ಪುಟ:ಅಶೋಕ.djvu/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಅಶೋಕ ಅಥವಾ ಪ್ರಿಯದರ್ಶಿ. Goan hhhhhhhhhh n n 1 r\ n 1 hrv /• • • • • •°

  • * * \r\nh* * * * * * * / f• • ೧೧ hhhhh A Ahhhhh

ತೆಲಗು, ಕನ್ನಡ, ತಮಿಳು ಅಕ್ಷರಗಳು ದ್ರಾವಿಡೀಯ ಅಕ್ಷರಗಳಿಂದ ಹುಟ್ಟಿದವು, ಕಾಲಾನು ಸಾರವಾಗಿ ನಾನಾ ಪ್ರಕಾರವಾದ ಅಕ್ಷರಗಳು ಉಂಟಾದವು. ಈಗ ಅವುಗಳ ರಚನೆಯಲ್ಲಿ ವಿಶೇಷ ಹೆಚ್ಚು ಕಡಿಮೆಗಳು ಕಂಡುಬಂದರೂ ಅವೆಲ್ಲ ಅಕ್ಷರಗಳು ಒಂದೇ ಮೂಲ ಅಕ್ಷರ ಗಳಿಂದ ಉತ್ಪನ್ನ ವಾದಂಥವು. ಭರತಖಂಡದಲ್ಲಿ ಅತಿ ಪ್ರಾಚೀನಕಾಲದಲ್ಲಿ ಕೊರೆದ ಲಿಪಿ ಗಳ ಅಕ್ಷರಗಳಿಂದೇ ಈ ದೇಶದ ಎಲ್ಲ ಅಕ್ಷರಗಳ ಉತ್ಪತ್ತಿಯಾಗಿರುವದು. ಅಶೋಕ ಮಹಾರಾಜನ ಕಾಲದಲ್ಲಿ ಈ ಲಿಪಿಗಳು ಕೊರೆಯಲ್ಪಟ್ಟಿರುವವು. ಅಶೋಕನು ಕೊರೆಯಿ ಸಿದ ಅಕ್ಷರಗಳು ಎರಡು ಸಾವಿರ ವರ್ಷಗಳಾದರೂ ಇದುವರೆಗೆ ಅಚ್ಚಳಿಯದೆ ಈವೊತ್ತು ಕೊರೆದಂತೆ ಕಾಣುತ್ತಿರುವವ, ಸೃಥ್ವಿಯಲ್ಲಿ ನಾನಾ ದೇಶಗಳಲ್ಲಿ ನಾನಾಪ್ರಕಾರದ ಅಕ್ಷರ ಗಳು ಪ್ರಚಲಿತವಾಗಿದ್ದರೂ ಅಶೋಕ ಅಕ್ಷರಗಳಂತೆ ಸುಂದರ, ನಿರಲಂಕಾರ, ಸರಲ ಅಕ್ಷ ರಗಳು ಯಾವವೂ ಇಲ್ಲ. ಅಶೋಕಲಿಪಿಯು ಎರಡು ಪ್ರಕಾರವಾಗಿ ಬರೆಯಲ್ಪಟ್ಟಿರುವದು. ಒಂದು ಪ್ರಕಾರಕ್ಕೆ ಆರ್ಯಪಾಲಿ ( Ariano pali ) ಇನ್ನೊಂದು ಪ್ರಕಾರಕ್ಕೆ ಭಾರ ತೀಯ ಪಾಲಿ (Intto pali ) ಎಂದು ಹೆಸರು. ಆರ್ಯಪಾಲಿ ಮತ್ತು ಭಾರತೀಯ ಪಾಲಿ ಅಕ್ಷರಗಳು ಕ್ರಮವಾಗಿ ಉತ್ತರ ಅಶೋಕ ಅಕ್ಷರ ಮತ್ತು ಭಾರತೀಯ ಅಶೋಕ ಅಕ್ಷರ ಎಂದು ಕರೆಯಲ್ಪಡುವವು. ಆರ್ಯಪಾಲಿ ಅಕ್ಷರಗಳು ಖರೋಷ್ಠಿ ಅಥವಾ ಇಂಡೋಬಾಸ್ಟಿಯನ್ ( Indo Bictrian ) ಅಕ್ಷರಗಳೆಂದು ಪ್ರಸಿದ್ಧವಾಗಿರುವವು. “ ನಾಹಾವಾಜಗಿರಿ ” ಮತ್ತು “ ಮಾನಸೇರಾ ” ಎಂಬ ಎರಡು ಸ್ಥಳಗಳಲ್ಲಿ ದೊರೆತ ಅಶೋಕನ ಶಿಲಾಶಾಸನಗಳು ಉತ್ತರ ಅಶೋಕ ಅಕ್ಷರಗಳಲ್ಲಿ ಬರೆಯಲ್ಪಟ್ಟಿರುವವು. ಈ ಅಶೋಕಲಿಪಿಯ ಉತ್ಪತ್ತಿಯ ಸಂಬಂಧವಾಗಿ ಪಾಶ್ಚಾತ್ಯ ಪಂಡಿತರು ಬೇರೆ ಬೇರೆ ಮತಗಳನ್ನು ಪ್ರಕಟಿಸಿರುವರು. ಕೆಲವರು ಅವು ಗ್ರೀಕ ಅಕ್ಷರಗಳಿಂದ ಹುಟ್ಟಿದ ವೆಂದು ಹೇಳುವರು, ಕೆಲವರು ಸೆಮಿಟಿಕ್ ಅಕ್ಷರಗಳೇ ರೂಪಾಂತರವಾಗಿ ಅಶೋಕ ಅಕ್ಷರಗಳಾಗಿ ಪರಿಣಮಿಸಿದವೆಂದು ಹೇಳುವರು, ಪ್ರೊಫೆಸರ ಬೇಬಾರ, ಡಾಕ್ಟರ್ ಬುಜ್ಜಾರ್‌ ಮೊದಲಾದವರು ಭಾರತೀಯ ಅಕ್ಷರಗಳಲ್ಲಿ ಎಷ್ಟೋ ಅಸೀರಿಯದ ಅಕ್ಷರಕ್ಕೆ ಹೋಲುವವೆಂದೂ, ಕ್ರಿ. ಪೂ. ೬ನೆಯ ಮತ್ತು ೭ನೆಯ ಶತಮಾನದಲ್ಲಿ ಪಾಲಿ ಸೈನದಲ್ಲಿದ್ದ ವೇಶಾ, ಅನುಶಾಸನಕ್ಕೆ ಹೋಲುವವೆಂದೂ ಹೇಳುವರು. ಇಷ್ಟರಿಂದಲೇ ಅವರು ಉತ್ತರ ಸೆಮಿಟಿಕ್ ಅಕ್ಷರಗಳಿಂದ ಭಾರತೀಯ ಅಕ್ಷರಗಳು ಹುಟ್ಟಿದವೆಂದು ಹೇಳುವರು. ಇದಕ್ಕೆ ವಿರುದ್ದವಾಗಿ Ja: Taylor ಎಂಬವರು ದಕ್ಷಿಣ ಸೆಮಿಟೆಕ್ ಅಕ್ಷರಗಳಿಂದೇ ಭಾರತೀಯ ಅಕ್ಷರಗಳು ಉತ್ಪನ್ನವಾಗಿರುತ್ತವೆಂದು ತೋರಿಸುವದಕ್ಕೆ ಬಹಳ ಪ್ರಯತ್ನ ಮಾಡಿರುವರು. ಡಾಕ್ಟರ ರಿಸ್‌ಡೇಡ ಎಂಬವರು ಈ ಎರಡು ಮತಗೆ ಳಿಗೂ ಅನುಮೋದನ ಕೊಡುವದಿಲ್ಲ. ಅವರು ಉತ್ತರ ಇಲ್ಲವೆ ದಕ್ಷಿಣ ಸೆಮಿಟಿಕ್ ಜಾತಿ ಗಳ ಬಹು ಪೂರ್ವಕಾಲದಲ್ಲಿ ಯುಫೈಟಿಸ್ ತಪ್ಪಲು ಪ್ರದೇಶದಿಂದ ಭಾರತೀಯ ಅಕ್ಷರ