ಪುಟ:ಅಶೋಕ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

mo ಅಶೋಕ ಅಥವಾ ಪ್ರಿಯದರ್ಶಿ, MMA ಉನ್ನತ ಶಾಲವೃಕ್ಷದ ಬುಡದಲ್ಲಿ ಬುದ್ಧದೇವನು ಪರಿನಿರ್ವಾಣವನ್ನು ಹೊಂದಿದನು. ಈ ಮಹಾತೀರ್ಥಸ್ಥಾನದಲ್ಲಿ ಒಂದು ದೊಡ್ಡ ವಿಚಾರವುಂಟು, ಅದರಲ್ಲಿ ಉತ್ತರಕ್ಕೆ ತಲೆಮಾಡಿ ನಿದ್ದೆ ಮಾಡುತ್ತಿರುವಂತೆ ಬುದ್ಧನ ನಿರ್ವಾಣಮೂರ್ತಿಯುಂಟು. ಅಶೋಕನು ಈ ಸ್ಥಳದಲ್ಲಿ ೨೦೦ ಅಡಿ ಎತ್ತರವಾದ ದೊಡ್ಡದೊಂದು ಸ್ಫೂಪವನ್ನು ಕಟ್ಟಿಸಿದ್ದನು, ಮತ್ತು ಅದರ ಬಳಿ ಯಲ್ಲಿ ಒಂದು ಕಲ್ಲಿನ ಕಂಬವನ್ನು ನಿಲ್ಲಿಸಿ ಅದರ ಮೇಲೆ ನಿರ್ವಾಣವೃತ್ತಾಂತವನ್ನು ಕೊರೆ ಯಿಸಿರುವನು. ಈ ಕುಶೀನಗರದಲ್ಲಿಯೇ ಮಲ್ಲಜಾತಿಯು ವಾಸಮಾಡಿತ್ತು. ಈ ಸ್ಥಳ ದಲ್ಲಿಯೇ ಅಶೋಕನು ಈ ಮಲ್ಲಜನಾಂಗದ ಗೌರವವು ನಾಶಹೊಂದಿದ್ದರ . ಅವಶೇಷ ಚಿಹ್ನಗಳನ್ನು ನೋಡಿದ್ದನು. ಒಂದಾನೊಂದು ಕಾಲದಲ್ಲಿ ಶಾಕ್ಯಭೂಮಿಯ ಪರ್ವತಪ್ರದೇ ಶದ ಪೂರ್ವಭಾಗದಿಂದ ವೃಜೆಪ್ರದೇಶದ ಉತ್ತರಭಾಗದ ವರೆಗೆ ಮಲ್ಲಜಾತಿಯ ಅಖಂಡ ಪ್ರತಾಪವು ವ್ಯಾಪಿಸಿತ್ತು. ಅಶೋಕನು ಕುಶೀನಗರಿಯನ್ನು ಬಲಗೊಂಡು ಮತ್ತೆ ರಾಮ ಪುರಕ್ಕೆ ಬಂದನು. ಮುಂದೆ ಗಂಡಕಿ ನದಿಯನ್ನು ದಾಟಿ ತೆರಾಯಿಪ್ರದೇಶದ ಗುಂಟ ಲುಂಬಿನೀ ಉದ್ಯಾನಕ್ಕೆ ಹೋದನು. ಈ ಲುಂಬಿನೀ ಉದ್ಯಾನದಲ್ಲಿಯೇ ಬುದ್ಧದೇವನು ಹುಟ್ಟಿದ್ದನು. ಲುಂಬಿನಿಯಲ್ಲಿ ಅಶೋಕನು ದೊಡ್ಡದೊಂದು ಕಲ್ಲಿನ ಕಂಬವನ್ನು ನಿಲ್ಲಿಸಿದನು, ಆ ಕಂಬದ ಮೇಲೆ ಒಂದು ದೊಡ್ಡ ಕಲ್ಲಿನ ಕುದುರೆಯು ನಿಲ್ಲಿಸಲ್ಪಟ್ಟಿದೆ. ಆ ಕಂಬದ ಮೇಲೆ ಕೆಳಗೆ ಬರೆದ ಸಂಗತಿಯು ಕೊರೆಯಲ್ಪಟ್ಟಿದೆ. « ದೇವಪ್ರಿಯ ಪ್ರಿಯದರ್ಶಿ ನರಪತಿಯು ತನ್ನ ಆಳಿಕೆಯ ೨೧ನೆಯ ವರ್ಷ ತೀರ್ಥಯಾತ್ರೆಯ ನಿಮಿತ್ತವಾಗಿ ಈ ಸ್ಥಳಕ್ಕೆ ಬಂದಿದ್ದನು. ಈ ಸ್ಥಳದಲ್ಲಿ ಶಾಕ್ಯ ಮುನಿ ಬುದ್ದದೇವನು ಜನ್ಮ ಹೊಂದಿದ್ದರಿಂದ ಪ್ರಿಯದರ್ಶಿ ನರಪತಿಯು ಕಲ್ಲಿನ ಕಂಬವನ್ನೂ ಅದರ ಮೇಲೆ ಕಲ್ಲಿನ ಕುದುರೆಯನ್ನೂ ನಿಲ್ಲಿಸಿದನು.• ಪರಮಾರಾಧ್ಯನಾದ ಬೋಧಿಸತ್ವನ ಜನ್ಮಭೂಮಿಯಾದ್ದರಿಂದ ಲುಂಬಿನಿಯು ನಿಷ್ಕರವಾಗಿ ಅರಸನಿಂದ ಅರ್ಪಿಸಲ್ಪಟ್ಟಿತು 'ಅಶೋ ಕನು ಉಪಗುಪ್ತನೊಡನೆ ಈ ಪ್ರದೇಶದ ಮೋಹಕವಾದ ಪ್ರಾಕೃತಿಕ ಸೌಂದರ್ಯವನ್ನು ನೋಡಿ ಮರುಳಾದನು. ಸಮೀಪದಲ್ಲಿ ಗಗನಚುಂಬಿಗಳಾದ ಹಿಮಮಯ ಗಿರಿಶಿಖರಗಳು, ನಾಲ್ಕೂ ಕಡೆಗೆ ಎಲೆಹೂಗಳಿಂದ ಕಂಗೊಳಿಸುವ ಮರಗಳು, ಹುಲ್ಲಿನಕಾಡಿನಲ್ಲಿ ಸ್ವಚ್ಛೆಯಿಂದ ತಿರುಗಾಡುವ ಚಿಗರೆಗಳು, ಮತ್ತು ಆ ಪುಣ್ಯಪ್ರದೇಶವಾದ ಲುಂಬಿನಿಯ ಪೂರ್ವಸ್ಕೃತಿ ಇವೆಲ್ಲವುಗಳಿಂದ ಆತನು ಆನಂದಭರಿತನಾದನು, ಅಲ್ಲಿಂದ ಅವರು ಶಾಕ್ಯರಾಜ್ಯದ ರಾಜ ಧಾನಿಯಾದ ಕಪಿಲಾವಸ್ತು ನಗರಿಗೆ ಪ್ರಯಾಣಮಾಡಿದರು. ಈಗಿನ ಸಯಜಾಬಾದದಿಂದ ಗಂಡಕೀ ಘರ್ಘರಾನದಿಗಳ ಸಂಗಮಸ್ಥಳದವರೆಗೆ ವಿಸ್ತಾರವಾದ ಪ್ರದೇಶವು ಪ್ರಾಚೀನ ಕಪಿಲಾವಸ್ತುವೆಂದು ಹೇಳಲ್ಪಡುವದು, ಬಸ್ತಿ ಜಿಲ್ಲೆಯ ವಾಯವ್ಯಕ್ಕೆ ಇರುವ ಭೂಇಲಾಗ್ರಾಮವು ಇದರ ರಾಜಧಾನಿಯಾಗಿ • ಇದು ಮುಂದೆ ನಷ್ಟವಾಗಿತ್ತು. Bcal's FRecord of yestern World Vol, II,