ಪುಟ:ಅಶೋಕ.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈಳಂ ಆಶೋಕ ಅಥವಾ ಪ್ರಿಯದರ್ಶಿ, ••••• ಆಯುಕ್ತರೂ ಅನುಸಂಯಯನದಲ್ಲಿ ರಾಜಕಾರ್ಯಗಳನ್ನು ಪ್ರತ್ಯಕ್ಷ ನೋಡಿ ನೆರೆದ ಪ್ರಜೆಗಳಿಗೆ ಧರ್ಮವಿಧಿಗಳ ವಿಷಯವಾಗಿ ಉಪದೇಶ ಮಾಡುತ್ತಿದ್ದರು. ಅಯುಕ್ತರ ಕೆಲಸವು ಬಹುತರ ಶಾಸನಕಾರ್ಯವೇ ಆಗಿತ್ತು. ಇವರು ಸಾಮ್ರಾ ಜ್ಯದ ಎಲ್ಲ ಕಡೆಗಳಲ್ಲಿ ಶಾಂತತೆಯನ್ನು ಕಾಯುವದರಲ್ಲಿ ತೊಡಗಿರುತ್ತಿದ್ದರು. ಮಹಾ ಮಾತ್ರರ ಕೈಯಲ್ಲಿ ಒಂದೊಂದು ಪ್ರದೇಶದ ಶಾಸನಕಾರ್ಯವು ಅರ್ಪಿಸಲ್ಪಟ್ಟಿತ್ತು. ಇವರು ಅಪರಾಧಿ ನಿರಪರಾಧಿಗಳ ವಿಚಾರವನ್ನು ಮಾಡಿ ಕಾಯದೆಗನುಸರಿಸಿ ಶಿಕ್ಷ ಯನ್ನು ವಿಧಿಸುತ್ತಿದ್ದರು. ಇಂಗ್ಲಿಷ ಐತಿಹಾಸಿಕರು ರಾಜೂಕರು ಕಮಿಶನರರಂತೆಯೂ ಪ್ರಾದೇಶಿಕರು ಡಿಸ್ಟಿಕ ಆಫೀಸರರಂತೆಯೂ ಇದ್ದರೆಂದು ಹೇಳುವರು. ಈ ಮತವು ಹೆಚ್ಚು ಸರಿಯಾಗಿಲ್ಲದಿದ್ದರೂ ಅವರ ಮತ್ತು ಇವರ ಕೆಲಸಗಳಲ್ಲಿ ಬಹುಮಟ್ಟಿಗೆ ಹೋಲಿಕೆ ಇತ್ತೆಂದು ತೋರುವದು, ಈ ಎಲ್ಲ ಹೆಚ್ಚಿನ ಕಾಮದಾರರ ಹೊರತು ಅಶೋ ಕನು ತನ್ನ ಆಳಿಕೆಯ ೧೪ನೆಯ ವರ್ಷ ಧರ್ಮ ಮಹಾಮಾತ್ರ ಎಂಬ ಹೊಸ ಕಾಮದಾ ರನ ಸ್ಥಳವನ್ನುಂಟುಮಾಡಿದನು, ಯೋನ, ಗಾಂಧಾರ, ಕಾಂಭೋಜಿ, ರಾಷ್ಟ್ರಕ, ಪಿಟೇನಿಕ ದೇಶಗಳಲ್ಲಿಯೂ, ಮೇರೆಯಲ್ಲಿರುವ ಬೇರೆ ಬೇರೆ ಜಾತಿಗಳಲ್ಲಿಯೂ ಇವರು ಧರ್ಮಪ್ರಸಾರ ಮಾಡುವರು. ಎಲ್ಲ ಕಡೆಗೆ ಧರ್ಮವಿಧಿಗಳು ನೆಲೆಗೊಳ್ಳುವಂತೆಯೂ ಧರ್ಮವಿಧಿಗಳಿಗನುಸಾರವಾದ ಉಪದೇಶಗಳನ್ನು ಜನರು ಪಾಲಿಸುವಂತೆಯೂ ಧರ್ಮ ಮಹಾಮಾತ್ರರು ಯಾವಾಗಲೂ ನೋಡಿಕೊಳ್ಳುತ್ತಿದ್ದರು. ನ್ಯಾಯಕೋರ್ಟುಗಳಲ್ಲಿ ಯಾವನೊಬ್ಬ ಮುದುಕನು ಇಲ್ಲವೆ ನಿರಪರಾಧಿಯು ಇಲ್ಲವೆ ಬಹು ಕುಟುಂಬಕನು ಅನ್ಯಾಯವಾಗಿ ಶಿಕ್ಷೆಯನ್ನು ಹೊಂದುತ್ತಾನೆಂಬದು ಈ ಧರ್ಮಮಹಾ ಮಾತ್ರರಿಗೆ ತಿಳಿದರೆ ಕೂಡಲೆ ಅವರು ಆ ಜನರನ್ನು ಬಿಡುಗಡೆ ಮಾಡುತ್ತಿದರು, ಜಾತಿಧರ್ಮಗಳ ಭೇದವಿಲ್ಲದೆ ಎಲ್ಲ ಜನರ ಉನ್ನತಿಗಾಗಿ ಅಶೋಕನು ಅವಲಂಬಿಸಿದ ಧರ್ಮವನ್ನು ಇವರು ಪ್ರಸಾರ ಮಾಡುತ್ತಿದ್ದರು. ಧರ್ಮ ಮಹಾಮಾತ್ರರ ತರುವಾಯ ಧರ್ಮಯು ಕರೆಂಬ ಕಾಮದಾರರು ಇದ್ದರು. ಇವರು ಧರ್ಮಮಹಾಮಾತ್ರರಿಗೆ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡುವರು, ಹೆಂಗಸರು ಕೂಡ ಧರ್ಮ ಮಹಾಮಾತ್ರರ ಸ್ಥಳದಲ್ಲಿ ನಿಯಮಿ ಸಲ್ಪಡುತ್ತಿದ್ದರು, ಇವರು ಸ್ತ್ರೀಯರ ಉನ್ನತಿಗಾಗಿ ಪ್ರಯತ್ನಿ ಸುವರು. 'ಸಾಮ್ರಾಜ್ಯದಲ್ಲಿ ರುವ ಎಲ್ಲ ಸಾಗಾದ ಭೂಮಿಗಳು ರಾಜಸಂಪತ್ತಿಯೆಂದು ಎಣಿಸಲ್ಪಡುತ್ತಿದ್ದವು. ಕಂದಾಯದ ಮೇಲಿನ ಕಾಮದಾರರು ನಿಯಮಿತವಾದ ಕಂದಾಯವನ್ನೇ ಎತ್ತುವರು. ಪರದೇಶದ ಐತಿಹಾಸಿಕರಲ್ಲಿ ಕೆಲವರು ಬೆಳೆದ ಧಾನ್ಯದ ೪ನೆಯ ಅಂಶವನ್ನು ಎತ್ತುತ್ತಿ

  • ಪ್ರತಿ ಐದು ವರ್ಷಗಳಿಗೊಮ್ಮೆ ಕಾನದಾರರು ಕೈಕೆಳಗಿನ ಅಧಿಕಾರಿಗಳ ಮತ್ತು ಪ್ರಜೆಗಳ ಸ್ಥಿತಿ ಗತಿಗಳನ್ನು ತಿಳಿದುಕೊಳ್ಳುವದಕ್ಕೆ ದೇಶದಲ್ಲಿ ಸಂಚರಿಸುತ್ತಿದ್ದರು. ಈ ಸಂಚಾರಕ್ಕೆ ಅನುಸಂಯಯನ

ಎಂದು ಹೆಸರು,