ಪುಟ:ಅಶೋಕ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Yv ಅಶೋಕ ಅಥವಾ ಪ್ರಿಯದರ್ಶಿ. Mwervvvv. •••••. +

    • **rry,

ತುಷಾಗ್ನಿಯಲ್ಲಿ ಯಾವ ಜೀವಂತ ಪ್ರಾಣಿಯನ್ನೂ ಸುಡಬಾರದು. ಯಾರಿಗಾದರೂ ಹಾನಿಮಾಡಬೇಕೆಂದು ಇಲ್ಲವೆ ಪ್ರಾಣಿವಧ ಮಾಡಬೇಕೆಂದು ಯಾರೂ ಕಾಡನ್ನು ಸುಡಬಾ ರದು. ಚಾತುರ್ಮಾಸ್ಯದ ( ಆಷಾಢ ಪೂರ್ಣಿಮೆಯಿಂದ ಕಾರ್ತಿಕ ಪೌರ್ಣಿಮೆಯವರೆಗೆ ) ಪ್ರತಿಯೊಂದು ಪೌರ್ಣಿಮೆ, ಅಮಾವಾಸ್ಯೆ, ಪಾಡ್ಯ, ವರ್ಷದ ಉಪೋಸಥ ದಿವಸಗಳು ಇವುಗಳಲ್ಲಿ ಮತ್ತ್ವವಧ, ಮತ್ತ್ವವಿಕ್ರಯಗಳನ್ನು ಮಾಡಕೂಡದು, ಮೇಲೆ ಹೇಳಿದ ದಿವ ಸಗಳಲ್ಲಿ ಯಾರೂ ನಿನಗಳುಳ್ಳ ಪುಷ್ಕರಿಣಿಗಳಲ್ಲಿ ಯಾವ ರೀತಿಯಿಂದಲೂ ಪ್ರಾಣಿವಧ ಮಾಡಬಾರದು. ಅಷ್ಟಮಿ, ಚತುರ್ದಶಿ, ಅಮಾವಾಸ್ಯೆ, ಪೂರ್ಣಿಮೆ ಪುಷ್ಯ ಪುನರ್ವಸು ನಕ್ಷತ್ರಗಳ ದಿವಸಗಳು ಇವುಗಳಲ್ಲಿ ಟಗರು, ಎತ್ತು, ಹೋತು, ಹಂದಿ, ಮೊದಲಾದವುಗ ಳನ್ನು ಹಿಂಸಿಸಬಾರದು. ಪುಷ್ಯ ಪುನರ್ವಸು ನಕ್ಷತ್ರಗಳ ದಿವಸ, ಪ್ರತಿಯೊಂದು ಚಾತು ರ್ಮಾಸ್ಯದ ಪೌರ್ಣಿಮೆಯ ದಿವಸ ಇಲ್ಲವೆ ಪಕ್ಷದ ಬೇರೆ ದಿವಸಗಳು ಇವುಗಳಲ್ಲಿ ಕುದುರೆ ಇಲ್ಲವೆ ಎತ್ತು ಇವುಗಳ ಹಿಂಸೆಯನ್ನು ಮಾಡಲಾಗದು. ಅಶೋಕನು ಪ್ರಾಣಿಹಿಂಸೆಯನ್ನು ನಿಲ್ಲಿಸುವದಕ್ಕೆ ಬರೆದಿಟ್ಟ ನಿಯಮಗಳನ್ನು ಎರಡು ಸಾವಿರ ವರ್ಷಗಳ ತರುವಾಯ ಈಗ ಓದಿದರೆ ಒಮ್ಮೆಲೆ ಆಶ್ಚರ್ಯವೂ ಅನಂದವೂ ಉಂಟಾಗುವವು. ಯಾವನು ಸಮುದ್ರಾಂಕಿತ ಭರತಖಂಡದ ಏಕಚಕ್ರಾಧಿಪತಿಯೋ, ಯಾವನ ಪ್ರತಾಪವು ಉತ್ತರದಲ್ಲಿ ಹಿಮಾಚಲದ ಪಾದಭೂಮಿಯನ್ನು ಹಿಡಿದು ದಕ್ಷಿಣ ದಲ್ಲಿ ಈಗಿನ ಮೈಸೂರು ಪ್ರದೇಶ ಪೂರ್ವಕ್ಕೆ ಬಂಗಾಲ ಉಪಸಾಗರ ಮತ್ತು ಬ್ರಹ್ಮ ಪುತ್ರ ಇವುಗಳನ್ನು ಹಿಡಿದು ಪಶ್ಚಿಮಕ್ಕೆ ಗಾಂಧಾರರಾಜ್ಯ ಇವುಗಳವರೆಗೆ ನೆಲೆಗೊಂಡಿತ್ತೊ ಯಾವಾತನ ರಾಜ್ಯ ಶಾಸನವನ್ನು ನೋಡಿ ಪರದೇಶದ ಸಮರ್ಥರಾದ ರಾಜರು ಕೂಡ ಅಂಜಿ ನಡುಗುತ್ತಿದ್ದರೋ ಅವನು ಹಂದಿ ಮೀನ ಮೊದಲಾದ ಕ್ಷುದ್ರಪ್ರಾಣಿಗಳ ಪ್ರಾಣ ರಕ್ಷಣೆಗೂ ವ್ಯಾಕುಲನಾಗುತ್ತಾನೆ ! ಈ ದೃಶ್ಯವನ್ನು ನೋಡಿದರೆ ಯಾವನ ಹೃದಯವು ಕರಗದು ? ಯಾವನು ವಿಲಾಸಭೋಗ-ಐಶ್ವರ್ಯಪೂರ್ಣವಾದ ಸುವರ್ಣ ಸಿಂಹಾಸನದ ಮೇಲೆ ಕುಳಿತಿರುವನೋ ಅವನು ಒಂದು ಸಾಮಾನ್ಯ ಇರುವೆಯ ಪ್ರಾಣವನ್ನು ಕೂಡ ಯಾರೂ ತೆಗೆದುಕೊಳ್ಳಬಾರದೆಂದು ತನ್ನ ನಾಮ್ರಾಜ್ಯದ ಒಂದು ತುದಿಯಿಂದ ಇನ್ನೊಂದು ತುದಿಯ ವರೆಗೆ ಕರುಣಸ್ವರದಿಂದ ಪ್ರಕಟಿಸುತ್ತಾನೆ ! ಇದು ಅಭೂತಪೂರ್ವವು! ನೂತ ನವು ! ಮಾನವ ಜಾತಿಯ ಇತಿಹಾಸದಲ್ಲಿ ದುರ್ಲಭವು!? ಪ್ರಿಯದರ್ಶಿಯು ತಾನು ಕೊರೆಯಿಸಿದ ಗಿರಿಲಿಸಿ ಮೊದಲಾದವುಗಳಲ್ಲಿ ಎಲ್ಲಿಯೂ CC ನಿರ್ವಾಣ ”, “ ಕರ್ಮ ”, “ ಚತುರಾಯನ ಸತ್ಯ”, “ ಅಷ್ಟಾಂಗ ಕರ್ಮ ” ಮೊದ ಲಾದವುಗಳ ಉಲ್ಲೇಖವನ್ನು ಮಾಡಿಲ್ಲವೆಂಬದು ನಿಜವು. ಆದರೂ ಅವೆಲ್ಲವುಗಳನ್ನು ಓದಿ ದರೆ ಅವನ ಶಾಸನಗಳಲ್ಲೆಲ್ಲ ಬುದ್ದದೇವನ ಉಪದೇಶಗಳ ಸಾರಾಂಶವೇ ಇರುವದೆಂದು ಸ್ಪಷ್ಟ ವಾಗಿ ತೋರುವದು, ಇವುಗಳಲ್ಲಿ ಸುಲಭಭಾಷೆಯಿಂದ ಜ್ಞಾನ, ಭಕ್ತಿ, ಸತ್ಯ,