ಪುಟ:ಅಶೋಕ.djvu/೧೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

64 • ಈ ಒಥವಾ ಪ್ರಿಯದರ್ಶಿ, ಯಿನಿಯ ಈಳಗೆ ಇದ್ದ ವ54 : ನ ಸಂಹಿತವ: ಎಲ್ಲಾರನು ಸುವರ್ಣಗಿ ರಿಯು ಪಶ್ಚಿಮಘಟ್ಟದ ತೀರ ಸಮೀಪದಲ್ಲಿತ್ತೆಂದು ಹೇಳುತ್ತಾನೆ. ಮೊದಲನೆಯ ಕ್ಷುದ್ರ ಗಿರಿಲಿಪಿಯಲ್ಲಿ « ಸುವರ್ಣ ಗಿರಿರಾಜಪುತ್ರನೇ ” ಎಂದು ಸಂಬೋಧನೆಯಿರುವದು. ಇದರಿಂದ ಕೆಲವರು ಅಶೋಕನು ಭಿಕ್ಷುವ್ರತವನ್ನು ಸ್ವೀಕರಿಸಿದ ಮೇಲೆ ಆತನ ಮಗನು ಸುವರ್ಣಗಿರಿಯಲ್ಲಿದ್ದು ಮಗಧಧ ರಾಜ್ಯಕಾರಭಾರವನ್ನು ಸಾಗಿಸುತ್ತಿದ್ದನೆಂದು ಊಹಿ ಸುವರು, ಆದರೆ ಇದಕ್ಕೆ ವಿಶೇಷ ಪ್ರಮಾಣವು ಎಲ್ಲಿಯೂ ಸಿಗುವದಿಲ್ಲ. ಕಲಿಂಗದ ರಾಜಧಾನಿಯಾದ ತೋಪಾಲಿಯನ್ನು ಅಶೋಕನು ಸ್ಥಾಪಿಸಿದ್ದನು. ಅಲ್ಲಿ ಒಬ್ಬ ರಾಜ ಪ್ರತಿನಿಧಿಯು ಇದ್ದು , ಕಲಿಂಗಪ್ರದೇಶದ ಕಾರಭಾರವನ್ನು ಸಾಗಿಸುತ್ತಿದ್ದನು, ಪಾಟಲಿ ಪುತ್ರವು ಮಗಧಸಾಮ್ರಾಜ್ಯದ ರಾಜಧಾನಿಯು ಈ ಪಟ್ಟಣದಲ್ಲಿ ಚಕ್ರವರ್ತಿಯು ತಾನೇ ಇದ್ದು, ರಾಜ್ಯ ಕಾರಭಾರವನ್ನು ಸಾಗಿಸುತ್ತಿದ್ದನು. ೨೦೦೦ ವರ್ಷಗಳ ಪೂರ್ವ ದಲ್ಲಿ ಮೌರ್ಯರಾಜರು ಬಹು ದೂರದಲ್ಲಿರುವ ಮಿಸರ ಮೊದಲಾದ ದೇಶಗಳಲ್ಲಿಯೂ ತಮ್ಮ ವರ್ಚಸ್ಸನ್ನು ನೆಲೆಗೊಳಿಸಿದ್ದರು. ಅಫಗಾಣಿಸ್ಥಾನ ಮೊದಲಾದ ಹೊರಗಿನ ಪ್ರದೇಶಗಳ ಮೇಲೆ ಅಶೋಕನು, ಮತ್ತೊಬ್ಬ ಅಧಿಕಾರಿಯನ್ನು ನಿಯಮಿಸಿದ್ದನೆಂದು ಐತಿಹಾಸಿಕರು ಊಹಿಸುವರು. ಈ ಐದು ಭಾಗಗಳ ಹೊರತು ಸೋಮಾಪಾ, ಇಸೀಲಾ ಮೊದಲಾದ ನಗರಗಳ ಉಲ್ಲೇಖವುಂಟು. ಈ ಮುಖ್ಯ ಮುಖ್ಯ ನಗರಗಳಲ್ಲಿ ಒಬ್ಬೊಬ್ಬ ಕಾಮದಾರನಿರುತ್ತಿದ್ದನು. ಮೌರ್ಯ ರಾಜ್ಯ ಶಾಸನಪದ್ಧತಿಯನ್ನು ನೋಡಿದರೆ ಆ ಕಾಲದಲ್ಲಿ ದೇಶದಲ್ಲಿ ಸಂಚರಿಸುವ ದಕ್ಕೆ ಅನುಕೂಲತೆಯು ಚನ್ನಾಗಿತ್ತೆಂದು ತೋರುವದು, ಇಲ್ಲದಿದ್ದರೆ ಪಾಟಲೀಪುತ್ರ ದಿಂದ ದೂರದಲ್ಲಿರುವ ಉಜ್ಜಯಿನಿ ತಕ್ಷಶಿಲೆ ಮೊದಲಾದ ಪಟ್ಟಣಗಳಲ್ಲಿ ರಾಜ್ಯಭಾರವು ಸರಿಯಾಗಿ ಸಾಗುತ್ತಿರಲಿಲ್ಲ, ದೇಶದಲ್ಲಿ ಎಷ್ಟೋ ಪ್ರಶಸ್ತ ರಾಜಮಾರ್ಗಗಳಿದ್ದವು; ಜನರು ನೌಕಾಮಾರ್ಗದಿಂದಲೂ, ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಂಚಾರ ಮಾಡುತ್ತಿದ್ದರು. ಮೆಗಾಸ್ಟಿನೀಸನು ಪಾಟಲೀಪುತ್ರದಿಂದ ಭಾರತದ ಉತ್ತರ ಪಶ್ಚಿಮ ಮೇರೆಗಳವರೆಗೆ ವಿಸ್ತಾರವಾದ ರಾಜಮಾರ್ಗಗಳಿದ್ದವೆಂದು ಉಲ್ಲೇಖಿಸಿರು ವನು, ಈ ಎಲ್ಲ ಮಾರ್ಗಗಳಲ್ಲಿ ೧೯ ಮೈಲಿಗೆ ಒಂದರಂತೆ ಅಂತರವನ್ನು ತೋರಿಸುವ ಕಂಬಗಳಿದ್ದವು. ದಾರಿಕಾರರಿಗೋಸ್ಕರ ಪ್ರತಿಯೊಂದು ಕಂಬದ ಬಳಿಯಲ್ಲಿ ಒಂದೊಂದು ಬಾವಿಯಿತ್ತು, ಮಾರ್ಗದಲ್ಲಿ ವಿಶ್ರಾಂತಿಗೋಸ್ಕರ ಧರ್ಮಶಾಲೆಗಳಿದ್ದವು, ಮಾರ್ಗದ ಬದಿಗಳಲ್ಲಿ ಫಲಪುಷ್ಪಗಳಿಂದ ಕಂಗೊಳಿಸುವ ಸಾಲುಮರಗಳಿದ್ದವು. ಗ್ರೀಕ ಐತಿಹಾಸಿಕರು ಬರೆದ ವಿವರಣೆಯಿಂದಲೂ, ಚಾಣಕ್ಯ ಕೃತ ಅರ್ಥ ಶಾ ಪ್ರದಿಂದಲೂ ಮೌರ್ಯರಾಜರ ರಾಜ್ಯ ಕಾರಭಾರಪದ್ದತಿಯು ಚೆನ್ನಾಗಿ ಗೊತ್ತಾಗು ವದು. ಉಸಕ್ರಮಣಿಕೆಯಲ್ಲಿ ಈ ವಿಷಯವು ಸವಿಸ್ತರವಾಗಿ ವಿವರಿಸಲ್ಪಟ್ಟಿರುವದು.