ಪುಟ:ಅಶೋಕ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೦೩ ryvy, vvvvvvvv // Jv 'v y•v YY ** * *****

    • - **
  • /• • •°vvv

ಮಾಡಿದನು. ಸ್ವಲ್ಪ ದಿವಸಗಳಲ್ಲಿ ಉಪಗುಪ್ತನು ಶೋತಾಪತ್ತಿ ಫಲವನ್ನು ಹೊಂದಿ ದನು. ಉಸಗುಪ್ತನ ಕೀರ್ತಿಯನ್ನು ಕೇಳಿ, ಒಮ್ಮೆ ಒಬ್ಬ ಸುಂದರಿಯಾದ ವಾರಾಂಗನೆಯು ತನ್ನ ಬಳಿಗೆ ಬರುವದಕ್ಕೆ ಆತನಿಗೆ ಆಮಂತ್ರಣ ಕಳಿಸಿದಳು. ಉಪಗುಪ್ತನು ಅದಕ್ಕೆ ಒಪ್ಪ ಲಿಲ್ಲ. ಮಥುರೆಯ ಒಬ್ಬ ತರುಣ ಶ್ರೀಮಂತನು ಈ ವೇಶ್ಯಯ ರೂಪಲಾವಣ್ಯಗಳಿಗೆ ಮರುಳಾಗಿ ಅವಳ ಮನೆಗೆ ದಿನಾಲು ಬರುತ್ತಿದ್ದನು. ಕೆಲವು ದಿವಸಗಳಾದ ತರುವಾಯ ಮತ್ತೊಬ್ಬ ಶ್ರೀಮಂತನಾದ ಪ್ರವಾಸಿಯು ಬಹುಮೂಲ್ಯವಾದ ಮುತ್ತು, ರತ್ನ ಮೊದಲಾದ ವುಗಳನ್ನು ತೆಗೆದುಕೊಂಡು ಈ ವೇಶ್ಯಾಸ್ತ್ರೀಯ ಮನೆಗೆ ಹೋದನು. ಆ ಪಾಪಿಷ್ಠೆಯು ದ್ರವ್ಯಲೋಭದಿಂದ ಆ ಪ್ರವಾಸಿಗೆ ಮರುಳಾಗಿ, ದಿನಾಲು ಬರುವ ತರುಣನನ್ನು ಮಧ್ಯ ರಾತ್ರಿಯಲ್ಲಿ ಕೊಂದು ಹೆಣವನ್ನು ಅಂಗಳದಲ್ಲಿ ಹುಗಿದಳು. ಆ ತರುಣನ ಬಳಗದವರು ಶೋಧಮಾಡುತ್ತ ಈ ವಾರಾಂಗನೆಯ ಮನೆಗೆ ಬಂದರು. ಅವಳ ಮುಖವಿಕಾರವನ್ನು ನೋಡುತ್ತಿರಲು ಅವರಿಗೆ ಸಂಶಯವು ಬರಲು ಅವರು ಮನೆಯ ಸುತ್ತಲು ಶೋಧ ಮಾಡುತ್ತ ಮಾಡುತ್ತ ಅಂಗಳದಲ್ಲಿ ಮಣ್ಣನ್ನು ಅಗಿದು ಹೆಣವನ್ನು ಹೊರಗೆ ತೆಗೆದರು. ಅರಸನು ಈ ಕೂರವಾದ ಕೊಲೆಯನ್ನು ಕೇಳಿ, ಆ ಚಾರೆಯ ಕಿವಿ-ಮೂಗುಗಳನ್ನು ಕೊಯ್ಲಿ ಪಟ್ಟಣದಿಂದ ಹೊರಗೆ ಹಾಕಿಸಿದನು. ರಾಜಸೇವಕರು ಅವಳನ್ನು ಒಂದು ಅರ ಣ್ಯದಲ್ಲಿ ಒಯ್ದು ಬಿಟ್ಟರು. ಉಪಗುಪ್ತನು ಸಂಚಾರ ಮಾಡುತ್ತ ಮಾಡುತ್ತ ಆ ಅರಣ್ಯಕ್ಕೆ ಒಮ್ಮೆ ಬಂದನು. ಆ ವಾರಾಂಗನೆಯ ಈ ವಿಕಾರವನ್ನು ನೋಡಿ, ಅವಳನ್ನು ಕೇಳಿ, ಎಲ್ಲ ಸಂಗತಿಯನ್ನು ತಿಳಿದುಕೊಂಡನು. ಆ ವೇಶ್‌ಗೆ ಉಪಗುಪ್ತನ ಗುರುತು ಹತ್ತಲು ಅವಳು:- ನಾನು ಸುಂದರಿಯಾಗಿದ್ದಾಗ ನನ್ನ ಬಳಿಗೆ ಬರಬೇಕೆಂದು ನಿಮಗೆ ಎಷ್ಟೇ ಪ್ರಾರ್ಥನೆ ಮಾಡಿಕೊಂಡೆನು. ಆಗ ನೀವು ಆ ಪ್ರಾರ್ಥನೆಗೆ ನಿರಾಕರಣ ಮಾಡಿದಿರಿ. ಈಗ ರಾಜಾ ಜೈಯಿಂದ ನನ್ನ ಕಿವಿಮೂಗುಗಳು ಕೊಯ್ಯಲ್ಪಟ್ಟಿವೆ. ಈ ನನ್ನ ಅಮಂಗಲವಾದ ಕುರೂ ಪವನ್ನು ನೋಡಿ ಎಲ್ಲರೂ ನನ್ನನ್ನು ಬಿಟ್ಟಿರುವರು. ನನಗೆ ಈಗ ಮರಣವು ಸಮೀಪಿಸಿದೆ. ಈಗ ನನ್ನ ಬಳಿಗೆ ಬರಲು ಫಲವೇನು ? ಎಂದು ಅಂದಳು, ಅದಕ್ಕೆ ಉಪಗುಪ್ತನು:- ನಿನ್ನ ಕಲ್ಪನೆಯಂತೆ ನಾನು ಯಾವ ದುಷ್ಟವಾಸನೆಯಿಂದಲೂ ನಿನ್ನ ಬಳಿಗೆ ಬಂದಿಲ್ಲ, ನಿನ್ನ ಈಗಿನ ಮನಸ್ಸಿನ ಸ್ಥಿತಿಯನ್ನು ತಿಳಿಯಲು ಬಂದಿರುವೆನು. ಆದರೆ ಈಗಲೂ ನೀನು ಕಾಲ ಕೂಟ ತುಂಬಿದ ಪಾತ್ರೆಯಂತೆ ನನಗೆ ತೋರುತ್ತೀಯೆ. ನಿನ್ನಲ್ಲಿ ಸೌಂದರ್ಯವಿತ್ತೆಂಬದು ನಿಜ, ಆದರೆ ಆ ಸೌಂದರ್ಯವೆಂಬ ಬೆಂಕೆಯಲ್ಲಿ ಎಷ್ಟೋ ಕಾಮಮೋಹಿತರಾದ ತರುಣ ರೆಂಬ ಪತಂಗಗಳು ಬಿದ್ದು ಭಸ್ಮವಾಗಿರಬಹುದು, ನಿಜವಾದ ಜ್ಞಾನವುಳ್ಳವರು ನಿನ್ನ ಸಹ

  1. ಯಾವ ಅವಸ್ಥೆಗೆ ಬರಲು ಮನುಷ್ಯ ನಿಗೆ ಏಳು ಜನ್ಮಗಳಾದ ಬಳಿಕ ನಿರ್ವಾಣವು ದೊರೆಯುವ ಮೋ, ಆ ಅವಸ್ಥೆ,