ಪುಟ:ಅಶೋಕ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧ov ಅಶೋಕ ಅಥವಾ ಪ್ರಿಯದರ್ಶಿ, ವಾಸದಿಂದ ಯಾವ ಆನಂದವನ್ನೂ ಹೊಂದಲಾರರು. ದೇಹದ ಸೌಂದರ್ಯವು ಸ್ಥಿರವಲ್ಲ. ಕುಷ್ಠರೋಗಗ್ರಸ್ತನಾದ ರೋಗಿಯಂತೆ ನೀನು ಈಗ ಪೀಡೆಯಿಂದ ವ್ಯಾಕುಲಳಾಗಿ ಪಶ್ಚಾತ್ತಾಪ ಬಡುತ್ತಿರುವೆ. ದುರ್ಮಾರ್ಗಕ್ಕೆ ಈ ಶೋಚನೀಯವಾದ ಪರಿಣಾಮವು ಒದಗತಕ್ಕದ್ದೇ ಸರಿ, ಎಂದು ಹೇಳಿದನು. ಉಪಗುಪ್ತನ ಉಪದೇಶ ಪೂರ್ಣವಾದ ಈ ತಿರಸ್ಕಾರದ ನುಡಿಗಳನ್ನು ಕೇಳಿ, ಆ ವಾರಾಂಗನೆಯ ಧರ್ಮನೇತ್ರವು ತೆರೆಯಿತು. ಮನೋವಾಕ್ಕಾಯಗಳಿಂದ ಅವಳು ಮುಕ್ತಿಮಾರ್ಗವನ್ನು ಹಿಡಿಯುವದಕ್ಕೆ ಏಕಾಗ್ರತೆ ಯನ್ನು ಸ್ವೀಕರಿಸಿದಳು. ಅತ್ಯಂತವಾದ ಇಚ್ಛಾಶಕ್ತಿಯ ಬಲದಿಂದ ಅವಳ ಹೃದಯವು ನಿರ್ಮಲವಾಯಿತು. ಉಪಗುಪ್ತನು ಯೌವನದ ಮದದಲ್ಲಿಯೇ ಕ್ಷಣಭಂಗುರವೂ, ದುಃಖಪೂರ್ಣವೂ ಆದ ಜಗತ್ತಿನ ವ್ಯಾಪಾರಗಳನ್ನು ನೋಡಿ ಸಂಸಾರದ ಭೋಗಗಳಲ್ಲಿ ವಿರಕ್ತನಾಗಿ ( ಅನಾಗಾಮಿ” ಪದವನ್ನು ಹೊಂದಿದನು. ಇದೇ ನಿರ್ವಾಣದ ಪೂರ್ವಸ್ಥಿತಿಯು, ಉಪಗು ಹೈನು ಸನವಾಸನ ಬಳಿಗೆ ಹೋದ ಕೂಡಲೆ ಆತನು ಅವನಿಗೆ ಭಿಕ್ಷುಧರ್ಮದ ದೀಕ್ಷೆ ಯನ್ನು ಕೊಟ್ಟನು. ಉಪಗುಪ್ತನು ಕೂಡಲೆ ಅರ್ಹತ್ರ್ಯವನ್ನು ಹೊಂದಿದನು. ಅಶೋಕಾನದಾನ ಗ್ರಂಥದಲ್ಲಿ ಈ ಪ್ರಕಾರ ಹೇಳಿರುವದು;-ಅಶೋಕನು ತೀರ್ಥಯಾತ್ರೆಗೆ ಹೊರಡುವದಕ್ಕೆ ಸ್ವಲ್ಪ ದಿವಸಗಳ ಮುಂಚೆ ಆತನಿಗೆ ಉಪಗುಪ್ತನ ಸಮಾ ಗಮವಾಯಿತು. ಆಗ ಉಪಗುಪ್ತನು ತೀರ್ಥಯಾತ್ರೆಗಾಗಿ ಅಶೋಕನೊಡನೆ ಹೊರಟು ಆತನಿಗೆ ಪ್ರಸಿದ್ಧವಾದ ಬೌದ್ದ ತೀರ್ಥಗಳನ್ನೆಲ್ಲಾ ತೋರಿಸಿದನು. ಅಶೋಕನು ಆಯಾ ಸ್ಥಳಗಳಲ್ಲಿ ಹಲವು ಸ್ತನಗಳನ್ನೂ ನಿಹಾರಗಳನ್ನೂ ಕಟ್ಟಿಸಿದನು. ಅಶೋಕನ ಬಳಿಗೆ ಬರುವ ಮುಂಚೆ ಉಪಗುಪ್ತನು ಮಥುರೆಯಲ್ಲಿ ವಾಸವಾಗಿದ್ದನು. ಆತನ ಉಪದೇಶ ವನ್ನು ಕೇಳಿ, ಅಸಂಖ್ಯ ಸ್ತ್ರೀಪುರುಷರು ಬೌದ್ಧ ಧರ್ಮವನ್ನು ಸ್ವೀಕರಿಸುತ್ತಿದ್ದರು. ಅಶೋ ಕನು ಉಪಗುಪ್ತನ ಗುಣಗಳನೂ , ಕೀರ್ತಿಯನ್ನೂ ಕೇಳಿ ಪಾಟಲಿಪುತ್ರಕ್ಕೆ ಬರ ಬೇಕೆಂದು ಆತನಿಗೆ ಹೇಳಿಕಳುಹಿದನು, ಆತನನ್ನು ಕರೆತರುವದಕ್ಕಾಗಿ ಪಾಟಲಿಪುತ್ರದಿಂದ ನಾಮೆಯನ್ನು ಕಳುಹಿದನು, ಮತ್ತು ಆತನು ಅಲ್ಲಿಗೆ ಬಂದೊಡನೆ ಮಹಾ ವೈಭವದಿಂದ ಪಟ್ಟಣಕ್ಕೆ ಕರೆದುಕೊಂಡು ಬಂದನು. ಬಳಿಕ ಅಶೋಕನು ತೀರ್ಥಯಾತ್ರೆಗೆ ತನ್ನೊಡನೆ ಬರಬೇಕೆಂದು ಬೇಡಿಕೊಂಡನು. ಉಪಗುಪ್ತನು ಆನಂದದಿಂದ ಅದಕ್ಕೆ ಒಪ್ಪಿಕೊಂಡನು. ಬಳಿಕ ಅಶೋಕನು ಅವನೊಡನೆ ಹೂಮಾಲೆಗಳು, ಪರಿಮಳ ದ್ರವ್ಯಗಳು, ಮೊದಲಾದ ಸಂಭಾರಗಳನ್ನು ತೆಗೆದುಕೊಂಡು ತೀರ್ಥಯಾತ್ರೆಗೆ ಹೊರಟನು. ಪಾಟಲಿಪುತ್ರದಲ್ಲಿ ಒಂದು ದಿನ್ನೆಯ ಮೇಲೆ ಉಪಗುಪ್ತನ ಆಶ್ರಮವಿತ್ತು, ಇದರ ಬಳಿಯಲ್ಲಿಯೇ ಅಶೋಕನು ಭಿಕ್ಷುಗಳಿಗಾಗಿ ಕಲ್ಲಿನ ಆರಾಮಗಳನ್ನು ಕಟ್ಟಿಸಿದ್ದನು. ಆ ದಿನ್ನೆಗೆ ಈಗ “ ಛೋಟಾನಹಾಡ ?” ( ಸಣ್ಣಗುಡ್ಡ) ಎಂದು ಕರೆಯುತ್ತಾರೆ.