ಪುಟ:ಅಶೋಕ.djvu/೧೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೩೫ به هم می ر . م م مې مه کمپ نے مر مر کر تم سر محمخه Phy*ಳ +* * * * /*/*// - : * YY 7, "- YY/ // # /yyyy* ಪ್ರದೇಶದ ಕಾರಭಾರಿಯಾಗಿ ನಿಯಮಿಸಲ್ಪಟ್ಟಿದ್ದನೆಂದು ಹೇಳಿರುವರು. ಚೀನ ಪ್ರವಾ ಸಿಯಾದ ಹುಯನ್ತ್ವಾಂಗನ ಪ್ರವಾಸವೃತ್ತಾಂತದಲ್ಲಿಯೂ ರಾಜತರಂಗಿಣಿಯ ಲ್ಲಿಯೂ ಅಶೋಕನು ಬೌದ್ದ ಅರ್ಹ೦ತರ ಸಲುವಾಗಿ ೫೦೦ ವಿಹಾರಗಳನ್ನು ಕಟ್ಟಿಸಿ ಭಿಕ್ಷುಸಂಘದ ವೆಚ್ಚದ ಸಲುವಾಗಿ ಸಮಗ್ರ ಕಾಶ್ಮೀರ ರಾಜ್ಯವನ್ನು ದಾನಮಾಡಿದ್ದ ನೆಂದು ವರ್ಣಿಸಲ್ಪಟ್ಟಿದೆ. ಈಗಲೂ ಅಲ್ಲಿ ಹಾಳಾದ ಹಲವು ಕಟ್ಟಡಗಳು ಅಶೋಕನ ಕೀರ್ತಿ ಚಿಹ್ನಗಳೆಂದು ಈಗಿನ ಐತಿಹಾಸಿಕರು ಹೇಳುತ್ತಿರುವರು. ನಿಗ್ಲೀಭ ಮತ್ತು ರುಮ್ಮಿನದೇವಿಯ ಸ್ತಂಭಲಿಪಿಗಳನ್ನು ಓದಲು ನೇಪಾಲವೂ ತೆರಾಯಿ ಪ್ರದೇಶವೂ ಮೌರ್ಯ ಸಾಮ್ರಾಜ್ಯಕ್ಕೆ ಸೇರಿದ್ದವೆಂದು ತಿಳಿಯುವದು, ತೀರ್ಥ ಯಾತ್ರೆಯ ಕಾಲದಲ್ಲಿ ಅಶೋಕನು ನೇಪಾಲದ ಪರ್ವತ ಪ್ರದೇಶವಾದ ಚೂರಿಯಾ ಘಾಟ ಇಲ್ಲವೆ ಗೋರಾಮಸ್ತಾನವೆಂಬದನ್ನು ದಾಟಿ ನೇಪಾಲದಲ್ಲಿ ಹೋಗಿದ್ದನು. ಆಗ ಮಂಜುಪಾಟನ ಎಂಬದು ನೇಪಾಲದ ರಾಜಧಾನಿಯಾಗಿತ್ತು, ಕಿರಾತಜಾತಿಯು ಅಲ್ಲಿ ಆಳುತ್ತಿತ್ತು. ಹಳೆಯ ರಾಜಧಾನಿಯ ೨ ಮೈಲು ದಕ್ಷಿಣಕ್ಕೆ ಈಗಿನ ಲಲಿತಪತ್ರನ ವೆಂಬ ಸ್ಥಳದಲ್ಲಿ ಅಶೋಕನು ಹೊಸ ರಾಜಧಾನಿಯನ್ನು ಸ್ಥಾಪಿಸಿದ್ದನು. ಲಲಿತಪತ್ರ ನದ ಮಧ್ಯಸ್ಥಳದಲ್ಲಿ ಅಶೋಕನು ಕಟ್ಟಿಸಿದ ಶಿಲ್ಪ ಕೌಶಲ್ಯವುಳ್ಳ ಒಂದು ಮಂದಿರವು ಅರಮನೆಯ ದಕ್ಷಿಣ ದಿಕ್ಕಿನಲ್ಲಿ ಈಗಲೂ ಇರುವದು. ಆ ಪಟ್ಟಣದ ೪ ಮೂಲೆಗಳಲ್ಲಿ ಅಶೋಕನು ದಿಕ್ಕು ನಿರ್ಣಯಿಸುವದಕ್ಕಾಗಿ ಸ್ಥಾಪಿಸಿದ ಅರ್ಧಮಂಡಲಾಕಾರವಾದ ನಾಲ್ಕು ಸ್ತೂಪಗಳು ಈವೊತ್ತಿಗೂ ಇರುವವು. ಲಲಿತಪಟ್ಟಣದ ಸಣ್ಣ ದೇವಾಲ ಯವೂ ಒಂದು ಸಮಾಧಿಮಂದಿರವೂ ಅಶೋಕನ ಕೀರ್ತಿ ಚಿಹ್ನಗಳೆಂದು ಹೇಳಲ್ಪಡು ವವು, ಪಾಟಲ, ಭಾವಗಾಂವ, ಕೀರ್ತಿಪುರಗಳು ಮುಂದಿನ ಕಾಲದಲ್ಲಿ ಆ ಪರ್ವತ ಪ್ರದೇಶ ರಾಜಧಾನಿಯಾಗಿದ್ದವು, ಅಶೋಕ ಮಹಾರಾಜನು ತೀರ್ಥಯಾತ್ರೆಗೆ ಹೊರ ಟಾಗ ಆತನ ಮಗಳು ಚಾರುಮತಿಯು ಸಂಗಡ ಹೊರಟ್ಟಿದ್ದಳು. ಆಕೆಯೂ ಆಕೆಯ ಗಂಡನಾದ ದೇವಪಾಲನೂ ಪಶುಪತಿನಾಥದ ಬಳಿಯಲ್ಲಿ ದೇವಸತನವೆಂಬ ಪಟ್ಟಣ ವನ್ನು ಸ್ಥಾಪಿಸಿ ಅಲ್ಲಿ ವಾಸಮಾಡಹತ್ತಿದರು, ವೃದ್ಧಾಪ್ಯದಲ್ಲಿ ಅವರು ಅಲ್ಲಿ ಒಂದು ವಿಹಾರವನ್ನು ಕಟ್ಟಿಸಿ ಅದರಲ್ಲಿ ವಾಸಮಾಡುತ್ತಿದ್ದರು. ಈಗ ಆ ವಿಹಾರದ ಅವಶೇ ಷವು ಚಾರುಮತಿ ಸಂಘವೆಂದು ಕರೆಯಲ್ಪಡುತ್ತಿರುವದು, ಮೇಲೆ ಉಲ್ಲೇಖಿಸಿದ ಸಂಗ ತಿಗಳನ್ನೋದಿದರೆ ಕಾಶ್ಮೀರ ನೇಪಾಳ ದೇಶಗಳು ಅಶೋಕನ ಸಾಮ್ರಾಜ್ಯಕ್ಕೆ ಸೇರಿದ್ದೆ ವೆಂದು ಸ್ಪಷ್ಟವಾಗುವದು, ವಂಗದೇಶಕ್ಕೆ ಸೇರಿದ ಪಾಂಡುವರ್ಧನವೆಂಬ ಸ್ಥಾನದಲ್ಲಿ ಅಶೋಕನಿರ್ಮಿತವಾದ ಒಂದು ಸ್ಕೂಪವಿರುತ್ತದೆಂದು ಹೇಳಿದೆ, ಅನುಗಾಂಗ ಪ್ರದೇ ಶವು ನಂದವಂಶದವರ ಅಧೀನದಲ್ಲಿತ್ತೆಂದು ಹಲವು ಕಡೆಯಲ್ಲಿ ಉಲ್ಲೇಖವುಂಟು, 'ಇದೆ. ರಿಂದ ಅದು ಮೌರ್ಯರಾಜರ ಅಧಿಕಾರಕ್ಕೆ ಸೇರಿತ್ತೆಂದು ವ್ಯಕ್ತವಾಗುವದು. ಭರತ