ಪುಟ:ಅಶೋಕ.djvu/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧of wwwvvvvvvvvvvvv MMMUMMM ನಾಗರಾಜನು; ತಾವು ಸ್ತೂಪವನ್ನು ಅಗೆಯಿಸುತ್ತೀರೆಂದು ತಿಳಿದು ನನ್ನ ಮನೆಗೆ ತಮ್ಮನ್ನು ಕರೆದಿರುವೆನು ಎಂದು ಹೇಳಿದನು. ಅಶೋಕನು ಆ ಬ್ರಾಹ್ಮಣನ ಸಂಗಡ ಆತನ ಮನೆಗೆ ಹೋದನು. ನಾಗರಾಜನು-ಮಹಾರಾಜರೇ ನಾನು ನನ್ನ ದುಷ್ಕರ್ಮದಿಂದ ಈ ನಾಗದೇಹವನ್ನು ಹೊಂದಿರುವೆನು. ಬುದ್ಧದೇವನ ದೇಹಾಸ್ಲಿಗಳನ್ನು ಪ್ರತಿದಿವಸ ಪೂಜೆಮಾಡಿ ಪಾಪವನ್ನು ಕಳೆದುಕೊಳ್ಳು ತ್ತಿರುವೆನು; ತಮಗೆ ನಂಬಿಗೆಯಾಗದಿದ್ದರೆ ಅದನ್ನು ಪ್ರತ್ಯಕ್ಷ ನೋಡಬೇಕು ಎಂದು ಹೇಳಿದನು, ನಾಗನ ಮನೆಯಲ್ಲಿ ಆತನ ಮಾತು ಗಳನ್ನು ಕೇಳಿ ಅಶೋಕನು ಅಂಜಿದನು; ಮತ್ತು ನಾಗರಾಜನ ಪೂಜೆಯ ಉಪಕರಣಗ. ಳನ್ನು ನೋಡಿ ಇಂಥ ಉಪಕರಣಗಳು ಮನುಷ್ಯರಿಗೆ ದೊರೆಯಲಾರವು ಎಂದು ಭಾವಿಸಿ ದನು, ಆಗ ನಾಗರಾಜನು ಮಹಾರಾಜರೇ, ಹಾಗಿದ್ದರೆ ತಾವು ಈ ಸ್ತೂಪವನ್ನು ಹಾಳು ಮಾಡುವದಿಲ್ಲವೆಂದು ವಚನಕೊಡಿರಿ ಎಂದು ಕೇಳಿದನು. ಅಶೋಕನು ಆತನ ಮಾತುಗ. ಳನ್ನು ಕೇಳಿ ಬುದ್ದದೇವನ ಶರೀರ ಧಾತುಗಳನ್ನು ಹೊರತೆಗೆಯುವ ಆಲೋಚನೆಯನ್ನು ಬಿಟ್ಟು ಕೊಟ್ಟನು. ಈ ಜಲಾಶಯದ ಬಳಿಯಲ್ಲಿ ನಾಗರಾಜನು ಬ್ರಾಹ್ಮಣ ವೇಷದಿಂದ ಬಂದ ಸ್ಥಳದಲ್ಲಿ ಅಶೋಕನು ಈ ವೃತ್ತಾಂತವನ್ನೆಲ್ಲ ಬರೆದು ಒಂದು ಶಿಲೆಯನ್ನು ನಿಲ್ಲಿಸಿದ್ದನು. ಚೀನ ಪ್ರವಾಸಿಗಳಾದ ಫಾಹಿಯಾನನೂ ಹುಯೆನ್‌ಸಾಂಗನೂ ಈ ಶಿಲಾಲಿಪಿಯ ಉಲ್ಲೇ ಖವನ್ನು ಮಾಡಿರುವರು. ರಾಮಗ್ರಾಮದ ಹತ್ತರ *ಯಾವ ಸ್ಥಳದಲ್ಲಿ ಯುವರಾಜನಾದ ಸಿದ್ದಾರ್ಥನು ರಾಜವೇಷವನ್ನು ಬಿಟ್ಟು ಶುದ್ಧಾವಾಸ ದೇವನ ಬಳಿಯಲ್ಲಿ ಮೃಗಚರ್ಮವನ್ನು ತೆಗೆದುಕೊಂಡು ಮಸ್ತಕ ಮುಂಡನ ಮಾಡಿಸಿಕೊಂಡಿದ್ದನೋ ಆ ಸ್ಥಳದಲ್ಲಿ ಅಶೋಕನು ೧೦೦ ಅಡಿ ಎತ್ತರವಾದ ದೊಡ್ಡದೊಂದು ಸ್ಫೂಪವನ್ನು ಕಟ್ಟಿಸಿದನು. ಈ ರಾಮಪುರದಲ್ಲಿ ಒಂದು ಕಲ್ಲಿನ ಸಿಂಹಸ್ತಂಭವನ್ನು ನಿಲ್ಲಿಸಿ ಪರ್ವತವನ್ನು ದಾಟಿ ಅವರು ಕುಶೀನಗರಿಗೆ ಬಂದರು. ಈ ಕುಶೀನಗರದಲ್ಲಿಯೇ ಬುದ್ದದೇವನು ಪರಿನಿರ್ವಾಣವನ್ನು ಹೊಂದಿದನು. ಈಗಿ ನ ಕಾಶಿಯಾ ಗ್ರಾಮವೇ ಕುಶೀನಗರವೆಂದು ಐತಿಹಾಸಿಕರು ಹೇಳುವರು. ಈ ಸ್ಥಳವು ಗೋರಕ್ಷಪುರದಿಂದ ಪೂರ್ವಕ್ಕೆ ೩೫ ಮೈಲಿನ ಮೇಲೆ ಇತ್ತು, ಪ್ರಾಚೀನ ಕುಶೀನಗರವು ಕಾಶಿಯಾ ಗ್ರಾಮವೆಂಬ ಹೆಸರಿನಿಂದ ಈಗಲೂ ಹಿಂದಿನ ಅವಶೇಷಗಳುಳ್ಳದ್ದಾಗಿ ಇರು ವದು, ಹುಯೆನ್ಸಾಂಗನು ಪಟ್ಟಣದ ಹಾಳಾದ ಭಾಗವನ್ನೂ, ಪ್ರಶಸ್ತವಾದ ರಾಜ ಮಾರ್ಗ ಮೊದಲಾದವುಗಳನ್ನೂ ನೋಡಿದ್ದನು. ಆ ಪುರಾತನ ನಗರದ ಈಶಾನ್ಯದಲ್ಲಿ ಅಶೋಕನು ಒಂದು ಸ್ತೂಪವನ್ನು ಕಟ್ಟಿಸಿದನು. ಬುದ್ದ ದೇವನು ಚಂಡನ ಮನೆಯಲ್ಲಿ ಕೊನೆಯ ಭಿಕ್ಷೆಯನ್ನು ಸ್ವೀಕರಿಸಿದನೆಂದೂ, ಆ ಚಂಡನ ಮನೆಯು ಈ ಸ್ತೂಪದ ಬಳಿ ಯಲ್ಲಿಯೇ ಇತ್ತೆಂದೂ ಪ್ರವಾದವುಂಟು, ಅಚಿರಾವತೀ $ ನದಿಯ ದಂಡೆಯ ಮೇಲೆ

  • # ಅನೋಮಾನದಿಯ ದಂಡೆಯ ಮೇಲೆ

... ಈಗಿನ ರಾಪ್ತಿ ನದಿಯು,