ಪುಟ:ಅಶೋಕ.djvu/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಡಾ, ಭಾಂಡಾರಕರ, ಭಗವಾನಲಾಲ ಇಂದ್ರಜಿ ಮೊದಲಾದವರೂ ಅಶೋಕನ ವಿಷ ಯವಾಗಿ ಪುಸ್ತಕಗಳನ್ನೂ ಲೇಖಗಳನ್ನೂ ಬರೆದಿರುವರು. ವಿಲಾಯತಿಯ ರಾಯಲ್ ಏಸಿಯಾಟಕ ಸೊಸಾಯಿಟಿ, ಬಂಗಾಲ ಏಸಿಯಾಟಿಕ್ ಸೊಸಾಯಿಟಿ, ಬೊಂಬೆ ಏಸಿಯಾಟಿಕ್ ಸೊಸಾಯಿಟಿ ಎಂಬ ಪತ್ರಿಕೆಗಳಲ್ಲಿಯೂ, ಇಂಡಿಯನ್ ಎಂಟಿಕ್ವರಿ ಎಂಬ ಮಾಸಪತ್ರಿಕೆಯಲ್ಲಿಯೂ ಮೇಲೆ ಹೇಳಿದ ಪಂಡಿತರಿಂದಲೂ, ಬೇರೆ ಜನರಿಂದಲೂ . ಹಲವು ಲೇಷಿ ಮೊದಲಾದವು ಪ್ರಕಟಿಸಲ್ಪಟ್ಟಿರುವವ, ಅಶೋಕನ ವಿಷಯವಾಗಿ ಅಲೋಚನೆ ಮಾಡಿದವರಲ್ಲಿ ವಿನ್ಸೆಂಟ್ ಸ್ಮಿಥ್ ( Vincentsmith ) ಎಂಬವರು ಮುಖ್ಯರು, ಕಳೆದ ೧೦-೧೨ ವರ್ಷಗಳಿಂದ ಅವರು ಅಶೋಕಯುಗದ ಇತಿಹಾಸದ ವಿಷಯವಾಗಿ ಬೇರೆ ಬೇರೆ ಪತ್ರಿಕೆಗಳಲ್ಲಿ ಅವಿಶ್ರಾಂತವಾಗಿ ಆಲೋಚನೆ ಮಾಡುತ್ತಿರು ವರು, ಇವರು ಎಲ್ಲಕ್ಕೂ ಮುಂಚೆ ಅಶೋಕನ ವಿಷಯವಾಗಿ ತಿಳಿಯಬೇಕಾದ ಸಂಗತಿ ಗಳನ್ನೆಲ್ಲ ಸಂಗ್ರಹಿಸಿ ಇಂಗ್ಲಿಷಿನಲ್ಲಿ ಒಂದು ಅಶೋಕನ ಜೀವನಚರಿತ್ರೆಯನ್ನು ಪ್ರಕಟ ಸಿರುವರು. ಈ ಪುಸ್ತಕವು ಹೊರಬಿದ್ದ ತರುವಾಯವೇ ಎಲ್ಲರ ದೃಷ್ಟಿಯು ಈ ವಿಷ ಯದ ಕಡೆಗೆ ಹತ್ತಿತು. ಐದುವರ್ಷಗಳಲ್ಲಿಯೇ ಆ ಪುಸ್ತಕದ ಎರಡನೆಯ ಆವೃತ್ತಿಯು ಹೊರಟಿತು, ಇವರು ಎಲ್ಲ ಅಶೋಕಶಾಸನಗಳ ಇಂಗ್ಲಿಷ ಭಾಷಾಂತರವನ್ನೂ ಪ್ರಕಟಿಸಿರುವರು. ವಿನ್ಸೆಂಟ್ ಸ್ಮಿಥರ ಪುಸ್ತಕವು ಪ್ರಕಟವಾಗುವದಕ್ಕೆ ಅ೦ ವರ್ಷ ಗಳ ಪೂರ್ವದಲ್ಲಿ ಸ್ವರ್ಗವಾಸಿ ಕೃಷ್ಣನಿಹಾರಿ ಸೇನ ಎಮ್. ಏ. ಎಂಬವರು ಬಂಗಾಲಿಯಲ್ಲಿ ಒ೦ದು ಆಶೋಕಚರಿತ್ರವನ್ನು ಬರೆದಿದ್ದರು. ಈಗ ಅದರ ೩ನೆಯ ಆವೃತ್ತಿಯು ಹೊರಟಿದೆ. ಈ ಪುಸ್ತಕವು ಪ್ರಕಟವಾದ ತರುವಾಯ ಅಶೋಕನ ಸಂಬಂಧವಾಗಿ ಹಲವು ಹೊಸ ಸಂಗತಿಗಳು ಶೋಧವಾದವು: ಮತ್ತು ಅಗುತ್ತಿರು ವವ. ಇದಲ್ಲದೆ ಹಲವು ವರ್ತಮಾನಪತ್ರ, ಮಾಸಪತ್ರಗಳಲ್ಲಿ ಅಶೋಕಚರಿತ್ರದ ಸಮಾಲೋಚನೆಯು ಮಾಡಲ್ಪಟ್ಟಿರುವರು. ಇನ್ನು ಕೆಲವರು ಅಶೋಕನ ಸಂಬಂಧ ವಾಗಿ ನಾಟಕಗಳನ್ನೂ ಬರೆದಿರುವರು. ಆದರೆ ಇವೆಲ್ಲವುಗಳಲ್ಲಿಯೂ ಎಲ್ಲಿಯ ಅಶೋ। ಕನ ಜೀವನಚರಿತ್ರವೂ, ರಾಜ್ಯಭಾರವ್ಯವಸ್ಥೆಯ ಬೇರೆ ಐತಿಹಾಸಿಕಸಂಗತಿಗಳೂ ವಿಸ್ತಾರವಾಗಿ ಆಲೋಚಿಸಲ್ಪಟ್ಟಿಲ್ಲ. ಆದದರಿಂದ ಸದ್ಯಕ್ಕೆ ಉಪಲಬ್ದವಾಗಿರುವ, ಅಶೋ ಕನ ಜೀವನಚರಿತ್ರೆಗೆ ಸಂಬಂಧಪಟ್ಟ ಎಲ್ಲ ಸಂಗತಿಗಳನ್ನೂ, ಅಶೋಕಯುಗದ ಬೇರೆ ಐತಿಹಾಸಿಕ ವಿಷಯಗಳನ್ನೂ ಸೇರಿಸಿ ಅಶೋಕಯುಗದ ಇತಿಹಾಸರೂಪವಾದ ಈ ಗ್ರಂಥವ ಒರೆಯಲ್ಪಟ್ಟಿದೆ.