ಪುಟ:ಅಶೋಕ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೫ INovvvANNWw ಶ್ರಾವಸ್ತಿಯು ಸಮೃದ್ಧವಾದ ನಗರವು ಎಷ್ಟೋ ಜ್ಞಾನಿಗಳೂ, ಧನಿಕರೂ, ಶ್ರೇಷ್ಠ ಗಳೂ ಇಲ್ಲಿ ವಾಸಮಾಡುತ್ತಿದ್ದರು. ಇದು ಉತ್ತರಹಿಂದುಸ್ತಾನದ ವ್ಯಾಪಾರದ ಮುಖ್ಯ ಕೇಂದ್ರ ಸ್ಥಳವಾಗಿತ್ತು. ಈ ಸ್ಥಳದಲ್ಲಿ ಬುದ್ದ ದೇವನು ಬಹುದಿವಸ ಇದ್ದು ತನ್ನ ಮಧುರ ವಾದ ಉಪದೇಶದಿಂದ ಸಾವಿರಾರು ಜನ ನರನಾರಿಯರ ತಾಪತ್ರಯದಿಂದ ಬೆಂದುಹೋದ ಹೃದಯದಲ್ಲಿ ಶಾಂತಿರೂಪವಾದ ನೀರನ್ನು ಸಿಂಪಡಿಸುತ್ತಿದ್ದನು. ಅಶೋಕನು ಈ ಶ್ರಾವ ಸ್ತಿಯಲ್ಲಿದ್ದ ಬಕುಲನ ಸ್ತೂಪವನ್ನೂ ಅನಂದನ ಸ್ತೂಪವನ್ನೂ ನೋಡಿದನು. ಬಕುಲನ ಸ್ಕೂಪದಲ್ಲಿ ಆತನು ಒಂದು ತಾಮ್ರಸಿಂಡವನ್ನು ಮಾತ್ರ ದಾನಮಾಡಿದನು. ಶ್ರಾವಸ್ತಿಯ ಪುಣ್ಯಭೂಮಿಯಲ್ಲಿ ಆತನು ೭೦ ಅಡಿ ಎತ್ತರವಾದ ಒಂದು ದೊಡ್ಡ ಕಲ್ಲಿನ ಕಂಬವನ್ನು ಕಟ್ಟಿಸಿದನು. ಶ್ರಾವಸ್ತಿಯಿಂದ ಅವರು ಮಹಾತೀರ್ಥವಾದ ಗಯೆಗೆ ಪ್ರಯಾಣ ಮಾಡಿ ದರು. ಗಯೆಯು ಹಿಂದುಗಳ ಪ್ರಾಚೀನ ತೀರ್ಥವು; ಬುದ್ದದೇವನ ಲೀಲಾಸ್ಥಳವು. ಈಗಿನ ಸಲ್ಲು ನದಿಯ ತೀರದಲ್ಲಿದ್ದ ವಿಷ್ಣು ಮಂದಿರದಿಂದ ಬುದ್ಧ ಗಯೆಯು ೩ ಕ್ರೋಶಗಳ ಆಚೆ ಇರುವದು. ಬುದ್ದಗಯೆಯಲ್ಲಿರುವ ಬೋಧಿವೃಕ್ಷವು ಬಹು ದಿವಸಗಳಿಂದ ಹಿಂದು ಗಳ ಮತ್ತು ಬೌದ್ಧರ ಭಕ್ತಿಪೂಜೆಗಳನ್ನು ಸ್ವೀಕರಿಸುತ್ತ ಬಂದಿರುವದು. ಇದೇ ಬೋಧಿ ವೃಕ್ಷದ ಬುಡದಲ್ಲಿ ಶಾಕ್ಯಸಿಂಹನು ಬುದ್ಧತ್ವವನ್ನು ಪಡೆದನು. ಅಶೋಕನು ಈ ಸ್ಥಳದಲ್ಲಿ ಬಹು ಶಿಲ್ಪಕೌಶಲ್ಯವುಳ್ಳ ಒಂದು ದೊಡ್ಡ ಮಂದಿರವನ್ನು ಕಟ್ಟಿಸಿದ್ದನು. ಈ ಮಂದಿರದಲ್ಲಿ ಬುದ್ಧದೇವನ ಧ್ಯಾನಮಗ್ನ ವಾದ ದೊಡ್ಡ ಮೂರ್ತಿಯು ಇನ್ನೂ ಇರುವದು. ಈ ಬುದ್ದ ಮಂದಿರದ ಬಳಿಯಲ್ಲಿಯೇ ಮಣ್ಣಿನ ಗುಹೆಗಳಿಂದ ಗೋಡೆ, ಕಲ್ಲಿನ ಕಂಬ ಮೊದಲಾದವು ಅಗಿದು ಹೊರತೆಗೆಯಲ್ಪಟ್ಟು ಈಗ ಆಶ್ಚರ್ಯವನ್ನು ೦ಟುಮಾಡುತ್ತಿರುವವು, ಉರುಬಿಲ್ವದ ಮನೋಹರವಾದ ದೃಶ್ಯವನ್ನು ಒಮ್ಮೆ ನೋಡಿದವರಿಗೆ ಅದರ ಮರವು ಎಂದೂ ಆಗ ಲಾರದು, ಸುತ್ತಲು ಕಿರಿಯವಾದ ಗುಡ್ಡಗಳ ಸಾಲುಗಳು* ಶ್ಯಾಮಲವರ್ಣದಿಂದ ಕಂಗೊ ಳಿಸುತ್ತಿವೆ; ಸಣ್ಣ ಪ್ರವಾಹವುಳ್ಳ ಆಳವಾದ ಫಲ್ಲು ನದಿಯು ( ಪ್ರಾಚೀನ ನೈರಂಜನ ) ದಂಡೆಯ ಪ್ರದೇಶವನ್ನು ತೊಳೆಯುತ್ತ ಹರಿಯುತ್ತದೆ; ನಿರ್ಜನವಾದ ಗುಹೆಗಳು ನಿಜವಾದ ನಾಧಕರ ತಪೋಭೂಮಿಗಳಾಗಿ ಅಲ್ಲಲ್ಲಿ ಶೋಭಿಸುತ್ತವೆ. ಇಂಥ ಮನೋಹರವಾದ ಸ್ಥಳದಲ್ಲಿ ಅಶೋಕನು ಉಪಗುಪ್ತನ ಸಹವಾಸದಿಂದ ನಿರ್ವಾಣದ ಮಹಿಮೆಯನ್ನು ಶ್ರವ ಣಮಾಡಿದನು. ಬೋಧಿವೃಕ್ಷದ ಬುಡದಲ್ಲಿ ಕುಳಿತ, ನಿರ್ವಾಣಾನಂದದಲ್ಲಿ ಮಗ್ನನಾದ ಮಹಾಯೋಗಿಯಾದ ಬುದ್ದನ ಉಜ್ವಲ ಮೂರ್ತಿಯು ಆತನ ಮಾನಸ ಚಕ್ಷುವಿನೆದುರಿಗೆ ಪ್ರತ್ಯಕ್ಷವಾಯಿತು. ಆತನು ಭಕ್ತಿಯುಕ್ತವಾದ ಮನಸ್ಸಿನಿಂದ ಪ್ರಾಚೀನ ಬೋಧಿವೃಕ್ಷದ

  1. ಗೌತಮಬುದ್ಧನೂ ಮೊದಲಿನ ಬೇರೆ ಬುದ್ಧರೂ ಈ ಸ್ಥಳದಲ್ಲಿ ಕುಳಿತೇ ಬುದ್ಧತ್ವವನ್ನು ಹೊಂದಿ ←ರು,