ಪುಟ:ಅಶೋಕ.djvu/೧೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಶೋಕ ಅಥವಾ ಪ್ರಿಯದರ್ಶಿ, y 2, - - - - - → ಇದು ಮಗಧದ ಶಿಕ್ಷಣದ ಮುಖ್ಯ ಕೇಂದ್ರಸ್ಥಲವು, ಇಲ್ಲವೆ ವಿಶ್ವವಿದ್ಯಾಲಯವಾಗಿತ್ತು. ಈ ನರೇಂದ್ರವೆಡಾರವು ರಾಜಗೃಹದ ಬಳಿಯಲ್ಲಿತ್ತು, ಈ ವಿಹಾರದ ಹೆಸರಿನ ಉತ್ಪ ತಿಯ ವಿಷಯವಾಗಿ, ಹಲವು ಕಥೆಗಳು ಪ್ರಚಲಿತವಾಗಿವೆ. ಈ ವಿಹಾರದ ದಕ್ಷಿಣದಲ್ಲಿ ಒಂದು ಮಾವಿನ ತೋಪು ಇತ್ತು. ಆ ತೋಪಿನಲ್ಲಿರುವ ಒಂದು ಪುಷ್ಕರಿಣಿಯಲ್ಲಿ ನಾಲಂದಾ ಎಂಬ ಒಂದು ನಾಗವು ವಾಸವಾಗಿತ್ತು. ಆ ನಾಗನ ಹೆಸರಿನಿಂದ ಅಲ್ಲಿಯ ವಿಹಾರವು ನಾಲಂದಾ ವಿಹಾರವೆಂಬ ಹೆಸರನ್ನು ಹೊಂದಿತೆಂದು ಒಂದು ಕಡೆಗೆ ಹೇಳಿದೆ. ಮತ್ತೆ ಕೆಲವರು ಹೇಳುವದೇನಂದರೆ, ಬುದ್ಧದೇವನು ತನ್ನ ಪೂರ್ವದ ಯಾವದೊ ಒಂದು ಜನ್ಮದಲ್ಲಿ ಬೋಧಿಸತ್ವನಾಗಿ ಈ ಸ್ಥಾನದಲ್ಲಿ ಹುಟ್ಟಿದನು. ಅವನು ಒಂದು ವಿಶಾಲವಾದ ರಾಜ್ಯದ ರಾಜನಾಗಿದ್ದು, ಮುಂದಿನ ಕಾಲದಲ್ಲಿ ನಾಲಂದಾ ವಿಹಾರವು ಸ್ಥಾಪಿತವಾಗಿರುವ ಸ್ಥಳದಲ್ಲಿ ಆತನು ರಾಜಧಾನಿಯನ್ನು ಸ್ಥಾಪಿಸಿ ರಾಜ್ಯವಾಳಿದನು. ಪ್ರಾಣಿಗಳ ದುಃಖದಿಂದ ಆತನಿಗೆ ವ್ಯಥೆಯಾಗುತ್ತಿತ್ತು. ಆತನು ಯಾವಾಗಲೂ ದಾನ ಮಾಡುತ್ತಿದ್ದನು. ಈ ಕಥೆಯ ಸ್ಮರಣಾರ್ಥವಾಗಿ ಈ ವಿಹಾರವು ನಾಲಂದಾ ವಿಹಾರ ವೆಂದು ಕರೆಯಲ್ಪಟ್ಟಿತು. ವಿಹಾರವು ಸ್ಥಾಪಿತವಾಗುವದಕ್ಕೆ ಮುಂಚೆ ಈ ಸ್ಥಳದಲ್ಲಿ ಒಂದು ಸುಂದರವಾದ ಮಾವಿನ ತೋಪು ಇತ್ತು, ಒಂದು ಕಾಲದಲ್ಲಿ ೫೦೦ ಜನ ವ್ಯಾ ಪಾರಿಗಳು ಬಹಳ ಬೆಲೆ ಕೊಟ್ಟು ಅದನ್ನು ಕೊಂಡು ಬುದ್ದದೇವನಿಗೆ ಕೊಟ್ಟಿದ್ದರು. ಗೌತಮಬುದ್ಧನು ೩ ತಿಂಗಳು ಅಲ್ಲಿ ಇದ್ದು ಜನಸಮಾಜಕ್ಕೆ ಉಪದೇಶ ಮಾಡಿದನು. ಬುದ್ಧದೇವನ ಪರಿನಿರ್ವಾಣವಾದ ಬಳಿಕ ತ್ರಿರತ್ನದ ಮೇಲೆ ಭಕ್ತಿಯುಳ್ಳ ಶಕ್ರಾದಿತ್ಯ ನೆಂಬ ಒಬ್ಬ ಅರಸನು ದೈವಯೋಗದಿಂದ ಈ ಸ್ಥಾನದ ಮಹಾತ್ಮವನ್ನು ತಿಳಿದು ಅಲ್ಲಿ ಒಂದು ವಿಹಾರವನ್ನು ಕಟ್ಟಿಸಿದನು. ಹಲವು ಜನ ಭವಿಷ್ಯವಾದಿಗಳು ಈ ಸ್ಥಾನದ ಭವಿಷ್ಯಕಾಲದ ಗೌರವವನ್ನು ವರ್ಣಿಸಿದ್ದರು. ಶಕ್ರಾದಿತ್ಯನ ತರುವಾಯ ಬುದ್ಧಗುಪ್ತ, ತಥಾಗತಗುಷ್ಯ, ಬಾಲಾದಿತ್ಯ, ವಜ್ರ ಎಂಬ ರಾಜರು ಮುಂದೆ ಮುಂದೆ ಈ ವಿಹಾರಕ್ಕೆ ಹೊಂದಿ ಮತ್ತೆ ಕೆಲವು ವಿಚಾರಗಳನ್ನು ಕಟ್ಟಿಸಿದ್ದರು. ಆ ಬಳಿಕ ಮಧ್ಯ ಹಿಂದುಸ್ಥಾನದ. ಒಬ್ಬ ಅರಸನು ಈ ಎಲ್ಲ ವಿಹಾರಗಳ ಸುತ್ತಲು ಎತ್ತರವಾದ ಗೋಡೆಯನ್ನು ಕಟ್ಟಿಸಿ. ದನು, ಅದರಲ್ಲಿ ಒಳಗೆ ಹೋಗುವದಕ್ಕೆ ಒಂದು ಬಾಗಿಲು ಇತ್ತು, ಮುಂದಿನ ಅರಸರು ಇದರ ಉತ್ಕರ್ಷಕ್ಕಾಗಿ ಸಹಾಯ ಮಾಡುತ್ತ ಬಂದರು. ಹುಯನ್ತ್ಯಾಂಗನು ಭರತ ಖಂಡದ ಪ್ರವಾಸದಕಾಲಕ್ಕೆ ೧೧ ತಿಂಗಳು ಈ ವಿಹಾರದಲ್ಲಿ ವಾಸಮಾಡಿದ್ದನು, ಈ ದೀರ್ಘಕಾಲದಲ್ಲಿ ಆತನು ಅಲ್ಲಿ ಸಂಸ್ಕೃತ ಶಾಸ್ತ್ರಗಳ ಅಧ್ಯಯನ ಮಾಡುತ್ತಿದ್ದನು. ಆತನು ಅಲ್ಲಿ ಇರುವಾಗ ಸಾವಿರಾರು ಜನ ಭಿಕ್ಷುಗಳು ಅಲ್ಲಿ ವಾಸಮಾಡುತ್ತಿದ್ದರು. ಇವರು ದೂರದೂರದ ದೇಶಗಳಿಂದ ಅಲ್ಲಿಗೆ ಶಿಕ್ಷಣಕ್ಕಾಗಿ ಬಂದಿದ್ದರು. ನಾಲಂದಾ ವಿಹಾರದ ವಿದ್ಯಾರ್ಥಿಗಳ ಸ್ವಭಾವವು ಸರಲವೂ, ಪವಿತ್ರವೂ ಆಗಿರುತ್ತಿತ್ತು, ಹಗಲಿರುಳು ಅಲ್ಲಿ ಹಲವು ಶಾಸ್ತ್ರಗಳ ಆಲೋಚನೆ ನಡೆಯುತ್ತಿತ್ತು, ಹುಯೆನ್‌ತ್ಸಾಂಗನ ಜೀವನಚರಿ 19,