ಪುಟ:ಅಶೋಕ.djvu/೧೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೩೬ 1 -/*,4 ,* * * * * * # PPY P & J -+ / - f Y”””v2 - 2 ವೆಂದು ಕರೆಯಲ್ಪಡುತ್ತಿತ್ತು, ಉಡಿಯಾರ ಅಥವಾ ತ್ರಿಚನಾಪಲ್ಲಿಯು ಅದರ ರಾಜ ಧಾನಿಯಾಗಿತ್ತು ಐತಿಹಾಸಿಕರು ಚೋಲರಾಜ್ಯದ ಉತ್ತರ ಮೇರೆಯಾದ ಬೆನ್ನರ ನದಿಯಿಂದ ಅಶೋಕನ ಸಾಮ್ರಾಜ್ಯದ ಆರಂಭವಾಯಿತೆಂದು ಊಹಿಸುವರು, ಪದ್ಯ ಕೋಟೆಯ ದಕ್ಷಿಣಭಾಗವು ಪಾಂಡ್ಯದೇಶವೆನಿಸುತ್ತಿತ್ತು. ಫಿನಿಯು ಕ್ರಿ. ೭೭ ರಲ್ಲಿ ಮಧುರೆಯು ಪಾಂಡ್ಯ ದೇಶದ ರಾಜಧಾನಿಯಿತ್ತೆಂದು ಉಲ್ಲೇಖಿಸಿರುವನು. ಮಲಬಾರ ದಿಂದ ಕನ್ಯಾಕುಮಾರಿಯವರೆಗಿನ ಎಲ್ಲ ಪ್ರದೇಶವು ಕೇರಲಕ್ಕೆ ಸೇರಿತ್ತು. ಚೋಲ ಪಾಂಡ್ಯ ಕೇರಲ ಸತಿಯಪುತ್ರಗಳ ಹೊರತು ಸಮಗ್ರ ಭಾರತವ ರ್ಷವು ಅಶೋಕನ ಸಾಮ್ರಾಜ್ಯವು, ಈ ಮೇಲಿನ ಪ್ರದೇಶಗಳು ಅಶೋಕನ ರಾಜ್ಯಕ್ಕೆ ಸೇರಿರದಿದ್ದರೂ ಅಶೋಕನು ಅವುಗಳಲ್ಲಿ ಔಷಧಾಲಯ ಚಿಕಿತ್ಸಾಲಯಗಳನ್ನು ಕಟ್ಟಿ ಸಿದ್ದನೆಂದು ವರ್ಣನೆಯುಂಟು. ಅಶೋಕನ ಧರ್ಮ ಪ್ರಚಾರಕರು ಈ ಪ್ರದೇಶಗಳಲ್ಲಿ ಧರ್ಮೋಪದೇಶಮಾಡುತ್ತಿದ್ದರು. ಆದದರಿಂದ ಈ ಪ್ರದೇಶಗಳು ಮಾಂಡಲಿಕರಾಜ್ಯ ಗಳಾಗಿ ಇಲ್ಲವೆ ಮಿತ್ರ ರಾಜ್ಯಗಳಾಗಿ ಇದ್ದವೆಂದು ಸಿದ್ದವಾಗುವದು, ಭಾರತದ ಪಶ್ಚಿಮ ಮೇರೆಯಲ್ಲಿ ಗುಜರಾಥದ ವಲ್ಲಭ ನಗರದಲ್ಲಿಯೂ, ಸಿಂಧುದೇಶಕ್ಕೆ ಸೇರಿದ ಸಣ್ಣ ಸಣ್ಣ ರಾಜ್ಯಗಳಲ್ಲಿಯೂ ಅಶೋಕನು ಕಟ್ಟಿಸಿದ ಹಲವು ಸ್ತೂಪಗಳ ಅವಶೇಷಗಳು ಕಂಡುಬರುವವು. ಸಮಗ್ರ ಖೋಟಾನ ರಾಜ್ಯವೂ ಖೋಟಾನ ನಗರವೂ ಅಶೋಕನ ಆಳಿಕೆಯಲ್ಲಿ ನೆಲಸಿದವೆಂದು ತಿಬೇಟದ ಗ್ರಂಥದಲ್ಲಿ ಉಲ್ಲೇಖವುಂಟು. ಅದೇ ಗ್ರಂಥ ದಲ್ಲಿ ಅಶೋಕನು ಬುದ್ದನ ನಿರ್ವಾಣವಾದ ೨೫೦ ವರ್ಷಗಳ ತರುವಾಯ ಖೋಟಾ ನ ರಾಜ್ಯವನ್ನು ನೋಡುವದಕ್ಕೆ ಹೋಗಿದ್ದನೆಂದು ಹೇಳಿರುವದು, ಭಾರತವರ್ಷಕ್ಕೂ ಖೋಟಾನಕ್ಕೂ ಆ ಕಾಲದಲ್ಲಿ ಬಳಕೆಯು ಇತ್ತೆಂದ ಮಾತ್ರಕ್ಕೆ ಖೋಟಾನವು ಭಾರತವರ್ಷದ ಆಧೀನದಲ್ಲಿತ್ತೆಂಬದನ್ನು ಐತಿಹಾಸಿಕರು ಒಪ್ಪುವದಿಲ್ಲ. ನೇಪಾಲ ಕಾಶ್ಮೀರ ಸೋಯಾಟ ಪರ್ವತಪ್ರದೇಶಸಹಿತವಾದ ಸಮಗ್ರ ಭಾರತವರ್ಷ, ಹಿಂದು ಕುಶ, ಅಫಗಾನಿಸ್ತಾನ, ಬಲೂಚಿಸ್ತಾನ, ಮೆಕ್ರಾನ ಸಿಂಧುಪ್ರದೇಶ, ಕಚ್ಚ, ಕಾಠ ವಾಡ ಮೊದಲಾದ ದೇಶಗಳು ಅಶೋಕನ ಸಾಮ್ರಾಜ್ಯಕ್ಕೆ ಸೇರಿದ್ದವೆಂದು* ನಿಃಸಂಶ ಯವಾಗಿ ಸಿದ್ಧವಾಗಿರುವದು. ರಾಜ್ಯ ಕಾರ್ಯದ ಅನುಕೂಲತೆಗಾಗಿ ವಿಶಾಲ ಮೌರ್ಯ ಸಾಮ್ರಾಜ್ಯವು ೫ ಭಾಗಗಳಾಗಿ ವಿಭಾಗಿಸಲ್ಪಟ್ಟಿತ್ತು. ಅವು:- ತಕ್ಷಶಿಲೆ, ಉಜ್ಜಯಿನಿ, ಸುವರ್ಣಗಿರಿ, ತೋಷಾಲಿ, ಮಗಧ, ಅಶೋಕನ ಅನುಶಾಸನಗಳಲ್ಲಿ ಈ ಎಲ್ಲ ವಿಭಾಗಗಳ ಉಲ್ಲೇ ಖವುಂಟು, ಅಶೋಕನು ಸಿಂಹಾಸನವನ್ನೆ ರುವದಕ್ಕೆ ಮುಂಚೆ ತಕ್ಷಶಿಲೆ ಉಜ್ಜಯಿನಿಗಳ ರಾಜಪ್ರತಿನಿಧಿಯಾಗಿ ನಿಯಮಿಸಲ್ಪಟ್ಟಿದ್ದ ಸು. ಪಂಜಾಬ ಕಾಶ್ಮೀರಗಳು ತಕ್ಷಶಿಲೆಯ ರಾಜಪ್ರತಿನಿಧಿಯಿಂದ ಆಳಲ್ಪಡುತ್ತಿದ್ದವು, ಮಾಲವ ಗುಜರಾಥ ಸೌರಾಷಗಳು ಉಜ