ಪುಟ:ಅಶೋಕ.djvu/೧೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ. ೧೪ vvvvvvvv/ ದ್ದರೆಂದೂ, ಕೆಲವರು ೬ನೆಯ ಭಾಗವನ್ನು ಎತ್ತುತ್ತಿದ್ದರೆಂದೂ ಹೇಳುವರು. ಆದರೆ ಪರದೇಶದವರ ಈ ವಿಚಾರವು ಸಂಪೂರ್ಣ ನಿಜವೆಂದು ಹೇಳಲಾಗುವದಿಲ್ಲ. ನೀವಾ ರದ ೬ನೆಯ ಅಂಶವು ರಾಜಕರವೆಂದು ಶಾಸ್ತ್ರಗಳಲ್ಲಿ ಹೇಳಿದೆ. ಮೌರ್ಯರಾಜರು ಈ ಕಂದಾಯದ ಪ್ರಮಾಣವನ್ನು ಹೆಚ್ಚಿಸಿದ್ದರೆಂಬದಕ್ಕೆ ಆಧಾರವೇನೂ ಇಲ್ಲ. ಧಾನ್ಯದ ೬ನೆಯ ಭಾಗವೇ ಎತ್ತಲ್ಪಡುತ್ತಿತ್ತೆಂಬದು ಸಂಭವನೀಯವಾಗಿರುವದು, ಕೃಷಿಕರ ಲ್ಲದೆ, ಬಡಿಗರು, ಕಯ್ಯಾರರು, ಕಥೆಗಾರರು ಕರವನ್ನು ಕೊಡುತ್ತಿದ್ದರೆಂಬದಕ್ಕೆ ಪ್ರಮಾ ಣಗಳುಂಟು, ಮೇಲೆ ಹೇಳಿದ ಕಾಮದಾರರಲ್ಲದೆ ಪ್ರತಿವೇದಕರೆಂಬ ಮೇಲ್ಲರದ ಕಾಮದಾರರು ಇದ್ದರು. ಮೆಗಾಸೈನೀಸನು ಹೇಳುವದೇನಂದರೆ ಈ ಪ್ರತಿವೇದಕರು ರಾಜ್ಯದೊಳಗೆ ನಡೆಯುವ ಎಲ್ಲ ವರ್ತಮಾನಗಳನ್ನು ಅರಸನ ಬಳಿಯಲ್ಲಿ ಗುಪ್ತವಾಗಿ ಹೇಳುತ್ತಿದ್ದರು. ಇವರಲ್ಲಿ ಎರಡು ವರ್ಗಗಳಿದ್ದವು, ಒಂದು ವರ್ಗದವರು ವೇಶ್ಯಾಸ್ತ್ರೀ ಯರ ಸಹಾಯದಿಂದ ಪಟ್ಟಣದ ಗುಪ್ತ ಸಂಗತಿಗಳನ್ನು ಸಂಗ್ರಹಿಸಿ ಅರಸನಿಗೆ ತಿಳಿಸುತ್ತಿ ದ್ದರು, ಇನ್ನೊಂದು ವರ್ಗದವರು ದಂಡಿನ ಪಾಳಯಗಳಲ್ಲಿ ತಿರುಗಾಡಿ ಗಣಿಕಾಸ್ತ್ರೀ ಯರ ಸಹಾಯದಿಂದ ಯುದ್ದದ ಒಳತಂತ್ರಗಳನ್ನು ಮತ್ತು ಸೈನ್ಯದೊಳಗಿನ ಕಾಮದಾ ರರ ಮತ್ತು ಬೇರೆ ಕಾಮದಾರರ ಕಾರ್ಯಗಳನ್ನು ಗುಪ್ತವಾಗಿ ಅರಸನಿಗೆ ತಿಳಿ ಸುತ್ತಿದ್ದರು. ನಿಪುಣರೂ ನಂಬಿಗೆಯವರೂ ಆದ ಜನರೇ ಪ್ರತಿವೇದಕರಾಗಿ ನಿಯ ಮಿಸಲ್ಪಡುತ್ತಿದ್ದರು. ಈ ಎಲ್ಲ ಕಾಮದಾರರ ಹೊರತು ಹಲವು ಆಲೋಚನಾ ಸಭೆ ಗಳು ರಾಜ್ಯ ಶಾಸನದಲ್ಲಿ ಬಹಳ ಮಟ್ಟಿಗೆ ದಕ್ಷತೆಯನ್ನು ತೋರಿಸುತ್ತಿದ್ದವು. ಯುದ್ದ ವಿಭಾಗದಲ್ಲಿ ೬ ವರ್ಗಗಳಿದ್ದವು ಪ್ರತಿಯೊಂದು ವರ್ಗದಲ್ಲಿ ಐದೈದುಜನ ಸಭ್ಯರು ಇರುತ್ತಿದ್ದರು, ನೌಕಾಯುದ್ದ ವಿಭಾಗ, ನಾಮಗ್ರೀವಿಭಾಗ, ಪಾದಾತಿಕವಿ ಭಾಗ, ಅಶ್ವಾರೋಹಿ, ರಥಿಕ, ಗಜ ಎಂಬವು ೬ ವರ್ಗಗಳು, ಈ ೬ ವರ್ಗಗಳಿಂದ ಯುದ್ಧದ ಕಾರ್ಯಗಳು ಸಾಗಿಸಲ್ಪಡುತ್ತಿದ್ದವು. ರಾಜಧಾನಿಯಲ್ಲಿ ಕಾರಭಾರವನ್ನು ಸಾಗಿಸುವದಕ್ಕೂ ಇದೇ ಮೇರೆಗೆ ನಿಕಾಯಗಳಿದ್ದವು, ವಾಣಿಜ್ಯಶಿಲ್ಪನಿಕಾಯವು ರಾಜ ಧಾನಿಯ ವಾಣಿಜ್ಯಶಿಲ್ಪಗಳ ಮೇಲ್ವಿಚಾರಣೆಯನ್ನು ಮಾಡಿ ವಣಿಜರಿಗ, ಶಿಲ್ಪಿಗ ಳಿಗೂ ಹಲವು ಬಗೆಯಿಂದ ಉತ್ಸಾಹಕೊಡುತ್ತಿತ್ತು, ಆತಿಥ್ಯ ನಿಕಾಯವು ಪರದೇಶ ದಿಂದ ಬಂದವರಿಗೆ ಯೋಗ್ಯವಾದ ಸತ್ಕಾರ ಮರ್ಯಾದೆಗಳನ್ನು ಮಾಡಿ ಅವರಿಗೆ ಬೇಕಾದ ಸಹಾಯಮಾಡುತ್ತಿದ್ದರು. ಪರದೇಶದವರು ಬೇನೆಬಿದ್ದರೆ ಔಷಧೋಪ ಚಾರವು ಸರಿಯಾಗಿ ಮಾಡಲ್ಪಡುತ್ತಿತ್ತು. ಪರದೇಶದ ಮನುಷ್ಯನು ಮೃತನಾದರೆ ಅವನ ಆಸ್ತಿಯು ಅವನ ಉತ್ತರಾಧಿಕಾರಿಗೆ ಕೊಡಲ್ಪಡುತ್ತಿತ್ತು, ಯಾವನೊಬ್ಬ ಪರ ದೇಶದ ಅಭ್ಯಾಗತನು ಸಾಮ್ರಾಜ್ಯದೊಳಗಿನ ಯಾವದೊಂದು ರಮ್ಯವಾದ ಪ್ರದೇಶ ವನ್ನು ಇಲ್ಲವೆ ದೇಶವನ್ನು ನೋಡಲಪೇಕ್ಷಿಸಿದರೆ ಅವನೊಡನೆ ರಾಜಸೇವಕರು