ಪುಟ:ಅಶೋಕ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.



೧೦೨

ಅಶೋಕ ಅಥವಾ ಪ್ರಿಯದರ್ಶಿ.

ಸತ್ವರ ಸ್ಮಾರಕಸ್ತೂಪಗಳು ಅಲ್ಲಿ ಇದ್ದವೆಂದು ಚೀನ ಪ್ರವಾಸಿಗಳು ಉಲ್ಲೇಖಿಸಿದ್ದಾರೆ. ಪಟ್ಟಣದ ಪೂರ್ವಕ್ಕೆ ಅರ್ಧ ಹರದಾರಿಯ ಮೇಲೆ ಸಂಘಾರಾಮಪರ್ವತವಿತ್ತು. ಈ ಪರ್ವ ತವನ್ನು ಕೊರೆದು, ಭಿಕ್ಷುಗಳ ವಾಸಕ್ಕಾಗಿ ಗುಹೆಗಳನ್ನು ನಿರ್ಮಿಸಿದ್ದರು. ಈ ಆರಾಮದ ಬಾಗಿಲಿಗಿದ್ದ ಒಂದು ಇಳುಕಲನ್ನು ದಾಟಿ ಹೊವೇನ್‌ತ್ಸಾಂಗನು ಆ ಗುಹೆಗಳಲ್ಲಿ ಪ್ರವೇಶಿ ಸಿದ್ದನು. ಉಪಗುಪ್ತನು ಈ ಮಾರ್ಗವನ್ನು ಮಾಡಿಸಿದ್ದನು. ಹ್ಯವೇನ್‌ತ್ಸಾಂಗನ ವಿವರಣೆಯನ್ನೊದಲು ಮಥುರೆಯು ಒಂದು ಮುಖ್ಯವಾದ ಬೌದ್ದ ಕ್ಷೇತ್ರವಿತ್ತೆಂದೂ, ಇದೇ ಉಪಗುಪ್ತನ ಲೀಲಾಭೂಮಿಯೆಂದೂ ತಿಳಿಯುವದು. ಹೀನಯಾನಸಂಪ್ರದಾಯದವರಿಗೆ ಉಪಗುಪ್ತನ ವಿಷಯವು ತಿಳಿದಿರಲಿಲ್ಲ. ಉಪಗುಪ್ತನು ಹದಿನೇಳನೆಯ ವರ್ಷ ಭಿಕ್ಷುಧರ್ಮವನ್ನು ಸ್ವೀಕರಿಸಿ, ೨೦ನೆಯ ವರುಷ ಅರ್ಹತ್ರ್ಯವನ್ನು ಹೊಂದಿದನು. ಮಹಾಯಾನ ಗ್ರಂಥದಲ್ಲಿ ಉಪಗುಪ್ತನು ಬುದ್ದದೇವನ ಮಹಾಪರಿನಿರ್ವಾ ಣವಾದ ನೂರು ವರ್ಷಗಳ ತರುವಾಯ ಅಶೋಕನ ಕಾಲದಲ್ಲಿ ಇದ್ದನೆಂದು ಹೇಳಿರು ವದು. ಹೂವೇನ್‌ತ್ಸಾಂಗನ ಪ್ರವಾಸವೃತ್ತಾಂತದಲ್ಲಿ:-ಉಪಗುಪ್ತನು ಸಂಘಾರಾಮ ಪರ್ವತದ ಉತ್ತರದಲ್ಲಿ ಇಪ್ಪತ್ತು ಸೂಟು ಎತ್ತರವಾಗಿಯೂ, ಮೂವತ್ತು ಸೂಟು ವಿಶಾಲ ವಾಗಿಯೂ ಇರುವ ಒಂದು ಕಲ್ಲಿನ ಕಟ್ಟಡದಲ್ಲಿ ಧರ್ಮೋಪದೇಶಮಾಡುತ್ತಿದ್ದನೆಂದು ವರ್ಣಿಸಲ್ಪಟ್ಟಿದೆ. ಆತನು # ಅಲಕ್ಷಣ ಬುದ್ಧನೆಂದು ಭಿಕ್ಷುಗಳಲ್ಲಿ ಸಮ್ಮಾನಿತನಾಗಿದ್ದನು. ಬೌದ್ಧ ಗುರುವಾವ ಉಪಗುಪ್ತನ ಮುಖಮಂಡಲದಲ್ಲಿ ಅಮಾನುಷವಾದ ಪ್ರತಿಭೆ, ತೀಕ್ಷ್ಯ ಬುದ್ದಿ, ಅತಿಶಯ ತೇಜಸ್ವಿತೆ ಇವು ಒಡೆದು ಕಾಣುತ್ತಿದ್ದವು, ಈತನು ಧರ್ಮಾನುರಾಗ ದಿಂದ ಸ್ಥವಿರt ಸನವಾಸಗುರುವಿನ ಬಳಿಗೆ ಬರಲು ಆಗ ಆತನು- ವತ್ಸಾ, ಚಿತ್ತಶುದ್ದಿ ಯು ಧರ್ಮಸಾಧನದ ಮೂಲವು, ನಿನ್ನ ಮನಸಿನಲ್ಲಿ ಕೆಟ್ಟ ವಿಚಾರವು ಬಂದಾಗ, ನೀನು ಒಂದು ಪಾತ್ರೆಯಲ್ಲಿ ಒಂದು ಕರಿಯ ಹರಳನ್ನು ಹಾಕು; ಮತ್ತು ಒಳ್ಳೆಯ ವಿಚಾರವು ಬಂದಾಗ ಅದೇ ಪಾತ್ರೆಯಲ್ಲಿ ಒಂದು ಬಿಳಿಯ ಹರಳನ್ನು ಹಾಕು, ಬೆಳಗ್ಗೆ ಎದ್ದ ಕೂಡಲೆ ಆ ಪಾತ್ರೆಯಲ್ಲಿಯ ಹರಳುಗಳನ್ನು ತೆಗೆದುಕೊಂಡು ಯಾವ ಬಣ್ಣದ ಹರಳುಗಳು ಹೆಚ್ಚಾ ಗಿವೆ, ನೋಡುತ್ತ ಹೋಗು ” ಎಂದು ಹೇಳಿದನು. ಮೊದಲನೆಯ ದಿವಸ ಬಹುತರ ಕರಿಯ ಹರಳುಗಳಿಂದಲೇ ಪಾತ್ರೆಯು ತುಂಬಿದೆಯೆಂದು ಕಂಡುಬಂತು. ಎರಡನೆಯ ದಿವಸ ನೋಡುತ್ತಾನೆ, ಬಿಳಿಯಬಣ್ಣದ ಹರಳುಗಳು ಮೊದಲನೆಯ ದಿವಸಕ್ಕಿಂತ ಸ್ವಲ್ಪ ಹೆಚ್ಚಿಗೆ ಆಗಿವೆ. ಈ ಪ್ರಕಾರ ಏಳನೆಯ ದಿವಸ ನೋಡಲು, ಪಾತ್ರೆಯು ಬಿಳಿಯ ಹರಳುಗಳಿಂದಲೇ ತುಂಬಿತ್ತು; ಈ ರೀತಿಯಿಂದ ಉಪಗುಪ್ತನ ಚಿತ್ತಶುದ್ದಿಯಾದದ್ದನ್ನು ಕಂಡು, ಸನವಾಸನು ಆತನನ್ನು ಶಿಷ್ಯನನ್ನಾಗಿ ಮಾಡಿಕೊಂಡನು, ಮತ್ತು ಅವನಿಗೆ ಧರ್ಮೋಪದೇಶವನ್ನು

  1. ಚಿಹ್ನೆ (ಲಕ್ಷಣಗಳಿಲ್ಲದ; ಬುದ್ದದೇವನ ಶರೀರದಲ್ಲಿ ೩೨ ಮಹಾಪುರುಷ ಲಕ್ಷಣಗಳಿದ್ದವಂತೆ. t Edgin Chinese Buddhisip.

36