ಪುಟ:ಅಶೋಕ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

F ಅಶೋಕ ಅಥವಾ ಪ್ರಿಯದಶಿ. -+Moo.townMow ಮರಣದ ತರುವಾಯ ಅಭಯವೂ, ಆತನ ತರುವಾಯ ಅಭಯನ ಸೋದರಿಯ ಮಗ. ನಾದ ಪಾಂಡುಕಾಭಯನೂ ಎಪ್ಪತ್ತು ವರ್ಷ ರಾಜ್ಯವಾಳಿದರು, ಪಾಂಡುಕಾಭಯನ ಮಗನಾದ ಮೂಟಾಸಿವನು ಅರುವತ್ತು ವರ್ಷ ನಿರಾತಂಕವಾಗಿ ರಾಜ್ಯವಾಳಿದನು. ಮೂಟಾಸಿವನಿಗೆ ಹತ್ತು ಜನ ಮಕ್ಕಳು. ಎರಡನೆಯ ಮಗನು ( ದೇವಪ್ರಿಯ 2 ತಿಷ್ಯನು. ಮೂಟಾಸಿವನ ಮರಣದ ತರುವಾಯ -ಳೂ-೩೦೯ರಲ್ಲಿ ತಿಷ್ಯನು ಸಿಂಹಲದ ರಾಜಪಟ್ಟದ ಮೇಲೆ ಕುಳಿತಿದ್ದನು. ಈತನು ಅಶೋಕ ಚಕ್ರವರ್ತಿಯ ಸಮಕಾಲದವನು, ಈತನ ಕಾಲ ದಲ್ಲಿಯೇ ಧರ್ಮಪ್ರಚಾರಕ್ಕೆ ಮಹೇಂದ್ರನು ಸಿಂಹಲಕ್ಕೆ ಹೋಗಿದ್ದನು. ಸಿಂಹಲದಲ್ಲಿ ಬೌದ್ಧ ಧರ್ಮ ಪ್ರಸಾರವಾಗುವ ಮುಂಚೆ ತಿಷ್ಯನು ಬಹುಮೂಲ್ಯವಾದ ಕಾಣಿಕೆಗಳೊಡನೆ ಅಶೋಕನ ಬಳಿಗೆ ನಾಲ್ಕು ಜನ ರಾಯಭಾರಿಗಳನ್ನು ಕಳುಹಿದ್ದನು. ತಿಷ್ಯ ಮಹಾರಾಜನ ಅಣ್ಣನ ಮಗನಾದ ಮಹಾಅರಿಷ್ಟನು ಅವರಲ್ಲೊಬ್ಬನಾಗಿದ್ದನು. ಅರಿಷ್ಟನ ಸಂಗಡ ವಿದ್ವಾಂಸನಾದ ಒಬ್ಬ ಬ್ರಾಹ್ಮಣನೂ ಒಬ್ಬ ರಾಜಮಂತ್ರಿಯೂ, ಒಬ್ಬ ಲೆಕ್ಕಿಗ ( ಕಾರಕೂನ ) ನೂ ಬಂದಿದ್ದರು, ಇವರು ಜಂಬುಕೋಲಾದಲ್ಲಿ ಹಡಗವನ್ನೇರಿ ೧೫ ದಿವಸಗಳ ತರುವಾಯ ತಾಮ್ರಲಿಸ್ತಿ ಬಂದರಕ್ಕೆ ಬಂದಿದ್ದರು. ಮುಂದೆ ಅವರು ಪಾಟ ಲಿಪುತ್ರಕ್ಕೆ ಬಂದು ರಾಜಸಭೆಗೆ ಹೋಗಿ ತಿಷ್ಯನು ಕಳುಹಿದ ಕಾಣಿಕೆ ಮೊದಲಾದವುಗ ಳನ್ನು ಮಗಧಾಧಿಪತಿಗೆ ಅರ್ಪಿಸಿದರು. ಅಶೋಕ ಮಹಾರಾಜನು ಕಾಣಿಕೆಗಳನ್ನು ಸ್ವೀಕ ರಿಸಿ ರಾಯಭಾರಿಗಳಿಗೆ ತಕ್ಕ ಮರ್ಯಾದೆಯನ್ನು ಮಾಡಿದನು. ಅವನು ಅರಿಷ್ಟನಿಗೆ ಸೇನಾ ಪತಿಯೆಂದೂ ಬ್ರಾಹ್ಮಣನಿಗೆ ಪುರೋಹಿತನೆಂದೂ ಮಂತ್ರಿಗೆ ದಂಡನಾಯಕನೆಂದೂ ಲೆಕ್ಕಿಗ ನಿಗೆ ಶ್ರೇಷ್ಠಿ ಯೆಂದೂ ಉಪಾಧಿಗಳನ್ನು ಕೊಟ್ಟನು. ಬಳಿಕ ಅವರಿಗೆ ಉಡುಗೊರೆಗಳನ್ನು ಕೊಟ್ಟು ಹೇಳಿದ್ದೇನಂದರೆ-ತಾವು ಸಿಂಹಲರಾಜನ ಬಳಿಗೆ ಹೋಗಿ ( ಅಶೋಕನು ಬುದ್ದ, ಧರ್ಮ, ಸಂಘ ಎಂಬ ರತ್ನತ್ರಯದ ಆಶ್ರಯ ಮಾಡಿರುವನು. ಆತನು ಬುದ್ಧದೇವನು ತೋರಿಸಿದ ಧರ್ಮವನ್ನವಲಂಬಿಸಿರುವನು. ಸಿಂಹಲರಾಜನೂ ಭಕ್ತಿನಿಷ್ಟೆಗಳಿಂದ ಈ ಧರ್ಮವನ್ನು ಅವಲಂಬಿಸಬೇಕೆಂದೂ ಅದರಿಂದ ಶಾಂತಿಯನ್ನೂ ಸಂತೋಷವನ್ನೂ ಹೊಂದಬೇಕೆಂದೂ ಆತನ ಬಯಕೆಯುಂಟು ಎಂದು ಹೇಳಿರಿ.” ಎಂದು ಹೇಳಿದನು. ಈ ರಾಯಭಾರಿಗಳು ಐದು ತಿಂಗಳು ಪಾಟಲೀಪುತ್ರದಲ್ಲಿದ್ದು ತಾಮ್ರಲಿಪ್ತಿಯಲ್ಲಿ ಮತ್ತೆ ಹಡಗವನ್ನೇರಿ ಸಿಂಹಲಕ್ಕೆ ತಿರುಗಿಹೋದರು. ಮಹೇಂದ್ರನಿಂದಲೇ ಸಿಂಹಲದಲ್ಲಿ ಬೌದ್ಧ ಧರ್ಮವು ಪ್ರಚಾರಗೊಳಿಸಲ್ಪಟ್ಟಿತೆಂದು ಈ ಮೊದಲೇ ಹೇಳಿದೆಯಷ್ಟೆ; ಮಹಾ ವಂಶದಲ್ಲಿ ಹೇಳಿದ್ದೇನಂದರೆ ಈ ಮಹೇಂದ್ರನು ಸಾಗರಾಂಕಿತವಾದ ಭರತವರ್ಷಕ್ಕೆ ಭಾವಿಚಕ್ರವರ್ತಿಯೆಂದು ಮಗಧದಲ್ಲಿ ಮಾನ್ಯನಾಗಿದ್ದನು. ಇವನು ತಂದೆಯ ಪ್ರಿಯ ಪುತ್ರನೆಂದು ಇತಿಹಾಸದಲ್ಲಿ ಹೇಳಿದೆ. ಆದರೆ ಇಂಥವನು ಸನ್ಯಾಸವನ್ನು ಸ್ವೀಕರಿಸಿ ಯೌವ ನದಲ್ಲಿ ಭಿಕ್ಷುವಾಗಿ ಸಮಗ್ರಸಿಂಹಲದಲ್ಲಿ ಬೌದ್ಧಧರ್ಮವನ್ನು ಪಸರಿಸಿದನು. ಈ ಮಹೇಂದ್ರನ ಜೀವನವೃತ್ತಾಂತದ ಕೆಲವು ಅಂಶವನ್ನು ಇಲ್ಲಿ ಹೇಳುವೆವು, ಉಜ ಯಿನಿಯ