ಪುಟ:ಅಶೋಕ.djvu/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩o ಅಶೋಕ ಅಥವಾ ಪ್ರಿಯದರ್ಶಿ 4 v/s Y * * * ೪ V W v 14 4 4 # - * ** YMP +4 vvvvvvv ಊಹಿಸಿದರು. ಕೊನೆಯ ಎರಡು ಅಕ್ಷರಗಳು ದಾನವೆಂದು ಆದಮೇಲೆ ಅದರ ಮೊದ ಲಿನ ಶಬ್ದವು ದಾತನ ಹೆಸರಾಗಿರಬೇಕು. ಈ ಮೇರೆಗೆ ಸಾಗಿ ಅವರು ( ಸ) ಅಕ್ಷರ ವನ್ನು ಗೊತ್ತು ಹಚ್ಚಿದರು, ಇದೇ ಮೇರೆಗೆ ಮುಂದೆ ಸಾಗಿ ಅವರು ದಿಲ್ಲಿ ಸ್ತಂಭದ ಮೇಲೆ ಕೊರೆದ ಲಿಪಿಯಲ್ಲಿ - ಪ್ರಿಯದಸಿ ' ಎಂಬ ಶಬ್ದವನ್ನು ಕಂಡುಹಿಡಿದರು. ೧ರ್೮ಲ ರಲ್ಲಿ ಪೆಸಿ ಎಂಬ ಒಬ್ಬ ಇಂಗ್ಲಿಷ ಗೃಹಸ್ಥನ ಭೂಮಿಯಲ್ಲಿ ಕೆಲವು ಭಸ್ಕಾ ಧಾರಗಳು ಸಿಕ್ಕವು. ಆ ಭಸ್ಪ್ಯಾಧಾರಗಳಲ್ಲಿ ಶಾಕ್ಯರ ಅಸ್ಥಿಗಳು ತುಂಬಿರುವವೆಂದು ಎಲ್ಲರೂ ಒಪ್ಪಿದರು. ಯಾಕಂದರೆ ಈ ಅಭಿಪ್ರಾಯದ ಲಿಪಿಯು ಆ ಭಸ್ಮಾಧಾರಗಳ ಮೇಲೆ ಇತ್ತು. ಇದುವರೆಗೆ ಸಿಕ್ಕ ಶಿಲಾಲಿಪಿಗಳಲ್ಲಿ ಇವೇ ಎಲ್ಲಕ್ಕೂ ಪ್ರಾಚೀನವಾದಂಥ ವ, ಯಾಕಂದರೆ ಅವುಗಳಲ್ಲಿದ್ದ ಅಸ್ಥಿಗಳು ಶಾಕ್ಯಜನರವೆಂದ ಬಳಿಕ ಅವುಗಳ ಮೇಲಿನ ಲಿಪಿಯು ಅಶೋಕನಿಗಿಂತ ಪೂರ್ವದಲ್ಲಿ ಬರೆಯಲ್ಪಟ್ಟಿತೆಂಬದಕ್ಕೆ ಏನೂ ಸಂಶಯ ವಿಲ್ಲ. ಅಶೆ ಕನ ಧರ್ಮಪ್ರಚಾರಕರಾದ ಮಚ್ಚಿಮ, ಮತ್ತು ಕಾಶ್ಯಪ ಇವರ ಭಸ್ಮಾ ವಶೇಷವು ಸಾಂಚಿಸ್ತೂಪದಲ್ಲಿಯ ಭಸ್ಪ್ಯಾಧಾರಗಳಲ್ಲಿ ದೊರೆತಿರುವದು, ಅವುಗಳ ಮೇಲೆ ಕೊರೆದ ಲಿಪಿಯ ಅತ್ಯಂತ ಪುರಾತನವಾದದ್ದು. ಅಂದಬಳಿಕ ಈಗ 'ಅಶೋಕನ ಅಕ್ಷರಗಳೆಂದು ಹೇಳಲ್ಪಡುವ ಅಕ್ಷರಗಳು ಆತನಿಗಿಂತ ಪೂರ್ವದಲ್ಲಿಯೇ ಪ್ರಚಲಿತವಾ ಗಿದ್ದವೆಂಬದಕ್ಕೆ ಏನೂ ಸಂಶಯವಿಲ್ಲ. ಕ್ರಿ. ಪೂ ೭ನೆಯು ಇಲ್ಲವೆ ೮ನೆಯ ಶತಮಾನದಲ್ಲಿ ಎಲ್ಲಕ್ಕೂ ಮೊದಲು ಭರತಖಂಡದಲ್ಲಿ ವರ್ಣಮಾಲೆಯು ತರಲ್ಪಟ್ಟಿತೆಂದು ಐತಿಹಾಸಿ ಕರು ಊಹಿಸುವರು. ವೈದಿಕ ವಾಙ್ಕಯವು ಈ ಪೂರ್ವದಲ್ಲಿಯೇ ಸಮಾಜದಲ್ಲಿ ಪ್ರಚಾ ರವಾಗಿತ್ತು. ವೇದದ ಸಂಹಿತೆ, ಮಂತ್ರ ಎಂಬ ಭಾಗಗಳು ಶ್ರುತಿ ಎಂಬ ಹೆಸರಿನಿಂದ ಜನರ ಬಳಕೆಯಲ್ಲಿ ಬಂದಿದ್ದವು, ವರ್ಣಮಾಲೆಯು ದೇಶದಲ್ಲಿ ಪ್ರಚಾರಕ್ಕೆ ಬರಲು ಬ್ರಾಹ್ಮಣರು ಮೊದಲು ಅದನ್ನು ಸ್ವೀಕರಿಸಲಿಲ್ಲ. ಎಷ್ಟೋ ದಿವಸ ಅವರು ತಮ್ಮ ಪೂರ್ವ ಪದ್ಧತಿಯನ್ನೇ ಅವಲಂಬಿಸಿದರು, ವರ್ಣಮಾಲೆಯು ಪ್ರಚಾರಕ್ಕೆ ಬರುವ ಮೊದಲು ಉಂಟಾದ ವಾಬ್ಬಿಯವು ವೈದಿಕವಾಬ್ಬಿ ಯವೆಂದೂ ವರ್ಣಮಾಲೆಯು ಪ್ರಚಾ ರಕ್ಕೆ ಬಂದತರುವಾಯ ಉಂಟಾದ ವಾಲ್ಮೀಯವು ಲೌಕಿಕ ವಾಯವೆಂದೂ ಹೇಳ ಲ್ಪಡುತ್ತಿತ್ತೆಂದು ಕೆಲವರು ಊಹಿಸುವರು. ಮೇಲಿನ ವಿವರಣೆಯನ್ನೊದಲು ಲೇಖ ನವು ಈ ದೇಶದಲ್ಲಿ ಪ್ರಚಲಿತವಾದ ಮೇಲೆ ಕೂಡ ಅದು ಬೌದ್ದ ಯುಗದಲ್ಲಿಯೇ ವಿಶೇಷವಾಗಿ ಆದರಿಸಲ್ಪಟ್ಟಿತೆಂದು ತಿಳಿಯುವದು. ಅಕ್ಷರಗಳು ಹೊರದೇಶಗಳಿಂದ ತರಲ್ಪಟ್ಟರೂ ಬರಹದ ಪದ್ಧತಿಯು ಪ್ರತಿಯೊಂದು ದೇಶದಲ್ಲಿ ಬೇರೆ ಬೇರೆ ಇರುವದು. ಎಲ್ಲಕ್ಕೂ ಮೊದಲು ಮಣ್ಣಿನ ಮೇಲೆ ಇಲ್ಲವೆ ಇಟ್ಟಿಗೆಯ ಮೇಲೆ ಅಕ್ಷರಗಳು ಕೊರೆಯಲ್ಪಡುತ್ತಿದ್ದವೆಂದು ಈ ಮೊದಲೇ ಹೇಳಿದೆ. ಆದರೆ ಪುಸ್ತಕಗಳನ್ನೂ ಪತ್ರಗಳನ್ನೂ ಈ ಮೇರೆಗೆ ಬರೆಯುವದು ಅಸಂಭವವ, ರಾಜ