ಪುಟ:ಅಶೋಕ.djvu/೧೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, ೧೨೩

  • Jಾ /YY

وحی و ... و در •vvv # - + , - *- YYY + 4 / / + + v 4 YY - - - - - ಗಳು ಪ್ರಚಲಿತವಾದವು. ಭರತಖಂಡದ ಎಲ್ಲ ಅಕ್ಷರಗಳಿಗೆ ಯುಫ್ರೆಟನ್ ವರ್ಣಮಾ ಲೆಯು ಮೂಲವು ಎಂದು ಹೇಳುವರು. ಇತಿಹಾಸವನ್ನು ನೋಡಲು ತಿಳಿದುಬರುವದೇನಂದರೆ:--- ಕ್ರಿ. ಪೂ. ೨ ನೆಯ ಶತಮಾನದಲ್ಲಿ ಭರತಖಂಡದ ಪಶ್ಚಿಮತೀರದಲ್ಲಿರುವ ನೌವೀರ, ಸುಪಾರಕ, ಬಾರು ಕಚ್ಚ ( ಇದಕ್ಕೆ ಎರಡನೆ ಹೆಸರು “ಗುಕ್ಷೇತ್ರ ) ಎಂಬ ಬಂದರಗಳಿಗೂ, ಬಾಬಿಲನಕ್ಕೂ ಬಹಳ ವ್ಯಾಪಾರವು ನಡೆಯುತ್ತಿತ್ತು; ಭರತಖಂಡದ ಪಶ್ಚಿಮತೀರದಲ್ಲಿದ್ದ ದ್ರವಿಡ ಜಾತಿಯೇ ಎಲ್ಲಕ್ಕೂ ಮೊದಲು ಬಾಬಿಲನದಿಂದ ಸೆಮಿಟಿಕರ ಪೂರ್ವದಲ್ಲಿ ಎಸ್ಟೇಡಿಯ ರಲ್ಲಿ ಪ್ರಚಲಿತವಾಗಿದ್ದ ವರ್ಣಮಾಲೆಯನ್ನು ಭರತಖಂಡಕ್ಕೆ ತಂದಿತು; ಇದೇ ಲಿಪಿಯು ಸುಮಾರು ಸಾವಿರ ವರ್ಷಗಳ ತರುವಾಯ ಭರತಖಂಡದ ಪ್ರಸಿದ್ದವಾದ ಬ್ರಾಹ್ಮಲಿಪಿ ಯಾಗಿ ಪರಿಣಮಿಸಿತು. ” ಈ ಮತದೊಡನೆ ಎಲ್ಲ ವಿಷಯಗಳಲ್ಲಿ ಪರದೇಶದ ಪಂಡಿತರ ಐಕಮತ್ಯವಾಗುವಂತಿಲ್ಲ. ನಾವು ತಿಳಿದದ್ದೇನಂದರೆ--ಆರ್ಯಜನರ ಪ್ರಾಚೀನ ವಾಸ ಭೂಮಿಯೇ ಅಶೋಕ ಅಕ್ಷರಗಳ ಜನ್ಮಸ್ಥಾನವು, ಮುಂದೆ ಕಾಲಾನುಸಾರವಾಗಿ ಸೆಮಿ ಟಿಕ್ ಜಾತಿಯ ಸಂಸರ್ಗದಿಂದ ಅವುಗಳಲ್ಲಿ ಎಷ್ಟೋ ಹೆಚ್ಚು ಕಡಿಮೆಗಳಾದ ಮೇಲೆ ಅವು ಭಾರತೀಯ ಅಶೋಕ ಅಕ್ಷರಗಳಾಗಿ ಪರಿಣಮಿಸಿದವು. ಕೆಲವರು ಈ ದೇಶದಲ್ಲಿ ಎಷ್ಟು ಪ್ರಕಾರದ ಅಕ್ಷರಗಳು ಪ್ರಚಲಿತವಾಗಿ ಇರು ವವೋ ಅವುಗಳಲ್ಲೆಲ್ಲ ಅಶೋಕ ಅಕ್ಷರಗಳೇ ಎಲ್ಲಕ್ಕೂ ಪ್ರಾಚೀನವೆಂದು ನಂಬುವರು. ಆದರೆ ಈ ಮತವು ಸಯುಕ್ತಿಕವೆಂದು ಹೇಳಲಾಗುವದಿಲ್ಲ. ಕ್ರಿ. ಪೂ. ೩ನೆಯ ಶತಮಾ ನದಲ್ಲಿ ಅಶೋಕ ಅಕ್ಷರಗಳು ಈ ದೇಶದಲ್ಲಿ ಪ್ರಚಲಿತವಾಗಿದ್ದವು, ಅಶೋಕ ಮಹಾರಾ ಜನ ಕಾಲಕ್ಕಿಂತ ಬಹು ಪೂರ್ವಕಾಲದಲ್ಲಿ ದರ್ಶನಗಳು, ಧರ್ಮಶಾಸ್ತ್ರಗಳು ಮೊದಲಾದ ವಿಷಯಗಳು ಉನ್ನತಿಯನ್ನು ಹೊಂದಿದ್ದವು, ಮತ್ತು ಅದರೊಡನೆ ಲೇಖನ ಪದ್ದತಿಯೂ ಪ್ರಚಲಿತವಾಗಿತ್ತು. ಹಿಂದೂ ಗ್ರಂಥಗಳಲ್ಲಿಯೂ ಬೌದ್ಧಗ್ರಂಥಗಳಲ್ಲಿಯೂ ಈ ವಿಷಯ ದಲ್ಲಿ ಅನೇಕ ಆಧಾರಗಳು ದೊರೆಯುವವು. ವೈದಿಕ ಸೂಕ್ತಗಳು ರಚಿತವಾದ ಕಾಲದಲ್ಲಿ ಲೇಖನಪದ್ದತಿಯು ಇದ್ದಿಲ್ಲವೆಂಬದು ಒಪ್ಪಬೇಕಾದದ್ದೇ. ಆಗ ಆ ಸೂಕ್ತಗಳನ್ನು ಜನರು ಶ್ರವಣ ಸಹಾಯದಿಂದೇ ಕಾದುಕೊಂಡಿದ್ದರು. ಆದ್ದರಿಂದ ಅವಕ್ಕೆ ಶ್ರುತಿ, ಎಂಬ ಹೆಸ ರುಂಟಾಯಿತು, ಆದರೆ ಮುಂದೆ ಸ್ವಲ್ಪ ದಿವಸಗಳಲ್ಲಿ ಲೇಖನಪದ್ಧತಿಯ ವಿಷಯವಾಗಿ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿರುವದು, ವೇದದ ಪ್ರಾತಿಶಾಲ್ಯವೂ ಯಾಸ್ಯನ ನಿರು ಕವೂ ಅತ್ಯಂತ ಪ್ರಾಚೀನ ವ್ಯಾಕರಣಗಳು, ಅವುಗಳಿಗಿಂತಲೂ ಪೂರ್ವದಲ್ಲಿಯೇ ಈ ದೇಶದಲ್ಲಿ ಲೇಖನವು ಪ್ರಚಾರದಲ್ಲಿತ್ತೆಂಬದಕ್ಕೆ ಏನೂ ಸಂಶಯವಿಲ್ಲ. ಪಾಣಿನಿವ್ಯಾಕ ರಣವು ಕ್ರಿ. ಪೂ. ೪ನೆಯ ಶತಮಾನದಲ್ಲಿ ಅಸ್ತಿತ್ವದಲ್ಲಿತ್ತು, ಆದರೆ ಒಂದು ಸೂತ್ರದಲ್ಲಿ ( ಲಿಪಿಕರ ' ಎಂಬ ಶಬ್ದವು ಬಂದಿರುವದು. ಆಗ ಒಂದುವೇಳೆ ಲೇಖನವ ಪ್ರಕಾರದಲ್ಲಿ