ಪುಟ:ಅಶೋಕ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

E ಅಶೋಕ ಅಥವಾ ಪ್ರಿಯದರ್ಶಿ, ಮೇಲೆ ಹೇಳಿದ ಗ್ರಂಥಗಳಲ್ಲಲ್ಲದೆ ಶಿಲಾಲಿಪಿಗಳಲ್ಲಿಯೂ ಧರ್ಮಪ್ರಸಾರದ ಉಲ್ಲೇ ಖವುಂಟು, ಕೇರಲಪುತ್ರ, ಸತಿಯಪುತ್ರ, ಚೋಲ, ಪಾಂಡ್ಯ ದೇಶಗಳಿಗೆ ಧರ್ಮಪ್ರಸಾರ ಕ್ಯಾಗಿ ಭಿಕ್ಷುಗಳು ಕಳಿಸಲ್ಪಟ್ಟಿದ್ದರು. ಸಿರಿಯಾ, ಸಾಯರಿನ್, ಇಪಿರಾಸ, ಮಾಸಿಡೋ ನಿಯಾ ಮೊದಲಾದ ಪ್ರದೇಶಗಳಲ್ಲಿಯೂ ಅಶೋಕನ ವರ್ಚಸ್ಸು ಇತ್ತೆಂತಲೂ ಅಲ್ಲಿಗೂ ಅಶೋಕನು ಭಿಕ್ಷುಗಳನ್ನು ಧರ್ಮಪ್ರಸಾರಕ್ಕಾಗಿ ಕಳಿಸಿದ್ದನೆಂತಲೂ ಗಿರಿಲಿಪಿಗಳಿಂದ ತಿಳಿಯುವದು, ಅಶೋಕನು ಧರ್ಮವಿಧಿಗಳ ಪ್ರಸಾರಕ್ಕಾಗಿ ಭಿಕ್ಷುಗಳನ್ನು ಕಳುಹಿದ ಸಂಗತಿಯು ೨ನೆಯ ಮತ್ತು ೧೩ನೆಯ ಗಿರಿಲಿಪಿಗಳಲ್ಲಿ ಉಲ್ಲೇಖಿಸಲ್ಪಟ್ಟಿರುವದು, ಶಿಲಾ ಲಿಪಿಗಳಿಂದ ಅಶೋಕನ ಧರ್ಮಪ್ರಸಾರದ ಕೇಂದ್ರಸ್ಥಳಗಳು ಆರು ಎಂದು ಗೊತ್ತಾಗು ವದು, ಅವು:- ೧ ಮೌರ್ಯನಾಮ್ರಾಜ್ಯಕ್ಕೆ ಸೇರಿದ ಪ್ರದೇಶಗಳು. ೨ ಸಾಮ್ರಾಜ್ಯದ ಮೇರೆಗೆ ಹೊಂದಿದ ಸೀಮೆಗಳು, ಯೋನ, ಕಾಂಭೋಜ, ಗಾಂಧಾರ, ರಾಷ್ಟ್ರಕ, ಪಿಟೇನಿಕ, ಆಂಧ್ರ, ಪಚಿತ್ತ, ನಾಭಾಗ ಮೊದಲಾದ ದೇಶಗಳೂ ನಭಿಪಂಧಿ ಮೊದಲಾದ ಜಾತಿಗಳು, ವಾಸಮಾಡುವ ದೇಶಗಳೂ; ೩ ಅರಣ್ಯ ಪ್ರದೇಶ -ಈ ಪ್ರದೇಶದಲ್ಲಿ ಹಲವು ಬಗೆಯ ಕಾಡುಕುಲಗಳು ವಾಸ ವಾಗಿದ್ದವು. ೪ ದಕ್ಷಿಣಹಿಂದುಸ್ತಾನದ ಸ್ವತಂತ್ರ ರಾಜ್ಯಗಳು- ಕೇರಲಪುತ್ರ, ಸತಿಯಪುತ್ರ, ಚೋಲ, ಪಾಂಡ್ಯ ದೇಶಗಳು. ೫ ಸಿಂಹಲದೀಪ. ೬ ಮಿಸರ, ಸಿರಿಯಾ, ಸಾಯರಿನ್, ಇಪಿರಾಸ, ಮಾಸಿಡೋನಿಯಾ. ದ್ವೀಪವಂಶ ಮಹಾವಂಶಗಳಲ್ಲಿ ೨ನೆಯ, ೩ನೆಯ ಮತ್ತು ೫ನೆಯ ಕೇಂದ್ರಸ್ಥಳಗಳ ಉಲ್ಲೇಖವುಂಟು, ಅವುಗಳಲ್ಲಿ ದಕ್ಷಿಣಹಿಂದುಸ್ತಾನದ ಸ್ವತಂತ್ರರಾಜ್ಯಗಳ ಮತ್ತು ಭಾರತ ವರ್ಷದ ಹೊರಗಿನ ಪ್ರದೇಶಗಳ ಉಲ್ಲೇಖವಿಲ್ಲ. ಅಶೋಕನ ಆಳಿಕೆಯ ೬೦೦ ವರ್ಷಗಳ ತರುವಾಯ ದ್ವೀಪವಂಶವೂ, ೮೦೦ ವರ್ಷಗಳ ತರುವಾಯ ಮಹಾವಂಶವೂ ರಚಿತವಾಗಿ ರುವವೆಂದು ಹಲವರು ಹೇಳುವರು. ಬಹುಶಃ ಈ ಗ್ರಂಥಗಳ ನಿರ್ಮಾಣವಾಗುವದಕ್ಕೆ ಬಹುಕಾಲ ಮುಂಚೆಯೇ ಮಿಸರ, ಸಿರಿಯಾ, ಸಾಯರಿನ್ ಮೊದಲಾದ ಗ್ರೀಕರಾಜ್ಯಗಳು ನಷ್ಟವಾಗಿ ಹೋಗಿದ್ದವು. ಅದರಿಂದಲೇ ಆ ಗ್ರಂಥಗಳಲ್ಲಿ ಅವುಗಳ ಉಲ್ಲೇಖವಿರಲಾರದು. ಇನ್ನು ದ್ವೀಪವಂಶ ಮಹಾವಂಶಗಳು ಐತಿಹಾಸಿಕ ಪ್ರಾಮಾಣಿಕ ಗ್ರಂಥಗಳೆಂದು ಪೂರ್ವ ಖಂಡದಲ್ಲಿಯೂ ಪಶ್ಚಿಮಖಂಡದಲ್ಲಿಯೂ ಎಣಿಸಲ್ಪಟ್ಟಿದ್ದರೂ ಈ ವಿಷಯದಲ್ಲಿ ಈ ಗ್ರಂಥ ಗಳಿಗಿಂತ ಶಿಲಾಲಿಪಿಗಳ ಪ್ರಾಮಾಣ್ಯವು ಹೆಚ್ಚಾಗಿರುವದು, ದಕ್ಷಿಣಹಿಂದುಸ್ತಾನದ ತಮಿಳ ಜಾತಿಯವರಿಗೂ ಸಿಂಹಲವಾಸಿಗಳಿಗೂ ಬಹುಶಃ ಯುದ್ದಗಳು ನಡೆಯುತ್ತಿದ್ದದರಿಂದಲೂ