ಪುಟ:ಅಶೋಕ.djvu/೧೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಗಿáe ಅಶೋಕ ಅಥವಾ ಪ್ರಿಯದರ್ಶಿ MMv/ • • .' , ', ' - * - - - - " °

  • * * * * *-+"

ಖಂಡದ ಪೂರ್ವ ಪ್ರಾಂತದಲ್ಲಿರುವ ಬಹು ಪ್ರಾಚೀನವಾದ ಕಾಮರೂಪ ಇಲ್ಲವೆ ಪ್ರಾಗೈತಿಷಪುರವು ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತೆಂಬದಕ್ಕೆ ಪ್ರಮಾಣವೇನೂ ಇಲ್ಲ. ೭ನೆಯ ಶತಮಾನದಲ್ಲಿ ಹುವೆನ್ ತ್ಸಾಂಗನು ಕಾಮರೂಪವು ಸಂಪೂರ್ಣ ಸ್ವತಂತ್ರ ರಾಜ್ಯವಿತ್ತೆಂದು ಉಲ್ಲೇಖಿಸಿರುವನು. ಆ ಕಾಲದಲ್ಲಿ ಅಲ್ಲಿ ಬೌದ್ಧಧರ್ಮವು ಹಬ್ಬಿ ತೆಂಬದಕ್ಕೂ ಆಧಾರವು ದೊರೆಯುವದಿಲ್ಲ. ಮಹಾವಂಶದಲ್ಲಿ ಹೇಳಿರುವದೇನಂದರೆ ಭಾರತದ ಪೂರ್ವ ತೀರಕ್ಕಿರುವ ತಾಮ್ರಲಿಸ್ತಿ ನಗರದಿಂದ ಸಮುದ್ರಗಾಮಿಗಳಾದ ಹಡಗುಗಳು ಸಿಂಹಲಕ್ಕೆ ಹೋಗಿ ಬರುತ್ತಿದ್ದವು; ಕೆಲವರು ತಾಮ್ರಲಿಸ್ತಿಯು ಅನುಗಾಂಗ ಪ್ರದೇಶದೊಳಗಿನದೆಂದು ಊಹಿಸುತ್ತಾರೆ, ಮತ್ತು ಕೆಲವರು ತಾವಲಿಪ್ಪಿಯು ಬ್ರಹ್ಮ ದೇಶದ ರಾಜಧಾನಿಯೆಂದು ಹೇಳುತ್ತಾರೆ. ಅಶೋಕನು ತಾಮ್ರಲಿಸ್ತಿನಗರದಲ್ಲಿ ಒಂದು ಸೂಪವನ್ನು ಕಟ್ಟಿಸಿದ್ದ ಸು. ಫಾಹೀಯಾನನು ಭಾರತ ಪ್ರವಾಸ ಕಾಲದಲ್ಲಿ ಅಲ್ಲಿ ೨೨ ಬೌದ್ಧ ವಿಹಾರಗಳನ್ನು ನೋಡಿದ್ದನು. ೬, ೭ನೆಯ ಶತಮಾನದಲ್ಲಿ ಅವುಗಳಲ್ಲಿ ೭ ಮಾತ್ರ ಉಳಿದಿದ್ದವು. ಮೌರ್ಯರಾಜರ ಆಳಿಕೆಯಲ್ಲಿ ತಾಮ್ರಲಿಯು ಮುಖ್ಯ ಬಂದರವಾಗಿಯೂ ಸಮ್ಮ ದ್ದವಾದ ನಗರವಾಗಿಯೂ ಇತ್ತೆಂಬದಕ್ಕೆ ಸಂಶಯವಿಲ್ಲ. ಇದರ ಸುತ್ತಲಿನ ಪ್ರದೇ ಶಕ್ಕೆ ಸಂಸ್ಕೃತದಲ್ಲಿ ತಾಮ್ರಲಿಸ್ತಿ ಎಂದೂ ಪಾಲಿಯಲ್ಲಿ ತಾಮಲಿ ಎಂದೂ ಹೇಳಿರು ವದು, ಒಂದು ಕಾಲದಲ್ಲಿ ಈ ಪ್ರದೇಶದ ಸುತ್ತಳತೆಯು ೨೫೦ ಮೈಲು ಇತ್ತು ಇದರ ರಾಜಧಾನಿಗೂ ತಾಮ್ರಲಿಸ್ತಿ ಎಂದು ಹೆಸರು. ರಾಜಧಾನಿಯ ಉದ್ದಳತೆಯು ೧ ಕ್ರೋ ಶವ, ಇದರ ಈಗಿನ ಹೆಸರು ತಮಲೂಕ; ಒಂದು ಕಾಲದಲ್ಲಿ ಸಮುದ್ರವು ಪ್ರಾಚೀನ ತಾಮ್ರಲಿಯ ವರೆಗೆ ಹಬ್ಬಿತ್ತು. ತಾವುಲಿಯು ರೂಪನಾರಾಯಣ ಮತ್ತು ಹುಗೆ ಅನದಿಯ ಸಂಗಮಸ್ಥಲ ಇವುಗಳಿಂದ ೬ ಕೋಶ ಉತ್ತರದಲ್ಲಿತ್ತು, ಈಗಿನ ತಮ ಲೂಕ ನಗರವು ಈ ಸ್ಥಳದಲ್ಲಿಯೇ ಇರುವದಾದರೂ ಈಗಿನ ತಮಲಕವೂ ಪ್ರಾಚೀ ನ ತಾಮ್ರಲಿಸ್ತಿಯೂ ಒಂದೇ ಎಂಬದಕ್ಕೆ ವಿಶೇಷ ಪ್ರಮಾಣವೇನೂ ಇಲ್ಲ. ತಾಮ್ರ ಲಿಸ್ತಿಯು ಸಮುದ್ರದಲ್ಲಿ ಮುಳುಗಿರುವದೆಂದು ಕೆಲವರ ಅಭಿಪ್ರಾಯವು. ಅಶೋಕನು ತನ್ನ ಆಳಿಕೆಯ ೯ನೆಯ ವರ್ಷ ವಂಗೋಪಸಾಗರದ ದಂಡೆಯಲ್ಲಿ ಉತ್ತರಕ್ಕೆ ಮಹಾನದಿಯ ದಕ್ಷಿಣಕ್ಕೆ ಗೋದಾವರಿಯ ಮೇರೆಯಾಗಿರುವ ವಿ ಸ್ನಾ ರವಾದ ಕಲಿ೦ಗ ಪ್ರದೇಶವನ್ನು ತನ್ನ ಅಧಿಕಾರಕ್ಕೆ ಸೇರಿಸಿಕೊಂಡನು. ಓಡಿಯಾ, ಕಲಿಂಗ ಪ್ರದೇಶಗಳಲ್ಲಿ ಆತನು ಹಲವು ಸ್ತೂಪಗಳನ್ನು ಕಟ್ಟಿಸಿದ್ದನು. ಅಶೋಕನು ತನ್ನ ಗಿರಿಲಿಪಿಗಳಲ್ಲಿ ಚೊಲ, ಪಾಂಡ್ಯ ಸತಿಯ ಪುತ್ರ ಕೇರಲ, ಸಿಂಹಲ ಮೊದಲಾದ ಪ್ರದೇಶಗಳಲ್ಲಿ ತನ್ನ ಅಧಿಕಾರವು ನಡೆಯುತ್ತಿತ್ತೆಂದು ಉಲ್ಲೇಖಿಸಿರುವನು. ನೆಲ್ಲಿರಿ ನಿಂದ ಪದ್ಮ ಕೋಟೆಗೆ ಸೇರಿದ ಪ್ರದೇಶವು ಚೋಲಮಂಡಲ ಇಲ್ಲವೆ ಚೋಲರಾಜ್ಯ