ಪುಟ:ಅಶೋಕ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hok ಅಶೋಕ ಅಥವಾ ಪ್ರಿಯದರ್ಶಿ. ••••••••••••••••••••• YY • ++Fv ••••••••••• Y**/* ** ಮೇದ್ದಲಿಪುತ್ರ ತಿಷ್ಯನೂ ಬೇರೆ ಬೇರೆ ಅಲ್ಲ; ಒಂದೇ ವ್ಯಕ್ತಿಯೆಂದು ಹಲವರು ಅಭಿ ಪ್ರಾಯ ಪಟ್ಟಿದ್ದಾರೆ. ಮೊದಲನೆಯ ಹೆಸರು ಮಹಾಯಾನ ಗ್ರಂಥದಲ್ಲಿ, ಎರಡನೆಯದು ಹೀನಯಾನ ಗ್ರಂಥದಲ್ಲಿ ಉಲ್ಲಿಖಿತವಾಗಿರುವದು. ಏನೇ ಇರಲಿ, ಉಪಗುಪ್ತನು ಮಥು ರೆಯಿಂದ ಪಾಟಲಿಪುತ್ರಕ್ಕೆ ಬರುವದೂ ಮೌದ್ದ ಲಿಪುತ್ರ ತಿಷ್ಯನು ಅಹೋಗಂಗಾ ಪರ್ವತ ದಿಂದ ಪಾಟಲಿಪುತ್ರಕ್ಕೆ ಬರುವದೂ ಒಂದೇ ಪ್ರಸಂಗದ ಪುನರಾವರ್ತನವೆಂದು ತೋರು ತದೆ. ಈ ಎರಡೂ ಘಟನೆಗಳಲ್ಲಿ ಬಹಳ ಸಾಮ್ಯವಿರುವದು. ಬುದ್ಧ ಚರಿತಕಾವ್ಯ, ಹ್ಯವೇನ್‌ತ್ಸಾಂಗನ ಪ್ರವಾಸವೃತ್ತಾಂತ ಬ್ರಹ್ಮ ದೇಶದಲ್ಲಿಯ ಪ್ರಚಲಿತವಾದ ಕಥೆಗಳು ಇವುಗಳಲ್ಲೆಲ್ಲ ಉಪಗುಪ್ತನು ಅಶೋಕಮಹಾರಾಜನ ಉಪದೇಶಕನೂ, ಗುರುವೂ ಆಗಿ ದ್ದನೆಂದು ವರ್ಣಿಸಲ್ಪಟ್ಟಿರುವದು. ೧೩ನೆಯ ಅಧ್ಯಾಯ. “ಜಿಸ್ಟರ್ ಅಶೋಕನ ತೀರ್ಥಯಾತ್ರೆ. ಓ ಅಲ್ಲಿ ಶೋಕಾವದಾನದಲ್ಲಿ ಹೇಳಿರುವದೇನಂದರೆ--ಮಹಾಸ್ಥವಿರ ಉಪಗುಪ್ತನು ನ್ಯಾಯಶಾಸ್ತ್ರ ಪಂಡಿತನಾದ ಭಿಕ್ಷನಾಯಕನು, ಆತನ ದಿಗಂತವ್ಯಾಪಿಯಾದ ಪತಿ ಕೀರ್ತಿಯು ಅಶೋಕಚಕ್ರವರ್ತಿಯ ಕಿವಿಯವರೆಗೆ ಬಂದಿತು. ಉಪಗುಪ್ತ \ ನನ್ನು ಕರೆತರುವದಕ್ಕಾಗಿ ಮಂತ್ರಿಗಳು ಆತನ ಬಳಿಗೆ ದೂತರನ್ನು ಕಳಿಸಬೇ ಕೆಂದಿರಲು ಅಶೋಕನು ತಾನೇ ಹೋಗಿ ಉಪಗುಪ್ತನನ್ನು ಕುರಿತು ಪಾಟಲಿಪುತ್ರಕ್ಕೆ ಬರುವ ದಕ್ಕೆ ಪ್ರಾರ್ಥಿಸಬೇಕೆಂದು ಸಂಕಲ್ಪ ಮಾಡಿದನು. ಅಶೋಕನು ಮಥುರೆಗೆ ಹೊರಡಬೇ ಕೆಂದಿರುವಷ್ಟರಲ್ಲಿ ಉಪಗುಪ್ತನು ತಾನೇ ಪಾಟಲಿಪುತ್ರವಿಹಾರಕ್ಕೆ ಬರುತ್ತಿರುವನೆಂಬ ಸುದ್ದಿಯು ಬಂದಿತು. ಉಪಗುಪ್ತನು ಬರುವದನ್ನು ತಿಳಿದು ಅವನ ಸತ್ಕಾರಕ್ಕಾಗಿ ದೊಡ್ಡ ಸಮಾರಂಭವು ಮಾಡಲ್ಪಟ್ಟಿತು. ಅಶೋಕನು ನದಿಯ ದಂಡೆಯ ಮೇಲೆ ಆತನ ಮಾರ್ಗವೆ ಸೋಡಹತ್ತಿದನು. ಅಷ್ಟರಲ್ಲಿ ನಾವೆಯು ದಂಡೆಗೆ ಬಂದಿತು. ಅಶೋಕನು ಬಹಳ ಸಂಭ್ರಮದಿಂದ ಆತನಿಗೆ ನಮಸ್ಕಾರಮಾಡಿ ಸತ್ಕಾರಮಾಡಿದನು. ಮಹಾಸ್ಥವಿರ ಉಪ ಗುಪ್ತನ ಉಜ್ವಲಮೂರ್ತಿಯನ್ನೂ, ನಿರ್ದುಷ್ಟ್ರವಾದ ಧರ್ಮವ್ಯಾಖ್ಯಾನವನ್ನೂ ದಿವ್ಯತೇಜ ಸ್ವನ್ನೂ ನೋಡಿ ಅಶೋಕನು ಮರುಳಾದನು. ಆತನ ಸಹವಾಸವೊದಗಿದದರಿಂದ ತಾನು ಧನನೆಂದು ತಿಳಿದು, ಕೊನೆಗೆ ಉಪಗುಪ್ತನೊಡನೆ ತೀರ್ಥಯಾತ್ರಮಾಡಬೇಕೆಂದು ನಿಶ್ಚಯಿಸಿದನು. ಶುಭಮುಹೂರ್ತದಲ್ಲಿ ಅವರು ತೀರ್ಥಯಾತ್ರೆಗೆ ಹೊರಟರು.