ಪುಟ:ಅಶೋಕ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ಗಿ೨೧ YY JJv - -

  • ,*/

• ••••••••••••• ಧರ್ಮಮತವನ್ನು ಅವಲಂಬಿಸಿ ಆತನು ಎಲ್ಲರೂ ತಮ್ಮ ತಮ್ಮ ಕರ್ಮಗಳಿಂದ ಮುಕ್ತಿ ಯನ್ನು ಹೊಂದಬೇಕೆಂದು ಕಲಿಸಿದನು. ಅವನು ದಾರ್ಶನಿಕ ಯುಕ್ತಿಗಳಿಂದ, ಇಲ್ಲವೆ ಬಲಾತ್ಕಾರದಿಂದ ತನ್ನ ಮತವನ್ನು ಸ್ಥಾಪಿಸುವದಕ್ಕಾಗಿ ಮೂಢಭಕ್ತಿಯ ಅವಲಂಬನ ಮಾಡಲಿಲ್ಲ. ಪವಿತ್ರತೆಯಿಂದ ಜೀವನಕ್ರಮ, ಇಂದ್ರಿಯ ನಿಗ್ರಹ, ಕರ್ತವ್ಯನಿಷ್ಠೆ ಇವು ಮಾನವರ ಉನ್ನತಿಯ ಮಾರ್ಗಗಳೆಂದು ಆತನು ಹೇಳಿದನು. ಅಶೋಕನು ಹೊಸ ದೊಂದು ಮತವನ್ನು ಇಲ್ಲವೆ ಸಂಪ್ರದಾಯವನ್ನು ಸ್ಟಾಪಿಸಲಿಲ್ಲ. ಆತನು ತರ್ಕವಿಲ್ಲದೆ ಯಾವ ಸತ್ಯಗಳು ಜಗತ್ತಿನಲ್ಲಿ ಸ್ವೀಕರಿಸಲ್ಪಡುವವೋ ಅವುಗಳನ್ನೇ ಪ್ರಕಟಿಸಿದನು. ಆತನು ಜಾತಿಭೇದವಿಲ್ಲದೆ ಮನುಷ್ಯ ಪ್ರಕೃತಿಯಲ್ಲಿ ಸ್ವಾಭಾವಿಕವಾಗಿ ಇರುವ ಸದ್ಯ ಗಳನ್ನು ವಿಕಾಸಗೊಳಿಸುವದಕ್ಕೂ ಎಲ್ಲಿ ಮಾನವರನ್ನು ಪ್ರೇಮಸೂತ್ರದಿಂದ ಸಂಬಂಧ ಪಡಿಸುವದಕ್ಕೂ ಪ್ರಯತ್ನಿ ಸಿದನು. ಆತನ ಧರ್ಮನೀತಿಯು ಆಕಾಶದಂತೆ ವಿಶ್ವವ್ಯಾಪಿ ಯೂ ನಿರ್ಮಲವೂ ಉದಾರವೂ ಆಗಿರುವದು. ತಾಯಿತಂದೆಗಳಲ್ಲಿ ಭಕ್ತಿ, ಗುರುಹಿರಿಯರಲ್ಲಿ ಶ್ರದ್ದೆ, ಮಿತ್ರರ ಮೇಲೆ ಉಪಕಾರ, ಸಾಧುಸಜ್ಜನರ ಸೇವೆ, ಅನಾಥರಿಗೂ ದುಃಖಿಗಳಿಗೂ ದಾನ, ಅಹಿಂಸೆ, ದಯೆ, ಸತ್ಯ ನಿಷ್ಠೆ, ಪ್ರತಿಯೊಂದು ಪ್ರಾಣಿಯ ಜೀವವು ಪವಿತ್ರವೆಂಬ ತಿಳುವಳಿಕೆ ಇವು ಅಶೋಕನ ಧರ್ಮವಿಧಿಗಳ ಮುಖ್ಯ ಧೈಯಗಳಾಗಿದ್ದವು. ಈಶ್ವರನ ಅಸ್ತಿತ್ವ ಇಲ್ಲವೆ ನಾಸ್ತಿತ್ವ ಇಲ್ಲವೆ ಯಾವದೊಂದು ಧರ್ಮಕೃತ್ಯದ ಮಹಿಮೆ ಇವುಗಳನ್ನು ಅಶೋಕನು ಹೇಳಲಿಲ್ಲ. ಎಲ್ಲ ಪ್ರಜೆಗಳೂ ಉತ್ತಮ ಕರ್ಮಗಳಿಂದ ಮುಕ್ತರಾಗುವರೆಂಬ ಸರಲ ಉಪದೇಶವನ್ನೇ ಆತನು ಮಾಡಿದನು. ಈ ಮೇರೆಗೆ ಉಪದೇಶವನ್ನಷ್ಟೇ ಮಾಡಿ ಸುಮ್ಮನಿರದೆ ಪ್ರಜೆಗಳು ನಿತ್ಯಕ್ರಮದಲ್ಲಿ ಆ ಉಪದೇಶಗಳನ್ನು ಪಾಲಿಸುವಂತೆ ನೋಡಿಕೊಳ್ಳುವದಕ್ಕೆ ಧರ್ಮ ಮಹಾಮಾತ್ರ, ರಾಜೂಕ, ಪ್ರಾದೇಶಿಕ, ಧರ್ಮಪ್ರಚಾರಕ ಎಂಬ ಅಧಿಕಾರಿಗಳನ್ನು ನಿಯಮಿಸಿದ್ದನು. ಅಶೋಕನು ತನ್ನ ಆಳಿಕೆಯ ೧೪ನೆಯ ವರ್ಷ ಧರ್ಮ ಮಹಾಮಾತ್ರ ರನ್ನು ನಿಯಮಿಸಿದ್ದನು. ಯವನ, ಕಾಂಭೋಜ, ಗಾಂಧಾರ ರಾಷ್ಟ್ರ ಕ ಪಿಠನಿಕಾಶ ಮೊದಲಾದ ಮೇರೆಯ ಪ್ರದೇಶದ ನಿವಾಸಿಗಳಲ್ಲಿಯೂ ಧರ್ಮಪ್ರಸಾರ ಮಾಡುವದ ಕ್ಯಾಗಿ ಧರ್ಮಮಹಾಮಾತ್ರರು ಕಳಿಸಲ್ಪಟ್ಟಿದ್ದರು. ಅಶೋಕನ ಆಳಿಕೆಯಲ್ಲಿ ರಾಜ ದಂಡವು ಧರ್ಮಶಾಸನವನ್ನೂ ಮಾಡುತ್ತಿತ್ತು. ಧರ್ಮವಿಧಿಯು ಅಶೋಕನ ಮಹತ ವನ್ನೂ ಗೌರವವನ್ನೂ ನಿಜವಾಗಿ ತೋರ್ಪಡಿಸುವದು, ಗೀತೆ, ಉಪನಿಷತ್ತು ಮೊದಲಾದ ಧರ್ಮಗ್ರಂಥಗಳು ಹೇಗೆ ಹಳೆಯವೆನಿಸಲಾರವೋ ಹಾಗೆಯೇ ಅಶೋಕನು ಕಲ್ಲುಗಳ ಮೇಲೆ ಕೊರೆಯಿಸಿದ ಧರ್ಮವಿಧಿಗಳೂ ಹಳೆಯವಾಗಲಾರವು, ಅವು ಯಾವಾಗಲೂ ಹೊಸವೇ, ಯಾವಾಗಲೂ ಸತ್ಯವಾದಂಥವೇ, ಯಾವಾಗಲೂ ಶಾಂತಿಯನ್ನು ಕೊಡು ವಂಥವೇ. 16