ಪುಟ:ಅಶೋಕ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಸಿಹಿ /// • • • • • • - - **//*/*/*/* + • / ಅಶೋಕನು ಮುಂದೆ ಪಶ್ಚಿಮಾಭಿಮುಖವಾಗಿ ಹೊರಟನು. ಉಪಗುಪ್ತನು ಗೌತ ಮಬುದ್ಧನಿಗಿಂತ ಬಹು ಪೂರ್ವಕಾಲದಲ್ಲಿದ್ದ ಕೋನಾಕಮುನಿಯ ಆಶ್ರಮಸ್ಥಾನವನ್ನು ಅಶೋಕನಿಗೆ ತೋರಿಸಿದನು. ಅಲ್ಲಿ ಅಶೋಕನು ಒಂದು ಕಂಬವನ್ನು ನಿಲ್ಲಿಸಿದನು. ಆ ಕಂಬದ ಮೇಲೆ ಬರೆದ ಲಿಪಿಯಿಂದ ತಿಳಿಯುವದೇನಂದರೆ- ತನ್ನ ಆಳಿಕೆಯ ೧೫ನೆಯ ವರ್ಷ ಅಶೋಕನು ತೀರ್ಥಯಾತ್ರೆಯ ಕಾಲದಲ್ಲಿ ಹಿಮಾಚಲದ ಈ ನಿರ್ಜನಪ್ರದೇಶಕ್ಕೆ ಬಂದಿದ್ದನು. ಆದರೆ ಮೇಲೆ ಉಲ್ಲೇಖಿಸಿದ ಲುಂಬಿನೀ ಉದ್ಯಾನದ ಸಂಭಲಿಪಿಯಿಂದ ಅಶೋಕನು ತನ್ನ ಆಳಿಕೆಯ ೨೧ನೆಯ ವರ್ಷ ಲುಂಬಿನೀಸ್ತಂಭವನ್ನು ನಿಲ್ಲಿಸಿದ್ದನೆಂದು ತಿಳಿಯುವದು, ಇದರಿಂದ ಅಶೋಕನು ಒಂದಕ್ಕಿಂತ ಹೆಚ್ಚು ಸಾರೆ ತೀರ್ಥಯಾತ್ರೆಗೆ ಹೊರ ತಿದ್ದನೆಂದು ಗೊತ್ತಾಗುವದು. ಉಪಗುಪ್ತನು ಯಾವನಾರೆ ಆತನೊಡನೆ ಹೊರಟದ ನೆಂಬದನ್ನು ಈಗ ನಿರ್ಣಯಿಸುವದು ಅನಾಧ್ಯವು, ಬಳಿಕ ಅಶೋಕನು ನೇಪಾಲರಾಜ್ಯ ವನ್ನು ಪ್ರವೇಶಿಸಿ ಲಲಿತಪನ ಕಾಟಮುಂಡ ಮೊದಲಾದ ಸ್ಥಾನಗಳನ್ನು ನೋಡಿಕೊಂಡು ಮತ್ತೆ ಪಶ್ಚಿಮಾಭಿಮುಖವಾಗಿ ತಿರುಗಿದನು. ಕೆಲವು ದೂರ ಮುಂದೆ ಹೋದಬಳಿಕ ಆತನು ಪುಣ್ಯಭೂಮಿಯಾದ ಶ್ರಾವಸ್ತೀನಗರಕ್ಕೆ ಬಂದನು. ಶ್ರಾವಸ್ತಿಯು ಅತಿ ಪ್ರಾಚೀನ ಪ್ರದೇಶವು, ಹರಿವಂಶ, ವಿಷ್ಣು ಪುರಾಣ ಮೊದಲಾದ ಸಂಸ್ಕೃತಗ್ರಂಥಗಳಲ್ಲಿ ಸೂರ್ಯವಂಶದ ಯುವನಾಶ್ವನ ಮೊಮ್ಮಗನಾದ ಶ್ರಾವಸ್ತನು ಈ ನಗರವನ್ನು ಕಟ್ಟಿಸಿದನೆಂದು ಉಲ್ಲೇಖವುಂಟು, ಯುವನಾಶ್ವನು ಸೂರ್ಯನಿಂದ ಕೆಳಗೆ ೫ನೆಯ ತಲೆಯವನು, ಅಂದಬಳಿಕ ಶ್ರೀರಾಮಾವತಾರವಾಗುವದಕ್ಕೆ ಬಹುಕಾಲ ಮುಂಚೆ ಈ ನಗರವು ಸ್ಥಾಪಿಸಲ್ಪಟ್ಟಿತು. ಅವನ ಆಳಿಕೆಯಲ್ಲಿ ಶ್ರಾವಸ್ತಿಯು ಅಯೋಧ್ಯಾ ಸಾಮ್ರಾಜ್ಯಕ್ಕೆ ಸೇರಿತ್ತೆಂದು ವಾಯುಪುರಾಣದಲ್ಲಿ ಹೇಳಿದೆ. ರಾಸ್ತಿ ನದಿಯ ದಕ್ಷಿಣತೀರ ದಲ್ಲಿ ಈಗಲೂ ಈ ನಗರದ ಕಾಳಾದ ಭಾಗವು ಕಣ್ಣಿಗೆ ಬೀಳುವದು, ಈಗೀನ ಆಕೋ ಯಾನ ಮತ್ತು ಬಲರಾಮಪುರಕ್ಕೆ ಸೇರಿದ ನಾಹೇತ್ ಮಾಹೇತ ಎಂಬಿವಕ್ಕೆ ಪೂರ್ವದ ಶ್ರಾವಸ್ತಿಯೆಂದು ಹಲವರು ಹೇಳುವರು, ಈಗಿನ ನಾಹೇತಮಾರೇತದಲ್ಲಿ ಒಂದು ದೊಡ್ಡ ಬುದ್ದಮೂರ್ತಿಯೂ ಒಂದು ಅನುಶಾಸನವೂ ಸಿಕ್ಕಿರುವವು. ಈ ಅನುಶಾಸನ ದಲ್ಲಿ ಶ್ರಾವಸ್ತಿಯ ಉಲ್ಲೇಖವುಂಟು. ಕ್ರಿ. ೭ನೆಯ ಶತಮಾನದಲ್ಲಿ ಹುಯೆನ್‌ಸಾಂಗನು ಬಂದಾಗ ಹಾಳಾದ ಅರಮನೆಯ ಸುತ್ತಲಿನ ದೊಡ್ಡ ಕೋಟೆಯ ಭಾಗವನ್ನು ನೋಡಿ ದ್ದನು. ಆತನು ಈ ದೊಡ್ಡ ಕೋಟೆಯ ವ್ಯಾಸವು ೩ಕ್ರೋಶಗಳೆಂದು ಹೇಳಿರುವನು. ಬುದ್ಧದೇವನ ಕಾಲದಲ್ಲಿ ಪ್ರಸನ್ನ ಜಿತ್ ಎಂಬ ನರಪತಿಯು ಶ್ರಾವಸ್ತಿಯಲ್ಲಿ ಅಳುತ್ತಿದ್ದನು. ಈ ಶ್ರಾವಸ್ತಿಯ ಹಾಳಾದ ಸ್ತೂಪದ ಬಳಿಯಲ್ಲಿ ಸದ್ದರ್ಮಮತಾಶಾಲೆಯು ಕಟ್ಟಿಸು ಟ್ವಿತು, ಈ ಮಹಾಶಾಲೆಯಲ್ಲಿದ್ದು ಗೌತಮಬುದ್ಧನು ತನ್ನ ಅಮೃತಸಮಾನವಾದ ಉಪ

  1. ಗೌತಮಬುದ್ಧನು ಆವತರಿಸುವದಕ್ಕೆ ಮುಂಚೆ ಬೇರೆ ಬೇರೆ ಕಲ್ಪಗಳಲ್ಲಿ ೨೪ ಜನ ಬುದ್ದ ದ. ಜನ್ಮ ಹೊಂದಿದ್ದರೆಂದೂ, ಕೊನಾಕಮುನಿಯು ಅವರಲ್ಲೊಬ್ಬನೆಂದೂ ಬೌದ್ಧಗ್ರಂಥಗಳಲ್ಲಿ ಹೇಳಿದೆ.

15