ಪುಟ:ಅಶೋಕ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೦೫ •••••wwwnMrIror ಒ೦••••••••• ಚೀನ ದೇಶದ ಉಪಾಖ್ಯಾನಗಳನ್ನು ಓದಿದರೆ, ಉಪಗುಪ್ತನೇ ಅಶೋಕನಿಗೆ ಬೌದ್ಧ ಧರ್ಮದ ದೀಕ್ಷೆಯನ್ನು ಕೊಟ್ಟನೆಂದೂ, ಆತನೇ ಅಶೋಕನಿಗೆ ಬೋಧಿಸಿ ಹಲವು ಕಡೆಗಳಲ್ಲಿ ಸ್ತೂಪ-ವಿಹಾರಗಳನ್ನು ಕಟ್ಟಿಸಿದನೆಂದೂ, ಇದರಿಂದಲೇ ಪಾಟಲಿಪುತ್ರದಲ್ಲಿ ಎಲ್ಲಕ್ಕೂ ಮೊದಲು ಉತ್ತಮವಾದ ಕೈಗಾರಿಕೆಯ ಕೌಶಲ್ಯವುಳ್ಳ ಕುಕ್ಕುಟಾರಾಮವು ಅಥವಾ ಅಶೋಕಾರಾಮವು ಕಟ್ಟಿಸಲ್ಪಟ್ಟಿತೆಂದೂ ತಿಳಿಯುತ್ತದೆ. ಕುಕ್ಕುಟಾರಾಮದಲ್ಲಿ ಅಶೋಕನೂ, ಉಪಗುಪ್ತನೂ ಕೂಡಿ ಮಾಡಿದ ಧರ್ಮಾಲೋಚನೆಯು * (ಗುಣಕಾ ರಂಡವ್ಯೂಹ ” ಎಂಬ ಬೌದ್ದ ಗ್ರಂಥವಾಯಿತು. ಉಪಗುಪ್ತನ ದೇಹತ್ಯಾಗದ ಸಂಬಂಧ ವಾಗಿ ಹಲವು ಪ್ರವಾದಗಳಿರುವವು, ಕೆಲವರು ಮಥುರೆಯಲ್ಲಿ ದೇಹಬಿಟ್ಟನೆಂದು ಹೇಳು ತಾರೆ, ಒಂದು ಭಯಂಕರವಾದ ಭೂಕಂಪವಾಗಿ ಅದರಲ್ಲಿ ಉಪಗುಪ್ತನ ಅಂತವಾಯಿ ತೆಂದು ಜಪಾನದೇಶದಲ್ಲಿ ಒಂದು ಕಥೆಯು ಪ್ರಚಲಿತವಿರುವದು ಉಪಗುಪ್ತನು ಈಗಲೂ ಜೀವಿಸಿರುವನೆಂದು ಬ್ರಹ್ಮದೇಶದವರು ಹೇಳುತ್ತಾರೆ. ಬ್ರಹ್ಮ ದೇಶದಲ್ಲಿ ಉಪಗುಪ್ತನ ವಿಷಯವಾಗಿ ಹಲವು {ಕಥೆಗಳಿರುವವು, ಅವೆಲ್ಲವು ಪಾಲಿ ಭಾಷೆಯಲ್ಲಿರುವವು. ಇದ ರಿಂದ ಉಪಗುಪ್ತನ ಸಂಬಂಧವಾಗಿ ಕೇವಲ ಮಹಾಯಾನಗ್ರಂಥದಲ್ಲಿ ಉಲ್ಲೇಖವಿದೆ ಎಂಬದಿಷ್ಟೇ ಅಲ್ಲ; ಪಾಲಿ ಗ್ರಂಥಗಳಲ್ಲಿಯೂ ಆತನ ಸಂಬಂಧವಾಗಿ ಉಪಾಖ್ಯಾನಗಳು ಪ್ರಚಲಿತವಾಗಿರುವವೆಂಬದು ಸ್ಪಷ್ಟವಾಗುವದು, ಬ್ರಹ್ಮದೇಶನಿವಾಸಿಗಳು ಉಪಗುಪ್ತನು ಅಮರನು; ಅವನು ದಕ್ಷಿಣ ಮಹಾಸಾಗರದಲ್ಲಿ ಒಂದು ಹಿತ್ತಾಳೆಯ ಪ್ರಾಸಾದವನ್ನು ನಿರ್ಮಾಣ ಮಾಡಿ ಇದುವರೆಗೆ ದೈವಶಕ್ತಿಯಿಂದ ಧ್ಯಾನನಿರತನಾಗಿ ಜಗತ್ತಿನ ಕಲ್ಯಾಣ ವನ್ನು ಮಾಡುತ್ತಾನೆಂದೂ, ನಿರ್ವಾಣವನ್ನವಲಂಬಿಸಿದವರಿಗೆ ತಮ್ಮ ತಮ್ಮ ಮಾರ್ಗದಲ್ಲಿ ಮುಂದುವರಿಯುವದಕ್ಕೆ ಸಹಾಯ ಮಾಡುತ್ತಾನೆಂದೂ ನಂಬುವರು ಬ್ರಹ್ಮದೇಶದಲ್ಲಿ ಪ್ರತಿವರ್ಷ ವರ್ಷಾವಾಸದ ಕಡೆಯ ದಿವಸ ( ಅಕ್ಟೋಬರ ತಿಂಗಳಲ್ಲಿ) ಉಪಗುಪ್ತನ ಹೆಸ ರಿನಿಂದ ಒಂದು ಉತ್ಸವವು ನಡೆಯುವದು. ಈ ದಿವಸ ಪ್ರತಿಯೊಂದು ಮನೆಯು ದೀಪಮಾ ಲೆಯಿಂದ ಶೋಭಿತವಾಗುವದು, ಬಹುತರ ಪ್ರತಿಯೊಬ್ಬ ಬ್ರಹ್ಮ ದೇಶದ ಗೃಹಸ್ಥನು ಒಂದೊಂದು ಸಣ್ಣ ನಾವೆಯನ್ನು ಮಾಡಿ, ಅದನ್ನು ಪತ್ರಪುಷ್ಪಗಳು ದೀಪಗಳು ಇವುಗ ಳಿಂದ ಸಿಂಗರಿಸಿ ಹಾಡುತ್ತ ಅದನ್ನು ನದಿಯಲ್ಲಿ ತೇಲಬಿಡುವನು. ಆ ನಾವೆಯು ಉಪ ಗುಪ್ತನ ಬಳಿಗೆ ಹೋಗಬೇಕೆಂದೂ ಆತನನ್ನು ಕರೆತರಬೇಕೆಂದೂ ಅವರ ವಿಶ್ವಾಸವು. ಕೆಲಕೆಲವೆಡೆ ಉಪಗುಪ್ತನು ವಾರಣಾಸಿಯ ಬಬ್ಬ ಸುಗಂಧದ್ರವ್ಯ ಮಾರುವವನ ಮಗನೆಂದು ಹೇಳಿದೆ. ಹೀನಯಾನ ಬೌದ್ಧಗ್ರಂಥದಲ್ಲಿ ಉಪಗುಪ್ತನ ಬದಲು ಮೌದ್ದಲಿ ಪುತ್ರ ತಿಷ್ಯನ ಹೆಸರು ಬಹಳ ಸಾರೆ ಉಲ್ಲೇಖಿಸಿರುವದು, ಉಪಗುಪ್ತ ತಿಷ್ಯನೂ,

  1. ನೇಪಾಳದಲ್ಲಿ ೯ ಬಹು ಪವಿತ್ರ ಧರ್ಮಗ್ರಂಥಗಳಿರುವವು ಇದು ಅವುಗಳಲ್ಲೊಂದಾಗಿರುವದು.
  • ಬ್ರಹ್ಮದೇಶವಾಸಿಗಳು ಉಪಗುಪ್ತನಿಗೆ ಪೂಜೆಯನ್ನ ರ್ಪಿಸಿದರೆ ಜಡಿಮಳೆಯು ಹೋಗಿ, ಅಕಾ ಶವು ನಿರ್ಮಲವಾಗುವದೆಂದು ನಂಬುತ್ತಾರೆ.

14