ಪುಟ:ಅಶೋಕ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. vvvvvvvvvvvvvvvvvvv ••••••••

      • /

ತೊಂದು ಪಾಶ್ಚಾತ್ಯ ಐತಿಹಾಸಿಕರು ಕೇಳುವರು. ಧ್ವಂಸೋನ್ಮುಖವಾಗಿದ್ದರೂ ಕಪಿಲಾವಸ್ತುವಿನ ಪೂರ್ವಗೌರವವು ಹೋಗಿಲ್ಲ. ಅರಮನೆಯ ಹಳೆಯ ಗೋಡೆಯ ಮೇಲೆ ಬೌದ್ಧವಿಹಾರವೂ, ಅದರಲ್ಲಿ ಶಾಕ್ಯಸಿಂಹನ ತಂದೆಯಾದ ಶುದ್ಧೋದನ ರಾಜನ ಕಲ್ಲಿನ ಮೂರ್ತಿಯೂ ಶೋಭಿಸುತ್ತಿರುವವು. ಇದರ ಸಮೀಪದಲ್ಲಿಯೇ ರಾಜಾಂತಃಪುರದ ಅವಶೇಷವುಂಟು, ಅದರ ಗೋಡೆಗಳ ಮೇಲೆ ದೊಡ್ಡ ನಿಹಾರವು ಕಟ್ಟಲ್ಪಟ್ಟಿದೆ. ಅದರಲ್ಲಿ ಬುದ್ದನ ತಾಯಿಯಾದ ಮಹಾಮಾ ಯೆಯ ಮೂರ್ತಿಯುಂಟು. ಬೋಧಿಸತ್ವನು ಮೆಲ್ಲ ಮೆಲ್ಲನೆ ತಾಯಿಯ ಗರ್ಭವನ್ನು ಪ್ರವೇಶಿಸುತ್ತಿರುವಂತೆ ಅಪರೂ ಪವಾದ ಒಂದು ಚಿತ್ರವು ಈ ವಿಹಾರದಲ್ಲಿ ಬರೆಯಲ್ಪಟ್ಟಿತ್ತು ಕ್ರಿ, ೭ನೆಯ ಶತಮಾ ನದಲ್ಲಿ ಹುಯೆನ್ನಾಂಗನು ಇದನ್ನು ನೋಡಿದ್ದನು. ಕಪಿಲಾವಸ್ತುವಿನ ಆಗೇಯಕ್ಕೆ ಅಶೋಕನು ೨೦ ಅಡಿ ಎತ್ತರವಾದ ಒಂದು ಕಲ್ಲಿನ ಕಂಬವನ್ನು ನಿಲ್ಲಿಸಿದ್ದನು. ಕಲ್ಲಿನ ಮೇಲೆ ಒಂದು ಸಿಂಹದ ಮೂರ್ತಿಯು ನಿಲ್ಲಿಸಲ್ಪಟ್ಟಿತ್ತು. ಈ ಕಂಬದ ಬದಿಯಲ್ಲಿ ಒಂದು ಸ್ಕೂಪದಲ್ಲಿ ಬುದ್ಧದೇವನ ಅಸ್ಥಿಯು ಇಡಲ್ಪಟ್ಟಿತ್ತು. ಅಶೋಕನು ಬುದ್ಧನ ನಿರ್ವಾಣವೃತ್ತಾಂತವನ್ನು ಕಂಬದ ಮೇಲೆ ಕೊರೆಯಿಸಿರುವನು. ಪಟ್ಟಣದ ಈಶಾನ್ಯ ಭಾಗದಲ್ಲಿ ಇನ್ನೊಂದು ಸ್ಫೂಪವುಂಟು, ಈ ಸ್ಥಳದಲ್ಲಿ ರಾಜಕುಮಾರನಾದ ಶಾಕ್ಯ ಸಿಂಹನು ಹಲೋತ್ಸವವನ್ನು ನೋಡುತ್ತ ನೋಡುತ್ತ ಅತ್ಯಂತ ಧ್ಯಾನಮಗ್ನನಾಗಿ ದ್ದನು. ಶುದ್ಯೋದನ ರಾಜನು ಎಷ್ಟೋ ಕಡೆಗೆ ಹುಡುಕಿ ಸೂರ್ಯಾಸ್ತ ಕಾಲದಲ್ಲಿ ಧಾನ್ಯ ಮಗ್ನನಾದ ಮಗನನ್ನು ಕಂಡನು. ಪಟ್ಟಣದ ಪೂರ್ವದಿಕ್ಕಿನ ಅಗಸೆಯಲ್ಲಿ ಒಂದು ಸ್ತೂಪ ವಿರುವದು, ಈ ಸ್ಥಾನದಲ್ಲಿ ಸಿದ್ದಾರ್ಥನು ದೇವದತ್ತನು ಕೊಂದ ಆನೆಯನ್ನು ಒಗೆದಿರುವದ ರಿಂದ ಅದಕ್ಕೆ ( ಹಸ್ತಿಪರಿಖಾ ” ಎಂದೆನ್ನು ವರು. ಇದರ ಬಳಿಯಲ್ಲಿರುವ ಒಂದು ವಿಹಾರ ದಲ್ಲಿ ಬುದ್ದದೇವನ ಮೂರ್ತಿಯಿರುವದು, ಇದರ ಬಳಿಯಲ್ಲಿರುವ ಇನ್ನೊಂದು ವಿಹಾರ ದಲ್ಲಿ ಮಗನನ್ನೆತ್ತಿಕೊಂಡ ಯಶೋಧಾರೆಯ ಮೂರ್ತಿಯಿರುವದು, ಈ ಸ್ಥಳವು ಯುವ ರಾಜನಾದ ಶಾಕೃಸಿಂಹನ ಶಯನಮಂದಿರವಾಗಿತ್ತು. ಪಟ್ಟಣದ ಆಗ್ನೆಯ ಮೂಲೆಯ ಲ್ಲಿರುವ ಒಂದು ವಿಹಾರದಲ್ಲಿ ತಡಿಹಾಕಿದ ಬಿಳಿಗುದುರೆಯ ಮೇಲೆ ಶಾಕೃಸಿಂಹನ ಮೂರ್ತಿ ಯಿರುವದು, ಯುವರಾಜನು ಸಂಸಾರವನ್ನು ತೊರೆದು ಇದೇ ಬಾಗಿಲಿಂದ ಹೊರ ಹೊರಟಿದ್ದನು. ಪಟ್ಟಣದ ನಾಲ್ಕೂ ಕಡೆಗೆ ನಾಲ್ಕು ಬಾಗಿಲುಗಳುಂಟು, ಪ್ರತಿಯೊಂದು ಬಾಗಿಲಿಗೆ ಒಂದೊಂದು ವಿಹಾರವೂ, ಅದರಲ್ಲಿ ಕ್ರಮದಿಂದ ಮುದುಕ, ಬೇನಿಗ, ಮೃತ ಸನ್ಯಾಸಿ ಇವರ ಮೂರ್ತಿಗಳು ಸ್ಥಾಪಿಸಲ್ಪಟ್ಟಿರುವವ, ತಥಾಗತನು ತಂದೆಯನ್ನು ಕಂಡಿದ್ದ ನ್ಯೂಗೋಧಕುಂಜದಲ್ಲಿ ಅಶೋಕನು ಒಂದು ಸ್ತೂಪವನ್ನು ಕಟ್ಟಿಸಿರು ವನು. ಅಶೋಕನು ಯುವರಾಜನಾದ ಸಿದ್ದಾರ್ಥನ ವ್ಯಾಯಾಮಶಾಲೆಯಲ್ಲಿ ಶರಕಪ ತೈಲನದಿ ಮೊದಲಾದ ಬಾಲಕ್ರಿಡಾಸ್ಥಲಗಳನ್ನು ನೋಡಿ ಬಹಳ ಆನಂದಬಟ್ಟನು. ಕ್ರಿ.