ಪುಟ:ಅಶೋಕ.djvu/೧೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. MM • -: •• • •

  • * * - * 2 -

- • • • • •••••••••••• ಮಹೇಂದ್ರನು ತಂಗಿಯೊಡನೆ ತಾಯಿಯ ದರ್ಶನಕ್ಕಾಗಿ ಉಜ್ಜಯಿನಿಯಲ್ಲಿರುವ ಚೈತ್ಯಗಿ ರಿಗೆ ಹೋಗಿದ್ದನು. ಮಹೇಂದ್ರನು ಅಲ್ಲಿ ಕೆಲವು ದಿವಸ ವಾಸಮಾಡಿ ತಥಾಗತದೇವನ ಅಮೂಲ್ಯವಾದ ಉಪದೇಶಗಳನ್ನು ಪ್ರಚಾರಪಡಿಸಹತ್ತಿದನು. ತಾಯಿಯು ಮಗನ ಮತ್ತು ಆತನ ಸಂಗಡಿಗರ ಗೈರಿಕ ವಸ್ತ್ರಗಳನ್ನು ನೋಡಿ ಪುಲಕಿತಳಾದಳು, ಮತ್ತು ಪಟ್ಟ ಣದ ಬಳಿಯಲ್ಲಿ ಕಟ್ಟಿಸಿದ ಚೈತ್ಯವಿಹಾರವೆಂಬ ವಿಹಾರದಲ್ಲಿ ಅವರನ್ನು ಇಳಿಸಿದಳು, ಅದೇ ವಿಹಾರದಲ್ಲಿಯೇ ತನ್ನ ಮಗನ ಬಾಯಿಯಿಂದ ದೇವಿಯು ಬೌದ್ಧಧರ್ಮದ ಅಪೂರ್ವವೂ ಮನೋಹರವೂ ಆದ ವ್ಯಾಖ್ಯಾನವನ್ನು ಕೇಳಹತ್ತಿದಳು, ಅಲ್ಲಿ ಮಹೇಂದ್ರನು ೧ ತಿಂಗಳಿ ಗಿಂತ ಹೆಚ್ಚು ಕಾಲ ವಾಸಮಾಡಿ ನಾಲ್ಕು ಜನ ಸ್ಪವಿರರೂ ಬೇರೆ ಭಿಕ್ಷುಗಳೂ ಇವ ರೊಡನೆ ಸಿಂಹಲಕ್ಕೆ ಪ್ರಯಾಣ ಬೆಳೆಸಿದನು. ಮುಂದೆ ಸಿಂಹಲದ ಮಿಶ್ರಪರ್ವತಕ್ಕೆ ಮಹೇಂದ್ರನು ಬಂದನು. ಅಕಸ್ಮಾ ತಾಗಿ ಸಿಂಹಲಾಧಿಪತಿಯಾದ ದೇವಪ್ರಿಯ ತಿಷ್ಯನು ಸಾವಿರಾರು ಅನುಚರರೊಡನೆ ಬೇಟೆಗಾಗಿ ಅದೇ ದಿವಸ ಆ ಪರ್ವತಕ್ಕೆ ಬಂದಿದ್ದನು. ಮಹೇಂದ್ರನು ಬೇಟೆಯ ಸಲು ವಾಗಿ ಅನುಚರರನ್ನು ದೂರಬಿಟ್ಟು ಒಬ್ಬನೇ ಬಂದಿರುವ ಅರಸನನ್ನು ನೋಡಿ ಆತನ ಸಮೀಪಕ್ಕೆ ಹೋಗಿ ಆತನನ್ನು ತಿಷ್ಯನೇ ' ಎಂದು ಕೂಗಿದನು. ದೇವಪ್ರಿಯ ತಿಷ್ಯನು ಸಿಂಹಲದ ರಾಜಾಧಿರಾಜನು; ಆ ದೇಶದ ಯಾವ ಮನುಷ್ಯನೂ ಆತನನ್ನು ಶಿಷ್ಯನೆಂದು ಕರೆಯುವದು ಅಸಂಭವವು, ಆ ನಿರ್ಜನ ಪ್ರದೇಶದಲ್ಲಿ ಅಕಸ್ಮಾತ್ತಾಗಿ • ತಿಮ್ಮ' ಎಂಬ ಶಬ್ದವನ್ನು ಕೇಳಿದೊಡನೆ ಸಿಂಹಲಾಧಿಪತಿಯು ಬೆರಗಾಗಿ ನಿಂತನು. ಬಳಿಕ ಮಹೇಂದ್ರನು ಆತನಿಗೆ ಆಶ್ವಾಸನೆ ಕೊಟ್ಟು ತಾನು ಜಂಬೂದ್ವೀಪದಿಂದ ಬಂದಿರುವದನ್ನು ಹೇಳಿದನು. ತಿಷ್ಯನು ಆತನ ಈ ಮಾತನ್ನು ಕೇಳಿದೊಡನೆ ಸಮಾಧಾನ ಹೊಂದಿದನು, ಕ್ರಮದಿಂದ ತಿಮ್ಮನ ಅನುಚರರೂ ಮಹೇಂದ್ರನ ಸಂಗಡ ಬಂದ ಭಿಕ್ಷುಗಳೂ ಅಲ್ಲಿಗೆ ಬಂದರು. ತಿಷ್ಯನು ಮಹೇಂದ್ರನ ಸಂಗಡಿಗರ ಗೈರಿಕ ವಸ್ತ್ರಗಳನ್ನು ನೋಡಿ ಇವರು ಯಾರು ? ಎಂದು ಕೇಳಿದನು. ಮಹೇಂದ್ರನು ಅವರ ವ್ರತವನ್ನೂ ಉದ್ದೇಶವನ್ನೂ ವಿವರಿಸಿ ಹೇಳಿದ ಬಳಿಕ ತಿಷ್ಯನು ಧನುರ್ಬಾಣಗಳನ್ನು ನೆಲದಮೇಲಿಟ್ಟು ಮಹೇಂದ್ರನ ಪಾದಗಳಿಗೆ ನಮ ಸ್ಮಾರಮಾಡಿದನು, ತಿಷ್ಯನು ಮಹೇಂದ್ರನ ಗೈರಿಕ ವಸ್ತ್ರ ಧರಿಸಿದ ತೇಜಃಪುಂಜ ದೇಹವನ್ನು ನೋಡಿ ಭಾರತವರ್ಷದಲ್ಲಿ ಇಂಥ ವೇಷವುಳ್ಳವರು ಎಷ್ಟು ಜನರಿರುವರು ? ಎಂದು ಕೇಳಿ ದನು. ಆಗ ಮಹೇಂದ್ರನು ಗೈರಿಕ ವಸ್ತ್ರಗಳಿಂದ ಭಾರತವರ್ಷವು ಮುಚ್ಚಿಹೋಗಿ ಕಂಗೊ ಳಿಸುತ್ತಿರುವದು; ಬುದ್ಧ ಶಿಷ್ಯರು ಅಸಂಖ್ಯರಿರುವರು; ಎಂದು ಹೇಳಿದನು. ಬಳಿಕ ಸಿಂಹಲಾಧಿಪತಿಯಾದ ತಿಷ್ಯನು ಅಶೋಕಮಹಾರಾಜನ ವಾಣಿಯನ್ನು ಸ್ಮರಿಸಿ ಬಹಳ ಆದರದಿಂದ ಅವರ ಸತ್ಕಾರಮಾಡಿದನು, ಕ್ರಮದಿಂದ ಮಹೇಂದ್ರನು ಬುದ್ಧದೇವನ ಪವಿತ್ರ ಜೀವನವನ್ನೂ ಶಾಂತಿದಾಯಕವಾದ ಉಪದೇಶವನ್ನೂ ವಿವರಿಸಲು ಎಲ್ಲರೂ ಸಂತುಷ್ಟ ರಾದರು. ಈ ಕಾಲದಲ್ಲಿಯೇ ಸಿಂಹಲದ ಮಹಾಮೇಘವೆಂಬ ಸುಪ್ರಸಿದ್ಧ ಉದ್ಯಾನವ