ಪುಟ:ಅಶೋಕ.djvu/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೨ •••••••••••••••••••• مرمر مسيح Frry/*////wwYAF PPPPPPM ಹಿಂದೆ ಹೇಳಿದಂತೆ ಆ ಕಾಲದಲ್ಲಿ ಯಾವ ವಸ್ತುವಿನ ವಿಷಯವಾಗಿ ಹೇಳುವ ದಾದರೂ ಆ ವಸ್ತುವಿನ ಚಿತ್ರವನ್ನು ತೆಗೆದು ತೋರಿಸಬೇಕಾಗುತ್ತಿತ್ತು, ಈಗಲೂ ಈ ಪದ್ಧತಿಯ ನಿದರ್ಶನವು ಉಳಿದಿರುವದು. ಚೀನದೇಶದ ಅಕ್ಷರಗಳನ್ನು ನೋಡಿದರೆ ಅವು ವಸ್ತುವಿಶೇಷಗಳ ಚಿತ್ರಗಳ ಹೊರತು ಬೇರೆ ಇಲ್ಲವೆಂದು ಕಂಡುಬರುವದು. ಪೃಥ್ವಿಯಲ್ಲಿ ಯಾವ ಮನುಷ್ಯವರ್ಗವು ಎಲ್ಲಕ್ಕೂ ಮೊದಲು ಅಕ್ಷರಗಳನ್ನು ಪ್ರಕಟಮಾಡಿತೆಂಬದನ್ನು ನಿಶ್ಚಿತವಾಗಿ ಹೇಳುವದಕ್ಕೆ ಬರುವಂತೆ ಇಲ್ಲ. ಅನೇಕರು ಫಿನೀಸಿಯಾ ದೇಶದಲ್ಲಿ ಎಲ್ಲಕ್ಕೂ ಮೊದಲು ಅಕ್ಷರಗಳು ಹುಟ್ಟಿದವೆಂದು ಹೇಳವರು. ಕೆಲವರು ಬಾಬಿಲೋನದಲ್ಲಿ ಹುಟ್ಟಿದವೆಂದೂ ಇನ್ನು ಕೆಲವರು ಕ್ರೀಟದೇಶದಲ್ಲಿ ಹುಟ್ಟಿ ದವೆಂದೂ ಮತ್ತೆ ಕೆಲವರು ಮಿಸರದೇಶದಲ್ಲಿ ಹುಟ್ಟಿದವೆಂದೂ ಹೇಳುವರು, ಪ್ಲೇಟೋ ಪ್ರೊಟಾರ್ಕ್, ಬ್ಯಾಸಿಟನ್, ಮೊದಲಾದ ಪಂಡಿತರು ಕೊನೆಯ ಮತವನ್ನು ಅಂಗೀಕ ರಿಸುವರು. ಈ ಮತವೇ ಬಹುಮಾನ್ಯವಾಗಿರುವದು. ಆದರೆ ಮಿಸರ ದೇಶದಿಂದ ಮುಂದೆ ಬೇರೆ ಬೇರೆ ದೇಶಗಳಲ್ಲಿ ಆ ಅಕ್ಷರಗಳ ಪ್ರಚಾರವು ಹೇಗೆ ಆಯಿತೆಂಬದನ್ನು ನಿರ್ಣಯಿಸುವದು ಕಠಿಣವಿರುವದು. ಮಿಸರದೇಶವು ಬಹು ಪ್ರಾಚೀನಕಾಲದಿಂದ ತಿದ್ದು ಪಾಟಾದದ್ದು. ಮೆಮ್ಫಿನ್‌ ನಗರವು ಮಿಸರದ ರಾಜಧಾನಿಯಿತ್ತು. ಇದೇ ಸ್ಥಳದಲ್ಲಿ ಇದುವರೆಗೆ ಜಗದ್ವಿಖ್ಯಾತವಾದ ಪಿರಾಮಿಡ ಎಂಬ ಗೋಪುರಗಳಿರುವವ. ಮುಂದೆ ಪ್ರಾಯಶಃ ಕ್ರಿಸ್ತನ ಜನ್ಮಕ್ಕೆ ಮುಂಚೆ ಎರಡುವರೆ ಸಾವಿರವರ್ಷಗಳ ಪೂರ್ವದಲ್ಲಿ ಬಲಿಷ್ಠವಾದ ಸೆಮಿಟಿಕ್ ಜಾತಿಯು ಮಿಸರದೇಶವನ್ನು ಆಕ್ರಮಿಸಿತ್ತು. ಇದೇ ಕಾಲದಲ್ಲಿ ಮಿಸರದೇಶದವರು ನಾಲ್ಕೂ ದಿಕ್ಕಿಗೆ ಹರಿಬಿದ್ದರು. ಸೆಮಿಟಿಕ್ ಜನರು ಅಪ್ಲಿರಿಸ್ 2' ನಗರವನ್ನು ರಾಜಧಾನಿಯನ್ನು ಮಾಡಿಕೊಂಡು ಕ್ರಿ. ಪೂ ೨೨೦೦-೧೭೦೦ ರವರೆಗೆ ರಾಜ್ಯವಾಳಿದರು. ಈ ಕಾಲದಲ್ಲಿ ಉಂಟಾದ ಮಿಸರದೇಶದ ಅಕ್ಷರಗಳು [ ಸೆಮಿಟಿಕ್ ಅಕ್ಷರಗಳು ] ನೆನೇವಾ, ನಿನಿಸಿಯಾ ಮೊದಲಾದ ದೇಶಗಳಲ್ಲಿ ವ್ಯಾಪ್ತವಾಗಿದ್ದವು. - ಈ ಮೇರೆಗೆ `ಉಂಟಾದ ಮೂಲ ಸೆಮಿಟಿಕ್ ಅಕ್ಷರಗಳು ಎರಡು ಪಂಗಡವಾಗಿ. ದಕ್ಷಿಣ ಸೆಮಿಟಿಕ್ ಮತ್ತು ಫಿನೀಸಿಯನ್ ಎಂಬ ಅಕ್ಷರಗಳನ್ನು ಹುಟ್ಟಿಸಿದವು, ಈ ದಕ್ಷಿಣ ಸೆಮಿಟಿಕ್ ಅಕ್ಷರಗಳು ಸ್ವಲ್ಪ ಹೆಚ್ಚು ಕಡಿಮೆಯಾಗಿ ಪ್ರಾಚೀನ ಭಾರತದ ಅಕ್ಷರಗಳು ( ಅಶೋಕ ಅಕ್ಷರಗಳು ) ಆಗಿ ಪರಿಣಮಿಸಿದವೆಂದು ಅವರು ಹೇಳುವರು. ಅಶೋಕ ಅಕ್ಷರಗಳು ನಾಗರಿ, ಪಾಲಿ, ದ್ರಾವಿಡೀಯ, ಎಂದು ಮೂರು ಪಂಗಡವಾದವು. ನಾಗರೀ ಅಕ್ಷರಗಳಿಂದ ತೀಬೇಡಿ, ಗುಜರಾಥೀ, ಕಾಶ್ಮೀರೀ, ಮಹಾರಾಷ್ಟ್ರ, ಬಂಗಾಲೀ, ಅಕ್ಷರಗಳು ಹುಟ್ಟಿದವು, ಪಾಲೀ ಅಕ್ಷರಗಳಿಂದ ಬ್ರಹ್ಮ, ಶ್ಯಾಮ ( ಸಿಯಾಮ ) ಯನದ್ವೀಪ ( ಚಾವಾ ) ಸಿಂಹಲ, ಕೋರಿಯಾ ದೇಶಗಳ ಅಕ್ಷರಗಳು ಹುಟ್ಟಿದವು. ಮಲೆಯಾಳ,