ಅಶೋಕ ಅಥವಾ ಪ್ರಿಯದರ್ಶಿ, • ವಕ್ಕೆ ಹೋಗಿ ೬೦ ಜನ ಶಿಷ್ಯರನ್ನು ಜಾತಿವರ್ಣಭೇದವಿಲ್ಲದೆ ಆ ಮಹಾಸತ್ಯವನ್ನು ಪ್ರಚಾರಪಡಿಸಿರೆಂದು ಹೇಳಿ ದೇಶದೇಶಾಂತರಗಳಿಗೆ ಕಳಿಸಿದನು, ಮತ್ತು ಅಮರವಾಣಿ ಯಿಂದ ಅವರಿಗೆ ಉಪದೇಶಿಸಿದ್ದೇನಂದರೆ:-( ಚರಥಭಿವೇಚಾರಿಕಂ, ಬಹುಜನಹಿತಾ ಯ, ಬಹುಜನಸುಖಾಯ, ಲೋಕಾನುಕಂಪಾಯ, ಅತ್ಪಾಯ, ಹಿತಾಯ ಸುಖಾಯ, ದೇವಮನುಸ್ಪ್ಯಾನಂದೇಸೇಥ, ಭಿಕ್ಖವೇಧಮ್ಮಂ, ಪರಿಶುದ್ಧಂ, ಬ್ರಹ್ಮಚರ್ಯ೦, ಪಕಾಸೇಥ” “ ಎಲೈ ಭಿಕ್ಷುಗಳೇ ನೀವು ಮನುಷ್ಯರ ಹಿತಕ್ಕಾಗಿ, ಮಂಗಲಕ್ಕಾಗಿ, ಸುಖಕ್ಕಾಗಿ, ಜಗ ತಿನ ಸಲುವಾಗಿ, ದೇವಮನುಷ್ಯರ ಸಲುವಾಗಿ, ದಯಾವಶರಾಗಿ, ದೇಶದೇಶಗಳಲ್ಲಿ ಸಂಚಾರಮಾಡಿರಿ; ನನ್ನ ಧರ್ಮವನ್ನು ಪ್ರಚಾರಗೊಳಿಸಿರಿ; ಮತ್ತು ಎಲ್ಲಕಡೆಗೆ ಪರಿ ಶುದ್ದವಾದ ಬ್ರಹ್ಮಚರ್ಯವನ್ನು ನೆಲೆಗೊಳಿಸಿರಿ. ?” ಪೂಜ್ಯನಾದ ಬುದ್ದದೇವನ ಮುಖ ಕಮಲದಿಂದ ಹೊರಟ ಈ ಅಮೃತೋಪಮವಾಕ್ಯವು ಜಗತ್ತಿನಲ್ಲಿ ಧರ್ಮದ ಇತಿಹಾ ಸವು ಇರುವವರೆಗೆ ಜಗದ್ವಾಸಿಗಳ ಹೃದಯದ ಮೇಲೆ ಅಧಿಕಾರವನ್ನು ನಡೆಸುವದು. ಬುದ್ದದೇವನು ಯಾವ ಧರ್ಮಬೀಜವನ್ನು ಮೊಳಕೆಯೊಡೆಯುವಂತೆ ಮಾಡಿದ್ದನೋ ಅದು ಅಶೋಕನ ಪ್ರಯತ್ನ ರೂಪಜಲಸೇಚನದಿಂದ ದೊಡ್ಡ ವೃಕ್ಷವಾಯಿತು. ಅಶೋಕ ಚಕ್ರವರ್ತಿಯು ಬೌದ್ಧ ಧರ್ಮ ಪ್ರಚಾರಕ್ಕೊಸ್ಕರ ಮಾಡಿದ ಪ್ರಯತ್ನ ಗಳ ವರ್ಣನೆಯು ದ್ವೀಪವಂಶದಲ್ಲಿಯೂ, ಮಹಾವಂಶದಲ್ಲಿಯೂ ಇರುವದು. ಅದನ್ನೇ ಇಲ್ಲಿ ಕೊಡುವೆವು, ಅಶೋಕನ ಆಳಿಕೆಯಲ್ಲಿ ಕೆಳಗೆ ಹೇಳುವ ಸ್ಥಳಗಳಿಗೆ ಭಿಕ್ಷುಗಳು ಧರ್ಮಪ್ರಚಾರ ಕ್ರೋಸ್ಕರ ಕಳಿಸಲ್ಪಟ್ಟಿದ್ದರು. ಕಾಶ್ಮೀರ, ಗಾಂಧಾರ ಪ್ರದೇಶಗಳಿಗೆ ಮಹಾನ್ಧವಿರ ಮಂತಿಕನು, ಮಹಿಷಮಂಡಲಕ್ಕೆ ಅಂದರೆ ಈಗಿನ ಮೈಸೂರ ಪ್ರಾಂತಕ್ಕೆ ಸ್ಥವಿರಮಹಾ ದೇವನು, ಬನವಾಸಿಯ ಪ್ರಾಂತಕ್ಕೆ ಅಂದರೆ ಈಗಿನ ಉತ್ತರಕಾನಡಾ ಜಿಲ್ಲೆಗೆ ಸ್ಪವಿರ ರಕ್ಷಿತನು, ಮಹಾರಾಷ್ಟ್ರಕ್ಕೆ ಮಹಾಧರ್ಮರಕ್ಷಿತನು ಮತ್ತು ಯೋನರಾಜ್ಯಕ್ಕೆ ಅಂದರೆ ಯವನ ಪ್ರದೇಶಕ್ಕೆ ಮಹಾರತನು ಹೋಗಿದ್ದರು. ಹಿಮಾಲಯಪ್ರದೇಶಕ್ಕೆ ಸ್ಥವಿರ ಮಜ್ಜಿ ಮನೂ, ಕಾಶ್ಯಪನೂ, ಸುವರ್ಣಭೂಮಿ ಅಥವಾ ಈಗಿನ ಪೇಗೂ ಮೊಲಮೇನ ಗಳಿಗೆ ಸೋನ, ಉತ್ತರ ಎಂಬವರೂ, ಸಿಂಹಲಕ್ಕೆ ಮಹೇಂದ್ರನೂ ಕಳಿಸಲ್ಪಟ್ಟಿದ್ದರು. ಮೇಲೆ ಹೇಳಿದ ಪ್ರದೇಶಗಳಲ್ಲಿ ಧರ್ಮದ ಒಂದೊಂದು ಕೇಂದ್ರಸ್ಥಳವು ಸ್ಥಾಪಿಸಲ್ಪಟ್ಟಿತ್ತು. ಮೇಲೆ ಹೇಳಿದ ಭಿಕ್ಷುಗಳು ಆಯಾ ಕೇಂದ್ರಸ್ಥಳಗಳ ಆಚಾರ್ಯತ್ವವನ್ನು ವಹಿಸಿದ್ದರು. +ನಾಂಚಿಯ ಒಂದು ಸೂಪದಲ್ಲಿ ಮಜ್ಜಿನ ಮತ್ತು ಕಾಶ್ಯಪ ಇವರ ಭನ್ನಾವಶೇಷವು ಕಾದಿಡಲ್ಪಟ್ಟಿದೆ, ಮತ್ತು tಸೋನಾರನ್ನೂಪದಲ್ಲಿ ಕಾಶ್ಯಪನು ಹಿಮಾಲಯಪ್ರದೇಶದ ಆಚಾರ್ಯಸ್ಥಾನದಲ್ಲಿದ್ದನೆಂದು ಉಲ್ಲೇಖವುಂಟು. ಇದರಿಂದ ದ್ವೀಪವಂಶ ಮಹಾವಂಶ ಗಳಲ್ಲಿ ಐತಿಹಾಸಿಕ ಸತ್ಯವಿರುವದೆಂಬ ಸಂಗತಿಯು ಸ್ಪಷ್ಟವಾಗಿ ಗೊತ್ತಾಗುವದು. -+ ಇದಕ್ಕೆ ಚೈತ್ಯ ಗಿರಿಯೆಂದು ಪ್ರಾಚೀನ ನಾಮವು. ಭಿಲ್ಲಾದ ಸಮೀಪದಲ್ಲಿರುವ ಸ್ಥಾನವು, + ಇದಕ್ಕೆ ಚೈತ್ಯ ಗಿಯೆ೦ದು ಪ್ರಾಚೀನ ನಾಮವು, ↑ ಬಿಲ್ಲಾದ ಸಮೀಪದಲ್ಲಿ ಸ್ಥಾನವು.
ಪುಟ:ಅಶೋಕ.djvu/೧೦೬
ಗೋಚರ