ಪುಟ:ಅಶೋಕ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, tx/MY VVV V+4 v y v/\r\ » * * • •W /Y / MMMMMM W ಹಲವು ಸ್ಥಳಗಳಲ್ಲಿ ಧರ್ಮಲಿಪಿ ಎಂದು ಹೇಳಲ್ಪಟ್ಟಿವೆ, ರಾಜಕಾರ್ಯಗಳ ಸೌಕರ್ಯ ಕ್ಯಾಗಿಯೂ, ಮಾನವರ ಆಧ್ಯಾತ್ಮಿಕ ಉನ್ನತಿಗಾಗಿಯೂ ಈ ಅನುಶಾಸನಗಳು ಕೊರೆ ಯಲ್ಪಟ್ಟಿದ್ದವು, ಅಶೋಕನು ಕೆಲವು ನೀತಿಸೂತ್ರಗಳನ್ನಷ್ಟೇ ಪ್ರಕಟಿಸಿ ಸುಮ್ಮನಿರದೆ ಮನುಷ್ಯನ ಇಹಪರ ಸಾಧನೆಗಾಗಿ ಕೆಲವು ನಿಷೇಧರೂಪ ನಿಯಮಗಳನ್ನು ಪ್ರಕಟಿಸಿ ದನು. ಈ ನೈತಿಕ ಉಪದೇಶಗಳು ಪ್ರಜೆಗಳ ಜೀವನ ಕ್ರಮದಲ್ಲಿ ನಿಜವಾಗಿ ಕಾರ್ಯತಃ ಉಪಯೋಗಿಸಲ್ಪಡುತ್ತವೆಯೋ ಇಲ್ಲವೋ ಎಂಬದರ ಮೇಲ್ವಿಚಾರಣೆಗಾಗಿ ಉಚ್ಚವ ರ್ಗದ ಕಾಮದಾರರು ಕೂಡ ನಿಯಮಿಸಲ್ಪಟ್ಟಿದ್ದರು. ಅಹಿಂಸೆ, ಸತ್ಯನಿಷ್ಠೆ, ಪರೋಪ ಕಾರ, ನಿಷ್ಕಾಮಕರ್ಮ ಇವೇ ಈ ಧರ್ಮವಿಧಿಗಳ ಮೂಲವು, ತಾಯಿ ತಂದೆಗಳು, ಗುರುಹಿರಿಯರು ಇವರ ಮೇಲೆ ಭಕ್ತಿ, ಅವರ ಅಪ್ಪಣೆಗಳನ್ನು ಪಾಲಿಸುವದು, ಸಾಧುಗಳ ಮತ್ತು ದರಿದ್ರರ ಸೇವೆ, ಪವಿತ್ರತೆ, ವಾತ್ಸಂಯಮ ಇವೆಲ್ಲ ಆ ಧರ್ಮವಿಧಿಗಳಲ್ಲಿ ಸೇರಿ ದ್ದವು, ಮೊದಲು ಯಜ್ಞ, ಹೋಮ, ಬೇರೆ ಧರ್ಮಕಾರ್ಯಗಳು ಇವುಗಳಲ್ಲಿ ಆಕಳು, ಕುದುರೆ, ಹೋತು ಮೊದಲಾದ ಪ್ರಾಣಿಗಳು ಬಲಿಕೊಡಲ್ಪಡುತ್ತಿದ್ದವು, ಮತ್ತು ಬಲಿ ಕೊಟ್ಟ ಪ್ರಾಣಿಗಳ ಮಾಂಸವನ್ನು ಎಲ್ಲರೂ ಸ್ವೀಕರಿಸುತ್ತಿದ್ದರು. ಬೇಟೆಯಲ್ಲಿಯೂ ನಾಮಾ ಜಿಕ ಪರ್ವಗಳಲ್ಲಿಯೂ ಆಹಾರಕ್ಕೊಸ್ಕರ ಹಲವು ಪಶುಪಕ್ಷಿಗಳು ಕೊಲ್ಲಲ್ಪಡುತ್ತಿ ದ್ದವು. ಈ ಪ್ರಾಣಿಹಿಂಸಾ ಪದ್ದತಿಯನ್ನು ನಾಶಗೊಳಿಸುವದಕ್ಕಾಗಿ ಅಶೋಕ ಮಹಾರಾ ಜನು ತನ್ನ ಆಳಿಕೆಯ ೧೩ನೆಯ ವರ್ಷ ಯಜ್ಞದಲ್ಲಿ ಇಲ್ಲವೆ ಪರ್ವಗಳಲ್ಲಿ ಯಾರೂ ರಾಜ್ಯ ದಲ್ಲಿ ಪ್ರಾಣಿಹಿಂಸೆಯ ಮಾಡಬಾರದೆಂದು ಪ್ರಕಟಿಸಿದನು. ಮೊದಲಿನಿಂದ ಅರಮನೆಯ ಅಡಿಗೆಮನೆಯಲ್ಲಿ ಅಡುವಳರು ಹಲವು ತರದ ಮಾಂಸದ ಅಡಿಗೆಗಳನ್ನು ಮಾಡುತ್ತಿದ್ದರು. ಅಶೋಕನು ತನ್ನ ಮೊದಲನೆಯ ಗಿರಿಲಿಪಿಯಲ್ಲಿ ಅದನ್ನು ನಿಷೇಧಿಸಿದ್ದನು. ಬೌದ್ದಧ ರ್ಮವನ್ನು ಸ್ವೀಕರಿಸಿದಂದಿನಿಂದ ಅವನು ಮಾಂಸಭೋಜನವನ್ನು ಬಿಡುವದಕ್ಕೆ ಪ್ರಯ ತ್ನಿಸತೊಡಗಿದನು. ಅವನು ಮೇಲೆ ಹೇಳಿದ ಗಿರಿಲಿಪಿಯಲ್ಲಿ * ಸ್ಪಷ್ಟವಾಗಿ ಹೇಳಿದ್ದೆ ನಂದರೆ- ಮೊದಲು ರಾಜನ ಅಡಿಗೆಯ ಮನೆಯಲ್ಲಿ ಆಹಾರಕ್ಕೊಸ್ಕರ ಸಹಸ್ರಾವಧಿ ಪ್ರಾಣಿಗಳು ಕೊಲ್ಲಲ್ಪಡುತ್ತಿದ್ದವು, ಈಗ ಕೇವಲ ಎರಡು ನವಿಲುಗಳು ಮತ್ತು ಒಂದು ಚಿಗರೆಯು ಮಾತ್ರ ಕೊಲ್ಲಲ್ಪಡುತ್ತಿವೆ. ಚಿಗರೆಯು ದಿನಾಲು ಕೊಲ್ಲಲ್ಪಡುವದಿಲ್ಲ. ಮುಂದೆ ಈ ಮೂರು ಪ್ರಾಣಿಗಳೂ ಕೊಲ್ಲಲ್ಪಡಲಾರವು. ” ಅಶೋಕನು ತನ್ನ ಆಳಿಕೆಯ ೨೭ನೆಯ ವರ್ಷ ೫ನೆಯ ಸ್ತಂಭಲಿಪಿಯಲ್ಲಿ ಹಲವು ಪ್ರಾಣಿಗಳನ್ನು ಹೆಸರುಗೊಂಡು ಹೇಳಿ ಅವು ಗಳ ಹಿಂಸೆಯನ್ನು ನಿಷೇಧಿಸಿರುವನು. ಇನ್ನು ಮೇಲೆ ನನ್ನ ಅಳಿಕೆಯಲ್ಲಿ ಯಾರೂ ಈ ಪ್ರಾಣಿಗಳನ್ನು ಕೊಲ್ಲಬಾರದು:- સ 36 ಈ ಶಾಸನದ ನಕ 3

  • ರೌಲಿ, ಗಿರ್ನಾರ, ಜುನಾಗಡ, ಕಾಲ್ಸಿ, ಸಾಹಾವಾಜಗಿರಿ ಈ ಎ ಇತಿಗಳು ದೊರೆತಿವೆ.