ಪುಟ:ಅಶೋಕ.djvu/೧೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಅಶೋಕ ಅಥವಾ ಪ್ರಿಯದರ್ಶಿ. YY - - - - - - - * - * ೧೨ನೆಯ ಅಧ್ಯಾಯ. -2 ಅಶೋಕನ ಕಾಲದಲ್ಲಿ ಭಾಷೆಯೂ ನಾಣ್ಮಯವೂ, ಶೋಕ ಯುಗದಲ್ಲಿ ಭರತಖಂಡದ ನಿವಾಸಿಗಳು ಜ್ಞಾನದಲ್ಲಿಯೂ, ಧರ್ಮ ' ದಲ್ಲಿಯೂ, ಎಷ್ಟು ಮಟ್ಟಿಗೆ ಉತ್ಕರ್ಷವನ್ನು ಹೊಂದಿದ್ದರೆಂಬದನ್ನು ಹಿಂದಿನ ಅಧ್ಯಾಯಗಳಲ್ಲಿ ತೋರಿಸುವದಕ್ಕೆ ಪ್ರಯತ್ನಿಸಿರುವೆವು, ಅಶೋಕ ಮಹಾ ರಾಜನ ಕಾಲವು ಸ್ವದೇಶ ಪರದೇಶಗಳಲ್ಲಿ ಅವನು ಬೌದ್ಧ ಧರ್ಮವನ್ನು ಪ್ರಚಾರಮಾಡಿದ ಮಾತ್ರದಿಂದ ಇಲ್ಲವೆ ವಿಶಾಲವಾದ ನಾಮ್ರಾಜ್ಯವನ್ನು ಆಳಿದನೆಂಬ ಮಾತ್ರದಿಂದ ಪ್ರಸಿದ್ದಿಯನ್ನು ಹೊಂದಿದೆಯೆಂದು ಹೇಳುವಂತೆ ಇಲ್ಲ. ಆ ಕಾಲವು ಜ್ಞಾನ, ಧರ್ಮ, ರಾಜನೀತಿ, ಸಮಾಜನೀತಿ, ಶಿಲ್ಪವಿದ್ಯೆ ಇವುಗಳಲ್ಲಿ ಉಚ್ಚದತೆಯನ್ನು ಹೊಂದಿ ದಂತೆ, ಭಾಪಾಸಾಹಿತ್ಯಗಳಲ್ಲಿಯೂ ಉತ್ಕರ್ಷವನ್ನು ಹೊಂದಿ ಇತಿಹಾಸದಲ್ಲಿ ಚಿರಸ್ಮರಣೀ ಯವಾಗಿರುವದು. ಯಾವ ಪ್ರಾಚೀನಯುಗದಲ್ಲಿ ಮನುಷ್ಯರ ಭಾಷೆಯು ಗ್ರಂಥಸ್ಸವಾಯಿತು, ಮತ್ತು ಯಾವ ಕಾಲದಿಂದ ಅಕ್ಷರಗಳು ಪ್ರಚಾರದಲ್ಲಿ ಬಂದು ಜನರ ಸುಧಾರಣೆಯಲ್ಲಿ ಕ್ರಾಂತಿಯ ನುಂಟುಮಾಡಿದವು, ಎಂಬದನ್ನು ನಿಶ್ಚಿತವಾಗಿ ನಿರ್ಣಯಿಸುವದು ಅಸಾಧ್ಯವು, ಭರತಖಂಡ ದಲ್ಲಿ ಲೇಖನಪದ್ಧತಿಯುಂಟಾದ ಕಾಲಾವದು, ಆ ಲೇಖವು ಗ್ರಂಥಗಳಲ್ಲಿ ಯಾವಾಗ ಪ್ರಚಲಿತವಾಯಿತು, ಮುಂದೆ ಬೌದ್ದ ವಾಯವು ಹೇಗೆ ಉಂಟಾಯಿತು, ಆ ವಾಜ್ ಯವ ಅಶೋಕನ ಕಾಲದಲ್ಲಿ ಹೇಗೆ ಬೆಳವಣಿಗೆಹೊಂದಿತು ಎಂಬದನ್ನು ಇಲ್ಲಿ ಆಲೋಚಿಸುವ. ಭಾಷೆಯು ಗ್ರಂಥರೂಪವನ್ನು ಹೊಂದಿ ಜನಗಳಲ್ಲಿ ಪ್ರಚಾರವಾಗಬೇಕಾದರೆ ಅಕ್ಷ ರಗಳ ನಾಹಾಯ್ಯವು ಬೇಕು. ಭರತಖಂಡದಲ್ಲಿ ಈಗ ಎಷ್ಟು ಪ್ರಕಾರದ ಅಕ್ಷರಗಳು ಪ್ರಚಾರದಲ್ಲಿರುವವೊ, ಹಿಂದೆ ಇದ್ದ ವೊ, ಅವುಗಳಲ್ಲೆಲ್ಲ ಅಶೋಕ ಅಕ್ಷರಗಳೇ ಎಲ್ಲಕ್ಕೂ ಹಳೆಯವೆಂದು ಹೇಳುವರು. ಅಶೋಕ ಮಹಾರಾಜನ ಶಾಸನಗಳೆಲ್ಲ ಈ ಅಕ್ಷರಗಳಿಂದಲೇ ಬರೆಯಲ್ಪಟ್ಟಿದ್ದರಿಂದ ಇವಕ್ಕೆ ಅಶೋಕ ಅಕ್ಷರಗಳೆಂದು ಹೆಸರು. ಕ್ರಿ. ಪೂ. ೩ನೆಯ ಶತಮಾನದಿಂದ ಅಂದರೆ ಅಶೋಕ ಮಹಾರಾಜನ ಆಳಿಕೆಯ ಕಾಲದಿಂದ ಲೇಖನಪದ್ಧ ತಿಯು ಭರತಖಂಡದಲ್ಲಿ ಆರಂಭವಾಯಿತೆಂದು ಅನೇಕ ಯುರೋಪೀಯ ಪಂಡಿತರ ಅಭಿ ಪ್ರಾಯವಿರುವದು, ಅವರು ಪ್ರಾಚೀನ ಸೆಮಿಟಿಕ ಅಕ್ಷರಗಳಿಂದ ಅಶೋಕ ಅಕ್ಷರಗಳು