿಷ್ಯರಿಂದಲೇ ಜರುಗಿತು. ಹಿಂದೂಧರ್ಮಕ್ಕೂ ಬೌದ್ಧ ಧರ್ಮಕ್ಕೂ ಭೇದವು ಈ ವಿಷಯದಲ್ಲಿಯೇ ಕಂಡು ಬರುವದು, ಹಿಂದುಶಾಸ್ತ್ರವು ಧರ್ಮದ ಉಚ್ಚ ತತ್ವಗಳನ್ನು ಅಧಿಕಾರಿಯಾದವನಿಗೆ ಮಾತ್ರ ಹೇಳಬೇಕೆಂದೂ, ಮತ್ತು ಆ ತತ್ವಗಳು ಗುರುವಿನಿಂದ ಶಿಷ್ಯನಿಗೆ ಉಪದೇಶಿಸಲ್ಪಡಬೇ ಕೆಂದೂ ಹೇಳುವದು, ಮೊದಲು ದ್ವಿಜಾತಿಯವರಲ್ಲಿ, ವಿಶೇಷವಾಗಿ ಬ್ರಾಹ್ಮಣರಲ್ಲಿ ಮಾತ್ರ ಧರ್ಮದ ಉಚ್ಚ ತತ್ವಗಳು ನಿಂತಿದ್ದವು, ಉಳಿದ ಸಾಮಾನ್ಯ ಜನಕ್ಕೆ ಅವುಗಳ ಪರಿ ಚಯವಿರಲಿಲ್ಲ. ಆದರೆ ಬೌದ್ದ ಯುಗದಲ್ಲಿ ಈ ಸಂಕುಚಿತಭಾವವು ಹೊರಟುಹೋಯಿತು. ಬೌದ್ದ ಯುಗದಲ್ಲಿ ಧರ್ಮದ ತತ್ವಗಳ ಮೇಲೆ ಒಂದೇ ಜಾತಿಯ ಅಧಿಕಾರವುಳಿಯಲಿಲ್ಲ. ಧರ್ಮವು ಎಲ್ಲ ಜನರ ಸಂಪತ್ತಿಯಾಯಿತು. ಗೌತಮನು ತಾನು ಕಂಡುಹಿಡಿದ ಮಹಾ ಸತ್ಯವನ್ನು ಗಂಭೀರಧ್ವನಿಯಿಂದ ಭರತವರ್ಷದಲ್ಲಿ ಮನೆಮನೆಗೆ ಹೋಗಿ ಉಪದೇಶಿಸಿ ದನು. ಗೌತಮನು ಬೋಧಿವೃಕ್ಷದ ಬುಡದಲ್ಲಿ ಯಾವ ನವಾಜ್ಞಾನವನ್ನು ಸಂಪಾದಿಸಿ ದನೋ ಅದನ್ನು ಜಗತ್ತಿಗೆ ದಾನಮಾಡುವದಕ್ಕಾಗಿ ಆತನು ಉರುಬಿಲ್ವದಿಂದ *ಮೃಗದಾ

  • ಮಹಾವಂಶ.
  1. ಈಗಿನ ಸಾರನಾಥವು ವಾರಣಾಸಿಯಿಂದ ೩ ಕೋಶಗಳ ಮೇಲೆ ಇರುವದು. ಬುದ್ಧದೇವನು ತನ್ನ ಯಾವದೋ ಒಂದು ಪೂರ್ವಜನ್ಮದಲ್ಲಿ ಈ ಸ್ಥಳದಲ್ಲಿ ಮೃಗದೇಹವನ್ನು ಧರಿಸಿ ಜನ್ಮವನ್ನು ಹೊಂದಿದ್ದನು.