ಪುಟ:ಅಶೋಕ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೬ MAAAAAAAAAAA/\\nt ••••••• ಶ್ರೇಷ್ಟಿಯ ಮಗಳಾದ ದೇವಿಯ ಹೊಟ್ಟೆಯಲ್ಲಿ ಮಹೇಂದ್ರನೂ ಸಂಘಮಿತ್ರೆಯೂ ಹುಟ್ಟಿದರೆಂದು ಪ್ರವಾದವುಂಟು, ಕೆಲವರು ಮಹೇಂದ್ರನು ಅಶೋಕನ ತಮ್ಮನೆಂದು ಹೇಳುವರು. ಆದರೆ ಮಹಾವಂಶದ ಮತದಲ್ಲಿ ಅವನು ಅಶೋಕನ ಮಗನು. ಅಶೋ ಕನು ಮಗಧರಾಜ್ಯಭಾರವನ್ನು ಸ್ವೀಕರಿಸುವದಕ್ಕೆ ಮುಂಚೆ ಉಜ್ಜಯಿನಿಯ ಮದುವೆಯ ಸುದ್ದಿಯನ್ನು ಪ್ರಕಟಪಡಿಸಿರಲಿಲ್ಲ. ಬಳಿಕ ಮಹೇಂದ್ರನನ್ನೂ ಸಂಘಮಿತ್ರೆಯನ್ನೂ ಪಾಟ ಲಿಪುತ್ರಕ್ಕೆ ಕರೆಸಿಕೊಂಡು ಧರ್ಮನೀತಿಗಳ ಶಿಕ್ಷಣವನ್ನು ಅವರಿಗೆ ಕೊಡಿಸಿದನು. ಮಹಾ ವಂಶದಲ್ಲಿ ಈ ಮೇರೆಗೆ ವರ್ಣನೆಯುಂಟು:-ಯಾವಾಗ ಸಮಗ್ರ ಭಾರತದಲ್ಲಿ ೪೦೦೦ ವಿಹಾರಾದಿಗಳನ್ನು ಕಟ್ಟುವ ಕೆಲಸವನ್ನು ಮುಗಿಸಿದ ಸುದ್ದಿಯು ಅಶೋಕನಿಗೆ ಮುಟ್ಟಿ ತೋ ಆಗ ಆತನು ಆನಂದಸಾಗರದಲ್ಲಿ ಓಲಾಡಿ ರಾಜಧಾನಿಯಲ್ಲಿ ಪ್ರಕಟಿಸಿದ್ದೇನಂದರೆ-- ಇದೇ ದಿವಸದಿಂದ ೭ನೆಯ ದಿವಸ ಮುಗಿಯುವವರೆಗೆ ಸಮಗ್ರ ರಾಜ್ಯದಲ್ಲಿ ಪ್ರತಿಯೋಜಿ ನಕ್ಕೂ ( ಮಹಾದಾನಮಹೋತ್ಸವವು ” ನಡೆಯಬೇಕು; ರಾಜಮಾರ್ಗಗಳನ್ನೂ, ವಿಹಾ ರಾದಿಗಳನ್ನೂ ಶೃಂಗರಿಸಬೇಕು, ಎಲ್ಲ ಜನರು ವಿಹಾರಗಳೊಳಗಿನ ಭಿಕ್ಷುಗಳಿಗೆ ಯೋಗ್ಯ ತಾನುಸಾರವಾಗಿ ದಾನಮಾಡಬೇಕು; ದೀಪಮಾಲೆಗಳಿಂದಲೂ ಹೂಮಾಲೆಗಳಿಂದಲೂ ಗ್ರಾಮನಗರಗಳನ್ನು ಶೃಂಗರಿಸಬೇಕು; ಸಂಗೀತಾದಿಗಳಿಂದ ರಾಜಧಾನಿಯಲ್ಲಿ ಉತ್ಸವ ವನ್ನು ಮಾಡಬೇಕು; ೭ನೆಯ ದಿವಸ ಅರಸನು ಪರಿವಾರದೊಡನೆ ರಾಜಮಾರ್ಗದಲ್ಲಿ ಹೊರಹೊರಡುವನು. ಈ ಏಳು ದಿವಸ ಎಲ್ಲರೂ ಶುಚಿರ್ಭೂತರಾಗಿದ್ದು ಬುದ್ಧದೇವನು ಹೇಳಿದ ಧರ್ಮತತ್ವಗಳನ್ನು ಸಮಾಧಾನದಿಂದ ಶ್ರವಣಮಾಡಬೇಕು, ಏಳನೆಯ ದಿವಸ ವಿಹಾರಗಳಲ್ಲಿ ದಾನಮಾಡಬೇಕು. ” ಎಲ್ಲರೂ ರಾಜನ ಆಜ್ಞೆಯನ್ನು ಪಾಲಿಸಿದರು. ಆನಂದೋತ್ಸವದಿಂದಲೂ ಧರ್ಮಾನುಷ್ಠಾನದಿಂದಲೂ ಮಗಧರಾಜ್ಯವು ದೇವಲೋಕ ದಂತೆ ಮೆರೆಯಿತು. ಅಶೋಕನು ೭ನೆಯ ದಿವಸ ದೊಡ್ಡ ಸಮಾರಂಭದಿಂದ ರಾಜಮಾರ್ಗ ದಲ್ಲಿ ಹೊರಟನು, ಮಂತ್ರಿಗಳಲ್ಲಿ ಕೆಲವರು ಕುದುರೆಗಳ ಮೇಲೂ, ಕೆಲವರು ಆನೆಗಳ ಮೇಲೂ ಕುಳಿತಿದ್ದರು. ಅಶೋಕನು ಮುಖ್ಯ ಭಿಕ್ಷುವಾದ ಮೌದ್ಗಲಿಪುತ್ರ ತಿಷ್ಯನ ಪಾದಗಳ ಮೇಲೆ ಬಿದ್ದು ಆ ಭಿಕ್ಷುಸಂಘದ ನಡುವೆ ಹೋಗಿ ಕುಳಿತುಕೊಂಡನು, ಅಸಂಖ್ಯ ಭಿಕ್ಷುಗಳೂ ಭಿಕ್ಷುಣಿಗಳೂ ಆಗ ಪ್ರಸನ್ನ ರಾಗಿ ಚಕ್ರವರ್ತಿಗೆ ದಿವ್ಯಶಕ್ತಿಯನ್ನು ಕೊಟ್ಟರು. ಆ ಶಕ್ತಿಯ ಮಹಿಮೆಯಿಂದ ಅಶೋಕನು ತಾನು ಸ್ಥಾಪಿಸಿದ ೮೪ ಸಾವಿರ ವಿಹಾರಗಳು ಸಮುದ್ರಾಂಕಿತವಾದ ಭಾರತದ ಬೇರೆ ಬೇರೆ ಸ್ಥಳಗಳಲ್ಲಿ ಉತ್ಸವದಿಂದ ಶೋಭಿಸುತ್ತಿರುವ ದನ್ನು ಪ್ರತ್ಯಕ್ಷವಾಗಿ ನೋಡಿದನು. ಅಶೋಕನು ಆಗ ಆನಂದದಿಂದ ಬುದ್ಧದೇವನ ಧರ್ಮದಲ್ಲಿ ಯಾವ ದಾನವ ಶ್ರೇಷ್ಠವಾದದ್ದು ? ಎಂದು ಸಂಘಕ್ಕೆ ಕೇಳಿದನು. ಆಗ ಸಂಘವು (“ ಮಹಾರಾಜರೇ, ಬುದ್ದದೇವನ ಕಾಲದಲ್ಲಿ ಸಹ ತಮ್ಮಂಥ ದಾನಶೀಲರು ಇರ ಲಿಲ್ಲ” ಎಂದು ಅಂದಿತು. ಅಶೋಕನು ಸಂಘದ ಈ ಪ್ರಶಂಸಾವಾಕ್ಯವನ್ನು ಕೇಳಿ ಪುಲ .ಕಿತನಾಗಿ ಮತ್ತೆ-೧ ಇಂಥ ದಾನಮಾಡಿ ಯಾರಾದರೂ ಬೌದ್ಧಧರ್ಮದ ನಿಜವಾದ 13