ಪುಟ:ಅಶೋಕ.djvu/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Aso ಅಶೋಕ ಅಥವಾ ಪ್ರಿಯದರ್ಶಿ. +/- ' + , ". - *-2 # P// -* * * * * * * * * * * * *

  • /* */** * * *

ತಳಹದಿಯ ಮೇಲೆ ನಿಂತಂಥದು. ಆದದರಿಂದ ಅಶೋಕನು ಯಾವ ವಿಚಾರನ್ನೂ ಮಾಡದೆ ಆ ಧರ್ಮವಿಧಿಗಳನ್ನು ಜಗತ್ತಿನ ಇಹಪರ ಕಲ್ಯಾಣಕ್ಕಾಗಿ ಮೇಲಿಂದ ಮೇಲೆ ಉಪದೇಶಿಸಿದನು. ಅಶೋಕನು ತನ್ನ ಮೊದಲನೆಯ ಕುದ್ರಗಿರಿಲಿಪಿಯಲ್ಲಿ -ಸಣ್ಣವನೇ ಆಗಲಿ, ದೊಡ್ಡವನೇ ಆಗಲಿ, ಎಲ್ಲರೂ ತಮ್ಮ ಕರ್ಮಗಳಿಂದ ಮುಕ್ತಿಯನ್ನು ಹೊಂದು ವರು ಎಂದು ಪ್ರಕಟಿಸಿರುವನು. ಮೊದಲನೆಯ ಸ್ತಂಭಲಿಪಿಯಲ್ಲಿಯೂ, ೧೦ನೆಯ ಗಿರಿಲಿ ಪಿಯಲ್ಲಿಯೂ “ ಪ್ರಿಯದರ್ಶಿರಾಜನು ಆಚರಿಸುವದೆಲ್ಲವೂ ಪರಲೋಕಕ್ಕೋಸ್ಕರವೇ. ಎಲ್ಲರೂ ಆಪತ್ತಿಲ್ಲದವರಾಗಲಿ, ಪಾಪವೇ ಆಪತ್ತು. ಸಣ್ಣವನೇ ಆಗಲಿ, ದೊಡ್ಡವನೇ ಆಗಲಿ, ಎಲ್ಲರೂ ಅತ್ಯಂತ ಪ್ರಯತ್ನ, ಸರ್ವತ್ಯಾಗ ಇವುಗಳನ್ನು ಮಾಡಿದ ಹೊರತು ಇದು ದುರ್ಲಭವು; ಅತ್ಯಂತ ಧರ್ಮಾನುರಾಗ, ಆತ್ಮ ಪರೀಕ್ಷೆ, ಅತ್ಯಂತ ಧರ್ಮಭಯ, ಬಹಳವಾದ ಸಾಧನೆ ಇವುಗಳಿಲ್ಲದೆ ಇಹಪರಸುಖವು ದುರ್ಲಭವು ” ಎಂದು ಪ್ರಕಟಿಸಿರುವನು. ಬೌದ್ಧಗ್ರಂಥಗಳಲ್ಲಿ ಈ ಸತ್ಯವು ಮೇಲಿಂದ ಮೇಲೆ ಪ್ರಕಟಿಸಲ್ಪಟ್ಟಿದೆ. ಬುದ್ದದೇ ವನು ಈಶ್ವರನ ಅಸ್ತಿತ್ವದ ವಿಷಯವಾಗಿ ಮೌನವಾಗಿದ್ದು ತಮ್ಮ ಕರ್ಮಗಳಿಂದ ನಿರ್ವಾ ಣವನ್ನು ಹೊಂದಬೇಕೆಂದು ಎಲ್ಲರಿಗೂ ಉಪದೇಶಮಾಡಿದನು. ಅಶೋಕನು ಅದೇ ಮೇರೆಗೆ ಎಲ್ಲರೂ ತಮ್ಮ ಕರ್ಮಗಳಿಂದ ಇಹಪರ ಸುಖವನ್ನು ಹೊಂದಬೇಕೆಂದು ಪ್ರಕ ಟಿಸಿದನು, ಎಲ್ಲಿಯೂ ಈಶ್ವರನ ದಯ, ಅನುಗ್ರಹ ಇವುಗಳ ಉಲ್ಲೇಖವನ್ನು ಮಾಡಿಲ್ಲ. ಭರತಖಂಡದ ಪ್ರಾಚೀನ ಪುಣ್ಯಶ್ಲೋಕರಾದ ನರಪತಿಗಳಿಗೂ, ಅಶೋಕನಿಗೂ ಈ ಧರ್ಮವಿಧಿಗಳ ರಚನೆಯಲ್ಲಿಯೇ ಭೇದವು ಕಂಡುಬರುವದು, ರಾಮಚಂದ್ರ, ಯುಧಿ ಸ್ಥಿರ ಮೊದಲಾದ ಮಹಾಪುರುಷರು ತಮ್ಮ ಉದಾರಹರಣವನ್ನು ಮನುಷ್ಯ ಸಮಾಜ ದಲ್ಲಿ ಹಾಕಿಟ್ಟಿರುವರು. ಅವರು ಈ ಜಗತ್ತಿನಲ್ಲಿ ತಮ್ಮ ಚರಿತ್ರಬಲವನ್ನು ನಿರ್ಭಯವಾಗಿ ಕಾಯ್ದು ಕೊಂಡು ತಮ್ಮ ಪ್ರಭಾವವನ್ನು ಪ್ರಕಟಿಸಿದರು. ಈ ಮೇರೆಗೆ ಅಶೋಕ ಚರಿತ್ರವು ಸಮಾಜದಲ್ಲಿ ಸ್ಪುಟವಾಗಿ ಮೂಡಿರದಿದ್ದರೂ, ಅಶೋಕನಂಥ ಪ್ರತಾಪಶಾಲಿಗಳಾದ ಎಷ್ಟೋ ಅರಸರು ಆಗಿರಬಹುದಾಗಿದ್ದರೂ ಆತನು ವಿಶೇಷ ಪ್ರಕಾರದ ಮಹಾತ್ಮನಾದ ಅರಸನಾಗಿದ್ದನೆಂಬದು ಈ ಧರ್ಮವಿಧಿಗಳಿಂದ ಸ್ಪಷ್ಟವಾಗುವದು. ಈ ಧರ್ಮವಿಧಿ ಗಳೇ ಅಶೋಕನ ಜಯಪತಾಕೆಗಳು, ಆತನ ದಿವ್ಯವಾದ ಪ್ರಕಾಶವು ಎರಡು ಸಾವಿರ ವರ್ಷಗಳ ದಟ್ಟವಾದ ಆವರಣವನ್ನು ಭೇದಿಸಿ ಈ ಹೊತ್ತಿಗೂ ಹೊರಬೀಳುತ್ತಿರುವದು. ಆತನು ತನ್ನ ಕೈಯಲ್ಲಿರುವ ಪ್ರಜೆಗಳನ್ನು, ಅಷ್ಟೇ ಏಕೆ ಎಲ್ಲ ಮಾನವಜಾತಿಯನ್ನು ಉದ್ದ ರಿಸಬೇಕೆಂದು ಪ್ರಯತ್ನಿಸಿದನು, ಮಕ್ಕಳು ವಿದ್ವಾಂಸರೂ ಸದಾಚಾರಿಗಳೂ ಆಗಿರಬೇ ಕೆಂದು ತಂದೆಯು ಬಯಸುವಂತೆ ಅಶೋಕನು ಸಿಂಹಾಸನದ ಮೇಲೆ ಕುಳಿತು ಸಮಗ್ರ ಮಾನವಜಾತಿಯ ಕಲ್ಯಾಣವನ್ನು ಬಯಸುತ್ತಿದ್ದನು. ಈ ವಿಷಯದಲ್ಲಿ ಅವನಂತೆ ಇನ್ನಾರೂ ಆಗಲಿಲ್ಲ. ಯಾವದೊಂದು ಸಂಪ್ರದಾಯವನ್ನು ಇಲ್ಲವೆ ಮತವನ್ನು ಹಿಡಿಯದೆ ಉದಾರ