ಪುಟ:ಅಶೋಕ.djvu/೧೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲೆ ಅಶೋಕ ಅಥವಾ ಪ್ರಿಯದರ್ಶಿ. ಲ್ಲದಿದ್ದರೆ ಈ ಶಬ್ದವು ಎಂದೂ ಪ್ರಯೋಗಿಸಲ್ಪಡುತ್ತಿರಲಿಲ್ಲ. ಮನುಸಂಹಿತೆಯ ೮ ನೆಯ ಅಧ್ಯಾಯದ ೧೬೮ನೆಯ ಶ್ಲೋಕದಲ್ಲಿ : ಲೇಖಿತ ' ಎಂಬ ಶಬ್ದದ ಉಲ್ಲೇಖವುಂಟು. ಇದರಿಂದ ಮನುವಿನ ಕಾಲದಲ್ಲಿಯೂ ಲೇಖನದ ಪ್ರಚಾರವಿತ್ತೆಂದು ಕಂಡುಬರುವದು. ಇದರಂತೆ ಮಹಾಭಾರತದಲ್ಲ • ವೇದಲೇಖಕ ' ಎಂಬ ಶಬ್ದದ ಪ್ರಯೋಗವುಂಟು. - ಲಲಿತವಿಸ್ತರ ' ವೆಂಬ ಪ್ರಾಚೀನ ಬೌದ್ಧಗ್ರಂಥದಲ್ಲಿ ೬೪ ಪ್ರಕಾರದ ಲಿಪಿಗಳ ಉಲ್ಲೇಖ ವಿರುವದು, ಬಹುಶಃ ಎರಡು ಸಾವಿರ ವರ್ಷಗಳ ಪೂರ್ವದಲ್ಲಿ ಲಲಿತವಿಸ್ತರ ಗ್ರಂಥವು ಬರೆಯಲ್ಪಟ್ಟಿತೆಂದು ಅನೇಕರು ಊಹಿಸುತ್ತಾರೆ. ಅದು ನಿಜವಿದ್ದರೆ ಆ ಕಾಲದಲ್ಲಿ ಈ ಎಲ್ಲ ಲಿಪಿಗಳು ಪ್ರಚಾರದಲ್ಲಿರುವ ಸಂಭವವುಂಟೆಂದು ತೋರುವದು. ಪ್ರಾಚೀನ ಸಂಸ್ಕೃತ ವಾಲ್ಮೀಯದಲ್ಲಿರುವಂತೆ ಪ್ರಾಚೀನ ಪಾಲೀಗ್ರಂಥಗಳಲ್ಲಿಯೂ ಅಶೋಕಲಿಪಿಯು ಪ್ರಚಾರದಲ್ಲಿ ಬರುವದಕ್ಕೆ ಮುಂಚೆ ಲೇಖನಪದ್ಧತಿಯಿತ್ತೆಂಬದರ ಉಲ್ಲೇಖವು ಬಹಳ ಸ್ಥಳಗಳಲ್ಲಿ ಕಂಡುಬರುವದು, ಸೂತ್ರಪಿಟಕವೆಂಬ ಗ್ರಂಥದ ಪ್ರಥಮ ಭಾಗದಲ್ಲಿ ಶೀಲ ವೆಂಬ ಹೆಸರಿನ ಧರ್ಮಶಾಸ್ತ್ರವು ಬಂದಿರುವದು. ಈ ಶೀಲ ಗ್ರಂಥವು ಕ್ರಿ. ಪೂ. ೪೫೦ ರಲ್ಲಿ ಸಂಕಲಿತವಾಯಿತೆಂದು ಐತಿಹಾಸಿಕರು ಊಹಿಸುತ್ತಾರೆ. ಬೌದ್ಧ ಭಿಕ್ಷುಗಳಲ್ಲಿ ನಿಷಿದ್ಧವಾದ ವಿಷಯಗಳಾವವು ' ಎಂಬ ವಿಷಯದ ವಿವೇಚನೆಯು ಶೀಲ ಗ್ರಂಥದಲ್ಲಿರುವದು, ನಿಷಿದ್ಧವಾದವುಗಳ ಪಟ್ಟಿಯಲ್ಲಿ ' ಅಕ್ಷರಿಕಾ ? ಎಂಬ ಆ ಕಾಲದ ಒಂದು ಆಟದ ಹೆಸರಿನ ಉಲ್ಲೇಖವಿರುವದು. ' ಅಕ್ಷರಿಕಾ ' ಎಂಬದು ಒಂದು ಆಟ ವಾದ ಮೇಲೆ ಅಕ್ಷರಜ್ಞಾನವು ಜನರಲ್ಲಿ ಪ್ರಚಲಿತವಾಗಿತ್ತೆಂದು ತೋರುವದು, ವಿನಯಪಿ ಟಕವೆಂಬ ಪ್ರಾಚೀನ ಸಾಲಿಗ್ರಂಥದ ೪ನೇ ಭಾಗದ ಒಂದು ಸೂತ್ರದಲ್ಲಿ ಲೇಖನವು ಪ್ರಸಿದ್ಧ ಶಿಲ್ಪವಿದ್ಯೆಗಳಲ್ಲಿ ಎಣಿಸಲ್ಪಟ್ಟಿರುವದು, ಭಿರ್ಕ್ಷುಣಿಗಳಲ್ಲಿಯೂ ಇದರ ಪ್ರಚಾರ ವಿತ್ತು. ಬೌದ್ದಯುಗದಲ್ಲಿ ಲಿಪಿ ವಿದ್ಯೆಯು ಉಪಜೀವನದ ಯೋಗ್ಯ ಉಪಾಯಗಳಲ್ಲಿ ಒಂದಾಗಿ ಎಣಿಸಲ್ಪಟ್ಟಿತ್ತು. ಆ ಕಾಲದಲ್ಲಿ ಯಾವನಾದರೂ ದುರ್ಬುದ್ಧಿಯಿಂದ ಸಂಘ ದಲ್ಲಿ ಆತ್ಮಹತ್ಯೆಯನ್ನು ಸಮರ್ಥನ ಮಾಡುವ ಪತ್ರಾದಿಗಳನ್ನು ಬರೆದರೆ ಅವನಿಗೆ ಅದರ ಅಕ್ಷರಗಳ ಸಂಖ್ಯೆಯಿಂದ ಶಾಸನವಾಗುತ್ತಿತ್ತೆಂದು ಪ್ರವಾದವಿದೆ. ಬಿಂಬಿಸಾರ ನೆಂಬ ರಾಜನು ತನ್ನ ಆಳಿಕೆಯ ಕಾಲದಲ್ಲಿ ಗಾಂಧಾರದೇಶದ ರಾಜನಾದ ಪಕ್ಕುಸತಿ 'ಯ ಬಳಿಗೆ ಒಂದು ಪತ್ರವನ್ನು ಕಳಿಸಿದ್ದನು. ಈ ಪತ್ರವನ್ನು ಚಿನ್ನದ ತಗಡಿನ (೬ ಪೂಟು •ಪೂ, ೨ ಇ. ) ಮೇಲೆ ಹೊರೆಸಿದ್ದನು, ಅದರಲ್ಲಿ ಬುದ್ಧ ಮತ್ತು ಅವನ ಉಪದೇಶ ಗಳ ವರ್ತಮಾನವು ಬರೆಯಲ್ಪಟ್ಟಿತ್ತು. ಬುದ್ಧದೇವನ ಪ್ರಸಿದ್ಧ ಶಿಷ್ಯನಾದ ಮಹಾ ಕಾಶ್ಯಪನೆಂಬವನು ತಾನು ಸಂಸಾರವನ್ನು ಬಿಟ್ಟು ಹೋಗುವಾಗ ತನ್ನ ಹೆಂಡತಿಯಾದ ಭದ್ರೆಯ ಅಪ್ಪಣೆಯನ್ನು ಪತ್ರದ್ವಾರದಿಂದ ತೆಗೆದುಕೊಂಡನೆಂದು * ಮನೋರಥಪು ರಾನಿ ” ಎಂಬ ಪಾಲೀಗ್ರಂಥದಲ್ಲಿ ವರ್ಣಿತವಾಗಿರುವದು, ಪಾಲೀಗ್ರಂಥದ ಆಧಾರಗಳಿಂದ