ವಿಷಯಕ್ಕೆ ಹೋಗು

ಪುಟ:ಅಶೋಕ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ,

  1. ಕ»

\» ಬುಡದಲ್ಲಿ • ವಜ್ರಾಸನವನ್ನು ಕಂಡನು. ಬಳಿಕ ಆತನು ಬುದ್ದಗಯಾ, ವಾರಾಣಸಿ ಗಳನ್ನು ನೋಡಿಕೊಂಡು ಅಲ್ಲಿಂದ ಋಷಿಪತ್ತನ ಅಥವಾ ನಾರನಾಥಕ್ಕೆ ಹೊರಟನು. ಸಾರನಾಥವು + ಈಗಿನ ವಾರಾಣಸಿಯಿಂದ ಉತ್ತರಕ್ಕೆ ೭ ಮೈಲು ದೂರದಲ್ಲಿ ರುವದು, ಈ ಸಾರನಾಥವು ಬೌದ್ಧಧರ್ಮದ ಮುಖ್ಯ ಪ್ರಚಾರಸ್ಥಳವು, ಈ ಸ್ಥಳದಲ್ಲಿಯೇ ಲೋಕನಾಯಕನಾದ ಬುದ್ದ ದೇವನು ಎಲ್ಲಕ್ಕೂ ಮೊದಲು ತನ್ನ ಧರ್ಮವನ್ನು ಜಗತ್ತಿನೆ ದುರಿಗೆ ಪ್ರಕಟಿಸಿದನು, ಮತ್ತು ಇದೇ ಸ್ಥಳದಿಂದ ಪ್ರಾಣಿಗಳ ಕಲ್ಯಾಣಕ್ಕಾಗಿ ತನ್ನ ಅಮೃತಸಮಾನವಾದ ಉಪದೇಶಗಳನ್ನು ನಾಲ್ಕೂ ಕಡೆಗೆ ಪ್ರಚಾರಪಡಿಸುವದಕ್ಕಾಗಿ ೬೦ ಜನ ಭಿಕ್ಷುಗಳನ್ನು ಕಳುಹಿದನು. ಇವೆಲ್ಲ ಸಂಗತಿಗಳ ಸ್ಮಾರಕವೆಂದು ಕಟ್ಟಿಸಿದ ಸಾರ ನಾಥ ಸ್ತೂಪವು ಇದುವರೆಗೆ ಇರುವದು. ಇದು ಅಶೋಕನು ಕಟ್ಟಿಸಿದ್ದು, ಬುದ್ಧದೇ ವನು ಯಾವ ಸ್ಥಳದಲ್ಲಿ ನಿಂತು ಧರ್ಮ ಪ್ರಚಾರ ಮಾಡಿದ್ದನೋ, ಸಾವಿರಾರು ಜನರ ಬಳಿ ಯಲ್ಲಿ ತಾನು ಕಂಡು ಹಿಡಿದ ಮಹಾಸತ್ಯವನ್ನು ಲೋಕಕಲ್ಯಾಣಕ್ಕಾಗಿ ಪ್ರಕಟಮಾಡಿ ದ್ದನೋ ಆ ಪವಿತ್ರಸ್ಥಾನದಲ್ಲಿ ಅಶೋಕನು ಒಂದು ಇಟ್ಟಿಗೆಯ ಸ್ತೂಪವನ್ನೂ, ೭೦ ಅಡಿ ಎತ್ತರವಾದ ಒಂದು ಕಲ್ಲಿನ ಕಂಬವನ್ನೂ ನಿಲ್ಲಿಸಿದನು. ಬಳಿಕ ಅಶೋಕನು ಸಾರನಾಥ ವನ್ನು ನೋಡಿಕೊಂಡು ಪಾಟಲಿಪುತ್ರಕ್ಕೆ ತಿರುಗಿ ಬಂದನು. ( ಆ 2.: 5 ಜತ ೧೪ನೆಯ ಅಧ್ಯಾಯ. ಇ ಅಶೋಕನ ಧರ್ಮವಿಧಿ. ಶೋಕನ ಗಿರಿಲಿಸಿ, ಸಂಭಲಿಪಿ ಮತ್ತು ಬೇರೆ ಅನುಶಾಸನಗಳು ಇವುಗ ಇಲ್ಲಿ ಧರ್ಮಶಬ್ದದ ಉಲ್ಲೇಖವು ಆಗಾಗ ಕಂಡುಬರುವದು. ಈ 4 ಧರ್ಮ ” ಶಬ್ದದ ಅರ್ಥವೇನು ? ಇಂಗ್ಲಿಷ ಐತಿಹಾಸಿಕರು ಇದಕ್ಕೆ Low of Piety ಎಂದು ಅರ್ಥವನ್ನು ಹೇಳುವರು. ಈ ಅರ್ಥವು ಬಹು ಮಟ್ಟಿಗೆ ಯೋಗ್ಯವಾದದ್ದೆಂದು ತೋರುವದು. ಈ ಅನುಶಾಸನಗಳು • ಹುಯೆನ್ ಸಾಂಗನು ತಾನು ಈ ಸ್ಥಳದಲ್ಲಿ ೭೦ ಅಡಿ ಎತ್ತರವಾದ ಶಿವಲಿಂಗವನ್ನು ನೋಡಿದೆ ನೆಂದು ತನ್ನ ಪ್ರವಾಸ ವೃತ್ತಾಂತದಲ್ಲಿ ಬರೆದಿರುವನು. Beal's Record Vol II + ಬುದ್ಧನ ಪೂರ್ವಜನ್ಮಗಳ ವರ್ಣನೆಯು ಜಾತಕವೆ೦ಬ ಪಾಲಿಗ್ರಂಥದಲ್ಲಿರುವದು, ಬುದ್ದದೇ ವನು ಮೃಗಜನ್ಮವನ್ನು ಧರಿಸಿದಾಗ ಈ ಸ್ಥಳದಲ್ಲಿದ್ದನೆಂದೂ, ಒ೦ದು ಮೃಗಗಳ ಹಿಂಡಿಗೆ ಒಡೆಯನಾಗಿ ದ್ದನೆಂದೂ, ಆ ಕಾಲದಲ್ಲಿ ಈಯಲಾದ ಒಂದು ಹೆಣ್ಣು ಚಿಗರೆಯ ಜೀವವುಳಿಸುವದಕ್ಕಾಗಿ ತಾನು ಪ್ರಾಣ ಕೊಟ್ಟನೆಂದೂ ಅದರಲ್ಲಿ ವರ್ಣನೆಯುಂಟು. ಈ ಪ್ರಸಂಗದಿಂದ ಈ ಸ್ಥಳಕ್ಕೆ ಮೃಗದಾವವೆಂಬ ಹೆಸರು ಬಂದಿತು, ಈಗ ಈ ಸ್ಥಳಕ್ಕೆ ಸಾರನಾಥ ಇಲ್ಲವೆ ಸಾರ೦ಗನಾಥನನ್ನು ವರು.