ಪುಟ:ಅಶೋಕ.djvu/೧೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨೪ ಅಶೋಕ ಅಥವಾ ಪ್ರಿಯದರ್ಶಿ. 4/yyyyyy/Jv ಪ್ರಾಚೀನ ದೇಶಗಳು ಬೇಕಾದಷ್ಟು ಸುಧಾರಣೆಯನ್ನು ಹೊಂದಿದ್ದವು. ಶಿಲ್ಪವಿದ್ಯೆ, ಕೃಷಿವಿದ್ಯೆ, ಧಾತುವಿದ್ಯೆ, ಸಂಗೀತ, ಧರ್ಮಶಾಸ್ತ್ರ ಮೊದಲಾದವು ವರ್ಣಮಾಲೆಯು ಪ್ರಚಾರದಲ್ಲಿ ಬರುವದಕ್ಕಿಂತ ಎಷ್ಟೋ ಕಾಲ ಮುಂಚೆ, ಭರತಭಂಡ, ಕ್ಯಾಲ್ಡಿಯ, ಮಿಸರ ಮೊದಲಾದ ದೇಶಗಳಲ್ಲಿ ಬೆಳವಣಿಗೆಯನ್ನು ಹೊಂದಿದ್ದವು, ಪ್ರಕೃತಿಯ ವಿಶ್ವ ಮೋಹಕ ಚಿತ್ರವು ಯಾವಾಗ ಮನುಷ್ಯಜಾತಿಯ ಕಣ್ಣೆದುರಿಗೆ ಪ್ರಕಾಶಿತವಾಯಿತೋ, ಇಲ್ಲವೆ ಯಾವಾಗ ಅದರ ರುದ್ರಮೂರ್ತಿಯು ನೋಡುವವರನ್ನು ವ್ಯಾಕುಲ ಮಾಡಿತೋ, ಆವಾಗಲೇ ಪ್ರೀತಿಯಿಂದಾಗಲಿ, ಭಕ್ತಿಯಿಂದಾಗಲಿ ಮನುಷ್ಯನು ತನ್ನ ಉದ್ಧಾರಗಳನ್ನು ಭಾಷೆಯಲ್ಲಿ ವ್ಯಕ್ತ ಮಾಡುವದಕ್ಕೆ ಪ್ರಯತ್ನಿಸಿದನು, ಆರ್ಯಋಷಿಗಳ ಕಂಠದಲ್ಲಿ ಉದಾತ್ತ, ಅನುದಾತ್ತ, ಸ್ವರಿತ ಸ್ವರಸಂಯೋಗದಿಂದ ವೈದಿಕ ಸೂಕ್ತಗಳು ಪ್ರತಿಧ್ವನಿತವಾಗುತ್ತಿದ್ದ ಸಮಯದಲ್ಲಿ ಲಿಪಿಯು ಪ್ರಚಾರದಲ್ಲಿರಲಿಲ್ಲ. ಯಾವಾಗ ಪ್ರಾಚೀನ ಕಾಲದ ಎಡಿಯದ ಪುರೋಹಿತರು ಉಚ್ಚ ಸ್ವರದಿಂದ ಆಶೀರ್ವಚನಗಳನ್ನು ಉಚ್ಚರಿ ಸುತ್ತಿದ್ದರೋ ಆವಾಗಲೂ ಅಕ್ಷರಸೃಷ್ಟಿಯಾಗಿರಲಿಲ್ಲ, ಅಥವಾ ಯಾರು ಟ್ರೋಯ, ನಗರದ ಧ್ವಂಸವಾರ್ತೆಯನ್ನು ಗಾನಮಾಡುತ್ತ ತಿರುಗುತ್ತಿದ್ದರೋ ಅವರೂ ಅಕ್ಷರಗ ಳನ್ನು ತಿಳಿದಿರಲಿಲ್ಲ. ಅತಿಪ್ರಾಚೀನೇತಿಹಾಸವನ್ನು ನೋಡಲು ಅಕ್ಷರಸೃಷ್ಟಿಯಾಗುವದಕ್ಕೆ ಮುಂಚೆ ಶಿಲ್ಪ, ವಾಣಿಜ್ಯ, ಧರ್ಮಶಾಸ್ತ್ರ ಮೊದಲಾದವು ಬಹಳ ದೇಶಗಳಲ್ಲಿ ಪ್ರಚಲಿತ ವಾಗಿದ್ದವೆಂದು ತಿಳಿದುಬರುವದು. ಅಕ್ಷರನಿರ್ಮಾಣವಾಗುವದಕ್ಕೆ ಮುಂಚೆ ಮೇಲೆ ಹೇಳಿದ ವಿಷಯಗಳು ಸಮಾಜದ ಇದ್ದವಷ್ಟೇ ಅಲ್ಲದೆ ಒಂದು ಪ್ರಕಾರದ ಲೇಖನಪದ್ಧತಿಯೂ ಇತ್ತು. ಪ್ರತಿಯೊಂದು ಶಬ್ದವನ್ನು ಪ್ರಕಟಮಾಡುವದಕ್ಕೆ ಒಂದೊಂದು ಸ್ವತಂತ್ರ ಚಿಹ್ನವಿತ್ತು. ಆಗ ಬರಹದಲ್ಲಿ ಬಹಳ ತೊಂದರೆಯಿತ್ತು. ಒಂದೊಂದು ಭಾಷೆಯಲ್ಲಿ ಎಷ್ಟೆಷ್ಟು ಶಬ್ದಗಳಿವೆಯೆಂಬ ದರ ಇಯತ್ತೆಯೇ ಇಲ್ಲವಾದದರಿಂದ ಪ್ರತಿಯೊಂದು ಶಬ್ದದ ಸಲುವಾಗಿ ಒಂದೊಂದು ಚಿಹ್ನ ವನ್ನು ಉಪಯೋಗಿಸುವದಾದರೆ ಆ ಚಿಹ್ನಗಳು ಅಸಂಖ್ಯವಾಗುವವೆಂಬದು ಸಹ ಜವಿದೆ. ಆ ಚಿಹ್ನೆಗಳನ್ನೆಲ್ಲ ಗೊತ್ತು ಮಾಡಿಕೊಳ್ಳುವಲ್ಲಿ ಒಬ್ಬನ ಎಲ್ಲಾ ಆಯುಷ್ಯವು ಕಳೆದುಹೋಗುತ್ತಿತ್ತು. ಆಗ ಬಹುತರ ಸಮಾಜದಲ್ಲಿ ಒಂದು ವಿವಕ್ಷಿತ ವರ್ಗದವರು ಮಾತ್ರ ಈ ಚಿಹ್ನಗಳನ್ನು ಕಲಿಯುತ್ತಿದ್ದರು. ನಾಧಾರಣ ಜನರು ಅದರ ಗೋಜಿಗೇ ಹೋಗುತ್ತಿರಲಿಲ್ಲ. ಲೇಖನಪದ್ಧತಿಯನ್ನು ಬಲ್ಲವರೇ ಶಾಸ್ತಚರ್ಚೆಯನ್ನು ಮಾಡುತ್ತಿ ದ್ದರು. ಮಿಸರ, ಅಸೀರಿಯಾ, ಚೀನ ಮೊದಲಾದ ದೇಶಗಳಲ್ಲಿ ಕೇವಲ ಪುರೋಹಿತರಷ್ಟೇ ಲೇಖನಪದ್ದತಿಯನ್ನು ತಿಳಿಯುತ್ತಿದ್ದರು. ಭರತಖಂಡದಲ್ಲಿಯೂ ಬ್ರಾಹ್ಮಣಜಾತಿ ಯೊಂದೇ ಶಾಸ್ತ್ರ ಚರ್ಚೆಯನ್ನು ಮಾಡುತ್ತಿತ್ತೆಂದೂ, ಪಾಮರರಿಗೆ ಶಾಸ್ತಚರ್ಚೆಯಲ್ಲಿ ಅಧಿ ಕಾರವಿರಲಿಲ್ಲವೆಂದೂ ಇತಿಹಾಸದಿಂದ ತಿಳಿಯುವದು. ಈ ಕೊರತೆಯನ್ನು ನೀಗುವದ ಕಾಗಿಯೇ ಅಕ್ಷರಸೃಷ್ಟಿಯಾಯಿತು,